ಭಾರತದ ಜೂನಿಯರ್ ಮಹಿಳೆಯರ ಹಾಕಿ ತಂಡ ಎಫ್ ಐ ಎಚ್ ಗೆಳೆಯರ ಹಾಕಿ ಜೂನಿಯರ್ ವಿಶ್ವಕಪ್ ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ.
2013ರಲ್ಲಿ ಎಫ್ ಐ ಎಚ್ ಜೂನಿಯರ್ ಮಹಿಳಾ ವಿಶ್ವಕಪ್ ನಲ್ಲಿ ಭಾರತದ ಮಹಿಳಾ ತಂಡ ಅಂತಿಮ ನಾಲ್ಕರ ಘಟ್ಟ ತಲುಪಿತ್ತು. ಕೊನೆಗೆ ಕಂಚಿನ ಪದಕದೊಂದಿಗೆ ಆಟ ಮುಗಿಸಿತು.
ಶುಕ್ರವಾರ ನಡೆದ ಕ್ವಾಟರ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ 3–0 ಗೋಲ್ ಗಳ ಅಂತರದಿಂದ ದಕ್ಷಿಣ ಕೊರಿಯಾ ವಿರುದ್ಧ ಜಯಗಳಿಸಿತು. ಭಾರತ ತಂಡದ ಪರ ಟೂರ್ನಿಯುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡುತ್ತಿರುವ ಮುಮ್ತಾಜ್ ಖಾನ್ (ಹನ್ನೊಂದನೇ ನಿಮಿಷ), ಲಾಲ್ರಿಂದಿಕಿ (ಐದನೇ ನಿಮಿಷ) ಸಂಗೀತ ಕುಮಾರಿ ( ಒಂದನೇ ನಿಮಿಷ) ತಲಾ ಒಂದೊಂದು ಗೋಲು ಬಾರಿಸಿ ಜಯದ ಕಡೆ ಮುಖ ಮಾಡಿದರು.
ಗೋಲ್ಕೀಪರ್ ಬಿಚು ದೇವಿ ಖಾರಿಬಾಮ್ ಸಹ ಅಮೋಘವಾದ ರಕ್ಷಣೆಯ ಆಟ ಪ್ರದರ್ಶಿಸಿ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆರಂಭದಿಂದಲೇ ಕೊರಿಯಾ ತಂಡದ ಮೇಲೆ ಒತ್ತಡ ಹೇರಿದ ಭಾರತೀಯ ಆಟಗಾರ್ತಿಯರು 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲ್ ಬಾರಿಸಿ ಮುನ್ನಡೆಯನ್ನು ಕಾಯ್ದುಕೊಂಡರು. ಇದಾದ ನಾಲ್ಕೇ ನಿಮಿಷ ಗಳಲ್ಲಿ ಲಾಲ್ರಿ೦ದಿಕಿ ಎರಡನೇ ಗೋಲ್ ಬಾರಿಸಿದರು. ಹೀಗಾಗಿ ಮೊದಲ ಕ್ವಾಟರ್ ಮುಕ್ತಾಯಗೊಳ್ಳುವುದು ತಂಡದ ಮುನ್ನಡೆ 2–0 ಗೇರಿತು. ಮೂರನೆಯ ಕ್ವಾಟರ್ ನಲ್ಲಿ ಮತ್ತೊಂದು ಗೋಲ್ ಬಾರಿಸಿದ ಭಾರತ ಕೊನೆಯವರೆಗೂ ಎದುರಾಳಿ ತಂಡಕ್ಕೆ ಗೋಲ್ ಬಾರಿಸಲು ಅವಕಾಶ ನೀಡದೆ ಗೆಲುವಿನ ದಡ ಸೇರಿತು