ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಈಗಾಗಲೇ ರಷ್ಯಾ ಹಾಗೂ ಯುನೈಟೆಡ್ ಸ್ಟೇಟ್ಸ್ ನಡುವಿನ ಜಿದ್ದಿಗೆ ಕಾರಣವಾಗಿದೆ.
ಇದರ ಮಧ್ಯೆ ಬುಧವಾರ ನಾಸಾದ ಗಗನಯಾತ್ರಿ ಮಾರ್ಕ್ ವಂಡೇ ಹೇ ತಮ್ಮ ಇಬ್ಬರು ರಷ್ಯನ್ ಸಹಪಾಠಿಗಳೊಂದಿಗೆ ಬಾಹ್ಯಾಕಾಶದಿಂದ ಭೂಮಿಗೆ ಇಳಿದಿದ್ದಾರೆ.
ಕಳೆದ 355 ದಿನಗಳಿಂದ ಬಾಹ್ಯಾಕಾಶದಲ್ಲಿ ಸಂಚರಿಸಿದ ನಾಸಾದ ಗಗನಯಾತ್ರಿ ಮಾರ್ಕ್ ವಂಡೆ ಹೇ ಬುಧವಾರ ಕಝಾಕಿಸ್ತಾನ್‌ನಲ್ಲಿ ತಮ್ಮಿಬ್ಬರು ರಷ್ಯಾದ ಸಹವರ್ತಿಗಳೊಂದಿಗೆ ಭೂಮಿಗೆ ಮರಳಿದ್ದಾರೆ.
ವಂಡೆ ಹೇ ಮತ್ತು ಅವರ ರಷ್ಯಾದ ಸಿಬ್ಬಂದಿಗಳಾದ ಆಂಟನ್ ಶ್ಕಾಪ್ಲೆರೋವ್ ಮತ್ತು ಪಯೋಟರ್ ಡುಬ್ರೊವ್ ಅವರು ರಷ್ಯಾದ ಬಾಹ್ಯಾಕಾಶ ನೌಕೆಯಲ್ಲಿ ಒಟ್ಟಿಗೆ ಹಾರಿದ್ದು, ರಷ್ಯಾದ ವಿಮಾನ ನಿಯಂತ್ರಕರಿಂದಲೇ ಮಾರ್ಗದರ್ಶನವನ್ನೂ ಪಡೆದುಕೊಂಡಿದ್ದರು.
ಲ್ಯಾಂಡಿಂಗ್ ಸೈಟ್‌ನಲ್ಲಿ, ವಂದೇ ಹೇ ಅವರನ್ನು ನಾಸಾ ಮತ್ತು ರಷ್ಯಾದ ಸಿಬ್ಬಂದಿ ಪಡೆ ಭೇಟಿಯಾಯಿತು. ಉಕ್ರೇನ್‌ನ ರಷ್ಯಾದ ಆಕ್ರಮಣ ಮತ್ತು ಮಾಸ್ಕೋ ಹಾಗೂ ಪಶ್ಚಿಮದ ರಾಷ್ಟ್ರಗಳ ನಡುವೆ ಉಂಟಾದ ಉದ್ವಿಗ್ನತೆಯ ಹೊರತಾಗಿಯೂ ಎರಡು ಬಾಹ್ಯಾಕಾಶ ಸಂಸ್ಥೆಗಳ ನಡುವಿನ ನಿಕಟ ಸಹಯೋಗ ಮುಂದುವರಿದಿದೆ.
ಬಾಹ್ಯಾಕಾಶದಿಂದ ಭೂಮಿಗೆ ಇಳಿದ ನಾಸಾದ ಗಗನಯಾತ್ರಿ ವಂದೇ ಹೇ ಅವರನ್ನು ನಾಸಾದ ವಿಮಾನ ತಂತ್ರಜ್ಞರು, ಸಾರ್ವಜನಿಕ ವ್ಯವಹಾರಗಳ ಅಧಿಕಾರಿಗಳು ಮತ್ತು ಗಗನಯಾತ್ರಿಗಳ ಕಚೇರಿ ಸಿಬ್ಬಂದಿ ಮತ್ತು ಬಾಹ್ಯಾಕಾಶ ನಿಲ್ದಾಣದ ನಿರ್ವಹಣೆಯ ಪ್ರತಿನಿಧಿಗಳು ಭವ್ಯವಾಗಿ ಸ್ವಾಗತಿಸಿದರು. ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಹಿಂದಿರುಗುವ ಅಮೆರಿಕನ್ ಗಗನಯಾತ್ರಿಗಳನ್ನು ಸ್ವಾಗತಿಸುವ ವಿಶಿಷ್ಟ ಪ್ರಕ್ರಿಯೆಯಿಂದ ಯಾವುದೇ ವಿಷಯಾಂತರ ಇರಬಾರದು ಎಂದು ನಾಸಾ ವಕ್ತಾರ ಗ್ಯಾರಿ ಜೋರ್ಡಾನ್ ಹೇಳಿದ್ದಾರೆ.
ಆರಂಭಿಕ ವೈದ್ಯಕೀಯ ತಪಾಸಣೆಯ ನಂತರ, ಗಗನಯಾತ್ರಿಗಳು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಮೊದಲು ಟೆಂಟ್‌ಗಳಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯುತ್ತಾರೆ. ಅಲ್ಲಿ ವಂದೇ ಹೇ ಮತ್ತು ಅವರ NASA ಸಹೋದ್ಯೋಗಿಗಳು ಗಲ್ಫ್‌ಸ್ಟ್ರೀಮ್ ಜೆಟ್‌ನಲ್ಲಿ ಹೋಗಿ ಟೇಕ್ ಆಫ್ ಆಗುತ್ತಾರೆ. ಕಝಾಕಿಸ್ತಾನ್‌ನಲ್ಲಿ ಲ್ಯಾಂಡ್ ಆದ ಸುಮಾರು 24 ಗಂಟೆಗಳ ನಂತರ, ವಂದೇ ಹೇ ಹೂಸ್ಟನ್‌ಗೆ ಹಿಂತಿರುಗಿದರು.