ರಷ್ಯಾದಿಂದ ತೈಲ ಖರೀದಿಸದಂತೆ ಭಾರತಕ್ಕೆ ನಾವು ಯಾವುದೇ ಎಚ್ಚರಿಕೆ ನೀಡಿಲ್ಲ. ಸ್ವತಂತ್ರ ನಿರ್ಧಾರ ಕೈಗೊಳ್ಳುವ ಹಕ್ಕು ಅವರಿಗಿದೆ ಎಂದು ಅಮೆರಿಕ ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.
ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಷ್ಯಾದಿಂದ ತೈಲ ಖರೀದಿಸದಂತೆ ನಾವು ಯಾವ ರಾಷ್ಟ್ರಕ್ಕೂ ಒತ್ತಡ ತಂತ್ರವನ್ನೂ ಹೇರಿಲ್ಲ.
ಇದಕ್ಕೆ ಭಾರತವೂ ಹೊರತಲ್ಲ. ಖರೀದಿ ನಿರ್ಧಾರ ಅದರ ಸ್ವತಂತ್ರ ಆಯ್ಕೆ. ಈ ವಿಚಾರದಲ್ಲಿ ಗೊಂದಲ ಬೇಡ ಎಂದು ಸಷ್ಟಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸದಂತೆ ನಾವು ಭಾರತಕ್ಕೆ ಯಾವ ರಾಷ್ಟ್ರಕ್ಕೂ ಎಚ್ಚರಿಕೆ ಕೊಟ್ಟಿಲ್ಲ.ಅಲ್ಲದೆ, ದಿಲೀಪ್ ಸಿಂಗ್ ಅವರ ಮಾತನ್ನು ಎಚ್ಚರಿಕೆ ಗಂಟೆ ಎಂದು ವ್ಯಾಖ್ಯಾನಿಸಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಯಾವ ರಾಷ್ಟ್ರವೂ ರಷ್ಯಾದಿಂದ ತೈಲ ಖರೀದಿಗೆ ಮುಂದಾಗಬಾರದು. ಮುಂದಾದರೆ ರಷ್ಯಾ ಮೇಲೆ ಹೇರಿರುವ ನಿರ್ಬಂಧಗಳ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಎಚ್ಚರಿಕೆ ನೀಡಿದೆ.