Tuesday, November 26, 2024
Tuesday, November 26, 2024

ಮನೆಗಳಿಗೆ ನೀರಿನ ಪೂರೈಕೆ ಶೇ16.75 ರಿಂದ ಶೇ 48.62 ಏರಿಕೆಯಾಗಿದೆ- ಮೋದೀಜಿ

Date:

ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಜಲಜೀವನ ಮಿಷನ್‌ ಯೋಜನೆಯು ದೇಶದ ಸಕಲ ಅಭಿವೃದ್ಧಿಗೆ ಉತ್ತೇಜಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

2019ರಲ್ಲಿ ಜಲ ಜೀವನ ಯೋಜನೆ ಆರಂಭವಾಗುವುದಕ್ಕೂ ಮೊದಲು ದೇಶದಲ್ಲಿ ಕೇವಲ ಶೇ.16.75 ದಷ್ಟು ನೀರಿನ ಪೂರೈಕೆ ಯಾಗುತ್ತಿತ್ತು. ಯೋಜನೆ ಆರಂಭವಾದ ಎರಡು ವರ್ಷಗಳಲ್ಲಿ ಆ ಪ್ರಮಾಣ ಶೇ.48.62ಕ್ಕೆ ಏರಿಕೆಯಾಗಿದೆ. 107 ಜಿಲ್ಲೆಗಳ 1.5 ಲಕ್ಷ ಗ್ರಾಮಗಳಿಗೆ ಸಹಾಯವಾಗಿದೆ ಎಂದು ಹೇಳಿದ್ದಾರೆ.

ಇದುವರೆಗೆ 17.39 ಲಕ್ಷ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿನ ನಿರ್ವಹಣೆಗಾಗಿಯೇ 4.82 ಲಕ್ಷ ಜಲ ಸಮಿತಿ ರಚಿಸಲಾಗಿದೆ. ನೀರಿನ ಗುಣಮಟ್ಟ ಪರೀಕ್ಷೆ ಗಾಗಿ 9.69 ಲಕ್ಷ ಮಹಿಳೆಯರಿಗೆ ತರ ಬೇತಿ ನೀಡಲಾಗಿದೆ. 4 ಲಕ್ಷಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Constitution Day ಸಂವಿಧಾನದ ಸಂದೇಶವೇ ನಮ್ಮ ಸರ್ಕಾರದ ಸಿದ್ಧಾಂತ- ಸಿದ್ಧರಾಮಯ್ಯ

Constitution Day ಸಂವಿಧಾನ ದಿನಾಚರಣೆಯ ವಿಶೇಷವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು...

Shivamogga-Bhadravathi Urban Development Authority ಊರುಗಡೂರು ನಿವೇಶನ ಹಂಚಿಕೆ. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ಡಿ.5 ಅಂತಿಮ ದಿನಾಂಕ

Shivamogga-Bhadravathi Urban Development Authority ಶಿವಮೊಗ್ಗ -ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ...

Shivamogga City Corporation ಒಂದು ತಿಂಗಳಲ್ಲಿ ಏಕರೀತಿಯ ಕರವಸೂಲಾತಿ ಹೊಸ ಕಾಯ್ದೆ ಜಾರಿ- ಸಚಿವ ರಹೀಂ ಖಾನ್

Shivamogga City Corporation ಸ್ಥಳೀಯ ಸಂಸ್ಥೆಗಳಿಗೆ ನಿಯಮಾನುಸಾರವಾಗಿ ಸಾರ್ವಜನಿಕರಿಂದ ಪಾವತಿಯಾಗಬೇಕಾದ ಕರವಸೂಲಿ...