ಯುಪಿಐ ಸೌಲಭ್ಯ ಬಳಸಿಕೊಂಡು ಎಲ್ಲಾ ಬ್ಯಾಂಕುಗಳ ಎಟಿಎಂಗಳಲ್ಲಿ ಕಾರ್ಡು ಬಳಸದೆ ನಗದು ಹಿಂಪಡೆಯುವ ವ್ಯವಸ್ಥೆಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇನ್ನೇನು ಕೆಲವೇ ದಿನಗಳಲ್ಲಿ ಜಾರಿಗೆ ತರಲಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಮಾಹಿತಿ ನೀಡಿದ್ದಾರೆ.
ಎಟಿಎಂ ಮೂಲಕ ಕಾರ್ಡ್ ರಹಿತವಾಗಿ ನಗದು ಹಿಂಪಡೆಯುವ ಸೌಲಭ್ಯವು ಕೆಲವು ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿದೆ. ಯುಪಿಐ ಬಳಸಿಕೊಂಡು ಎಲ್ಲಾ ಬ್ಯಾಂಕ್‌ಗಳು ಹಾಗೂ ಎಟಿಎಂ ನೆಟ್‌ವರ್ಕ್‌ಗಳಲ್ಲಿ ಕಾರ್ಡುರಹಿತವಾಗಿ ಹಣ ಹಿಂಪಡೆಯುವ ಸೌಲಭ್ಯಗಳನ್ನು ಲಭ್ಯವಾಗುವಂತೆ ಮಾಡಲು ಪ್ರಸ್ತುತ ಪ್ರಸ್ತಾಪಿಸಲಾಗಿದೆ. ಈ ವ್ಯವಸ್ಥೆ ವಹಿವಾಟಿನ ಸುಲಭತೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ಅಂತಹ ವಹಿವಾಟುಗಳಿಗೆ ಕಾರ್ಡ್‌ಗಳ ಅಗತ್ಯವಿಲ್ಲದಿರುವುದು ಕಾರ್ಡ್ ಸ್ಕಿಮ್ಮಿಂಗ್, ಕಾರ್ಡ್ ಕ್ಲೋನಿಂಗ್ ಮುಂತಾದ ವಂಚನೆಗಳನ್ನು ಕಡಿಮೆ ಮಾಡುತ್ತದೆ.ಈ ವಿಷಯವನ್ನು ಮುಂಬೈನ ಸುದ್ದಿಗೋಷ್ಠಿಯಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ತಿಳಿಸಿದ್ದಾರೆ.
ಮುಂಬೈಯಲ್ಲಿ ಹಣಕಾಸು ನೀತಿ ಪರಾಮರ್ಶೆಯಲ್ಲಿ ವಿತ್ತೀಯ ನೀತಿ ಪ್ರಕಟಿಸುವ ಸಂದರ್ಭದಲ್ಲಿ ಈ ಬಗ್ಗೆ ಮಾತನಾಡಿರುವ ಆರ್ ಬಿಐ ಗವರ್ನರ್ ವಿವರಣೆ ನೀಡಿದ್ದಾರೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ ಬಳಕೆಯ ಮೂಲಕ ಗ್ರಾಹಕರ ದೃಢೀಕರಣವನ್ನು ಸಕ್ರಿಯಗೊಳಿಸಲು ಪ್ರಸ್ತಾಪಿಸಲಾಗಿದೆ. ಆದರೆ ಅಂತಹ ವಹಿವಾಟುಗಳು ಎಟಿಎಂ ನೆಟ್‌ವರ್ಕ್‌ಗಳ ಮೂಲಕ ನಡೆಯುತ್ತದೆ ಎಂದು ಅಭಿವೃದ್ಧಿ ಮತ್ತು ನಿಯಂತ್ರಣ ನೀತಿಗಳ ಹೇಳಿಕೆ ತಿಳಿಸಿದೆ.
ಎನ್‌ಪಿಸಿಐ, ಎಟಿಎಂ ನೆಟ್‌ವರ್ಕ್‌ಗಳು ಹಾಗೂ ಬ್ಯಾಂಕ್‌ಗಳಿಗೆ ಶೀಘ್ರದಲ್ಲೇ ಪ್ರತ್ಯೇಕ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಅದು ಹೇಳಿದೆ.
ಭಾರತ್ ಬಿಲ್ ಪಾವತಿ ವ್ಯವಸ್ಥೆಗೆ ಸಂಬಂಧಿಸಿದಂತೆ, ಬಿಲ್ ಪಾವತಿಗೆ ಇದು ಇಂಟರ್‌ಆಪರೇಬಲ್ ಪ್ಲಾಟ್‌ಫಾರ್ಮ್ ಆಗಿದೆ. ವರ್ಷಗಳಲ್ಲಿ ಬಿಲ್ ಪಾವತಿ ಮತ್ತು ಬಿಲ್ಲರ್‌ಗಳ ಪ್ರಮಾಣದಲ್ಲಿ ಹೆಚ್ಚಳವನ್ನು ಕಂಡಿದೆ.
ಬಿಬಿಪಿಸಿ ಮೂಲಕ ಬಿಲ್ ಪಾವತಿಗಳನ್ನು ಮತ್ತಷ್ಟು ಸುಲಭಗೊಳಿಸಲು, ಮತ್ತು ಬಿಬಿಪಿಸಿನಲ್ಲಿ ಹೆಚ್ಚಿನ ಸಂಖ್ಯೆಯ ಬ್ಯಾಂಕೇತರ ಭಾರತ್ ಬಿಲ್ ಪಾವತಿ ಕಾರ್ಯಾಚರಣಾ ಘಟಕಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು, ಅಂತಹ ಘಟಕಗಳ ನಿವ್ವಳ ಮೌಲ್ಯದ ಅಗತ್ಯವನ್ನು 100 ಕೋಟಿಯಿಂದ ರೂಪಾಯಿಗಳಿಂದ 25 ಕೋಟಿ ರೂಪಾಯಿಗಳಿಗೆ ತಗ್ಗಿಸಲು ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುತ್ತದೆ ಎಂದು ಸಹ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.