Saturday, December 6, 2025
Saturday, December 6, 2025

ಕೆಳದಿ ಇತಿಹಾಸ ಬಗ್ಗೆ ಅವಜ್ಞೆ ಬೇಡ. ನಮ್ಮ ಇತಿಹಾಸದ ಬಗ್ಗೆ ಹೆಮ್ಮಯಿರಲಿ- ಕೆಳದಿ ಗುಂಡಾಜೊಯಿಸ್

Date:

ಶಿವಮೊಗ್ಗ ಪೌರಾಣಿಕ,ಐತಿಹಾಸಿಕವಾಗಿ ಪ್ರಸಿದ್ಧ ಪ್ರದೇಶ.
ಕಲೆ ಸಾಹಿತ್ಯ ಸಾಮಾಜಿಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಕೂಡ ದೇಶದೆಲ್ಲರ ಗಮನ ಸೆಳೆದ ಜಿಲ್ಲೆ.
ಸಾಹಿತ್ಯದ ಹಬ್ಬವೆಂದರೆ ಇಲ್ಲಿ ಸಾಮಾನ್ಯವೆ.
ಒಂದಲ್ಲ ಒಂದು ಸಂಕಿರಣ,ಉಪನ್ಯಾಸ,ಗೋಷ್ಠಿಗಳು ಜರುಗುತ್ತಲೇ ಇರುತ್ತವೆ.

ಈ ಬಾರಿಯ ವಿಶೇಷವೆಂದರೆ
ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಭವನದಲ್ಲಿ
ಆಯೋಜಿಸಿರುವ
16 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಹಿರಿಯ ಇತಿಹಾಸ ತಜ್ಞ ಡಾ.ಕೆಳದಿ ಗುಂಡಾ ಜೊಯಿಸ್ ಅವರು ಸಮ್ಮೇಳನದ ಸರ್ವಾಧ್ಯಕ್ಷರು.
ಮಾರ್ಚಿ 30 ರಂದು ಸಮ್ಮೇಳನದ ಉದ್ಘಾಟನಾ ಸಮಾರಂಭ.

ಬೆಳಿಗ್ಗೆ ಅಲಂಕೃತ ವಾಹನದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
ವಿವಿಧ ಜಾನಪದ ಕಲಾತಂಡಗಳಿಂದ ರಾಜಬೀದಿಗಳಲ್ಲಿ
ಹಬ್ಬದ ಸಡಗರವಿತ್ತು.
ಪ್ರಮುಖವಾಗಿ ಡೊಳ್ಳುಕುಣಿತ ಈ ಮೆರವಣಿಗೆಗೆ ರಂಗು ತಂದಿತ್ತು.

ಸಮ್ಮೇಳನದ ಅಧ್ಯಕ್ಷ ರಿಂದ ಗೋಪಾಳದ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ವಿತರಿಸುವ ಮೂಲಕ ಮೆರವಣಿಗೆ ಆರಂಭವಾಯಿತು.

ಮೆರವಣಿಗೆಯು ಶಾಂತವೇರಿ ಗೋಪಾಲಗೌಡ ಮಹಾದ್ವಾರದ ಮೂಲಕ ಡಾ.ಜಿ.ಎಸ್ ಶಿವರುದ್ರಪ್ಪ ಸಾಹಿತ್ಯ ಸಭಾಂಗಣದೊಳಗೆ ಪ್ರವೇಶಿಸಿತು.

ಸುಶ್ರಾವ್ಯ ನಾಡಗೀತೆಯ ಗಾಯನದೊಂದಿಗೆ ಸಮ್ಮೇಳನ ಆರಂಭವಾಯಿತು.
ಜಿಲ್ಲಾ ಕ.ಸಾ.ಪ ಸಮಿತಿ ಕಾರ್ಯದರ್ಶಿಗಳಾದ ಎಸ್ .ಶಿವಮೂರ್ತಿ ಅವರು ಎಲ್ಲರಿಗೂ ಸ್ವಾಗತ ಕೋರಿದರು.
ಶಿವಮೊಗ್ಗ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಡಿ.ಮಂಜುನಾಥ್ ಆಶಯ ಭಾಷಣ ಮಾಡಿದರು.
ನಂತರ ಡಾ. ಕೆಳದಿ ಗುಂಡಾ ಜೊಯಿಸ್ ಅವರು ಜ್ಯೋತಿ ಬೆಳಗುವ ಮೂಲಕ ಸಮ್ಮೇಳನ ಉದ್ಘಾಟಿಸಿದರು.

ನಿಕಟಪೂರ್ವ ೧೫ ನೇ ಸಮ್ಮೇಳನದ ಅಧ್ಯಕ್ಷೆ
ಡಾ.ವಿಜಯಾದೇವಿ ಅವರು ಇಂದಿನ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಕೆಳದಿ ಗುಂಡಾಜೊಯಿಸ್ ಅವರಿಗೆ ಕನ್ನಡ ಬಾವುಟ ನೀಡಿ
ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಡಿ.ಮಂಜುನಾಥ್ ಅವರು ಮಾತನಾಡಿ, ಕನ್ನಡಕ್ಕೆ ಕನ್ನಡಿಗನೇ ಹಿತಶತ್ರುಗಳು. ಅದನ್ನು ಎಲ್ಲಾ ಸಂದರ್ಭದಲ್ಲೂ ನೋಡುತ್ತಿದ್ದೇವೆ. ನಮಗೆ ನಮ್ಮ ಭಾಷೆಯ ಬಗ್ಗೆ ವಿಶ್ವಾಸವಿಲ್ಲದೆ ಇರುವುದು, ಭಾಷೆಯ ಪ್ರತಿಭೆಗಳನ್ನು ನಾವು ಗೌರವಿಸದೆ ಇರುವುದು, ಅಥವಾ ಗುರುತಿಸದೇ ಇರುವುದು. ನಮ್ಮೊಳಗೆ ಕೀಳರಿಮೆ ಎಂಬ ಭಾವನೆ ಇದೆ. ನಾವು ಒಂದು ರೀತಿಯ ವಿಶ್ವಾಸವಿಲ್ಲದ ವಾತಾವರಣದಲ್ಲಿ ನಾವು ದಿನಗಳನ್ನು ಕಳೆಯುತ್ತಿದ್ದೇವೆ. ಪರಿಸ್ಥಿತಿಯನ್ನು ನೋಡಿದಂತಹ ಸಂದರ್ಭಗಳಲ್ಲಿ ಭಾಷೆ ಉಳಿಯುತ್ತಾ? ಎನ್ನುವ ಪ್ರಶ್ನೆಗಳು ಎದುರಾಗುವುದು ಸಹಜ. ಇವತ್ತು ನಾವು ಯಾವ ರೀತಿಯ ಭಾಷೆಗಳನ್ನು ಬಳಸುತ್ತಿದ್ದೇವೆ? ಮನಸ್ಸುಗಳನ್ನು ಕೂಡಿಸುವಂತೆ ಭಾಷೆ ಇವತ್ತು ನಮಗೆ ಅಗತ್ಯವಿದೆ. ನಮ್ಮನ್ನು ಆಳುವ ವಿಧಾನಸಭೆ, ಲೋಕಸಭೆಯಲ್ಲಿ ಚುನಾಯಿತ ಕುಳಿತುಕೊಳ್ಳುವ ಇದೆಲ್ಲಾ ಸಭೆಯಲ್ಲಿ ಅಲ್ಲಿ ಆಡುವ ಮಾತು ಮಾಧ್ಯಮದಲ್ಲಿ ನೋಡಿದಾಗ, ಇವರು ಮನಸ್ಸುಗಳು ಕಟ್ಟುವ ಕೆಲಸ ಮಾಡುತ್ತಿದ್ದಾರಾ? ಅಥವಾ ಯಾವ ಕೆಲಸ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಭವಿಷ್ಯವನ್ನು ಕಟ್ಟುವ ಜಾಗೃತ ಮನಸ್ಸುಗಳಿಗೆ ಕಾಡಬಹುದು ಎಂದು ಹೇಳಿದರು.

ನಾವು ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಮತ್ತು ವಿಶ್ವಾಸವನ್ನು ಬೆಳೆಸುವ ಕೆಲಸ ಮಾಡಬೇಕಾಗಿದೆ. ನಾವು ಹೊಸ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದೆ. ನಮ್ಮ ಮಕ್ಕಳನ್ನು ಪ್ರತಿಷ್ಠಿತ ಜಾಗಗಳಿಗೆ ಸೇರಿಸುವ ಆತುರದಲ್ಲಿದ್ದೇವೆ. ಇಂಗ್ಲಿಷ್ ಮಾಧ್ಯಮ ನಮ್ಮ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಇಂಗ್ಲಿಷ್ ಮಾಧ್ಯಮದ ತೀರ್ಮಾನಕ್ಕೆ ಬಂದಿದ್ದೇವೆ. ಅಂತಹ ಶಾಲೆಗಳಿಗೆ ಎಷ್ಟೇ ಹಣವಾದರೂ ಆ ಶಾಲೆಗಳಿಗೆ ಸೇರಿಸುತ್ತೇವೆ. ಆದರೆ ಆ ಮಕ್ಕಳ ಪರಿಸ್ಥಿತಿಯನ್ನು ಮನೆಯಿಂದ ಹೊರ ಬಂದು ನೋಡಬೇಕು ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು.

ನಮಗೆ ಮನಸ್ಸುಗಳನ್ನು ಒಡೆಯುವ ಭಾಷೆ ಬೇಕಾಗಿಲ್ಲ. ಮನಸ್ಸುಗಳನ್ನು ಕಟ್ಟುವ ಭಾಷೆ ಬೇಕಾಗಿದೆ. ಕನ್ನಡ ಭಾಷೆ ಅತ್ಯಂತ ಸರಳ ಹಾಗೂ ಸುಮಧುರ. ಬಹಳ ಬೇಗ ನಮ್ಮೆದುರು ಇರುವ ವ್ಯಕ್ತಿ ಹೇಳಿದ್ದನ್ನು ಅರ್ಥ ಅರ್ಥಮಾಡಿಕೊಳ್ಳಬಹುದಾದ ಭಾಷೆಯಾಗಿದೆ ಎಂದು ಮಂಜುನಾಥ ಅವರು ತಮ್ಮ ಆಶಯದ ಮಾತುಗಳನ್ನು ಆಡಿದರು.

ಕೆಳದಿ ಗುಂಡಾಜೋಯಿಸ್ ಅವರು ಅಧ್ಯಕ್ಷ ಪೀಠದಿಂದ ಮಾತನಾಡುತ್ತಾ,
ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನನ್ನಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕಾಗಿ ಇದು ಕೆಳದಿ ಇತಿಹಾಸ ಸಂಸ್ಕೃತಿಗೆ ಸಂದ ಗೌರವವೆಂದು ಪರಿಗಣಿಸಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ನಂತರ ಅವರು ಮುಂದುವರಿದು ಮಾತನಾಡುತ್ತಾ,
ಶಿವಮೊಗ್ಗ ಜಿಲ್ಲೆಯನ್ನು ಕೆಳದಿ ಇತಿಹಾಸ ಸಂಸ್ಕೃತಿ ದೇಶ-ವಿದೇಶಗಳಿಗೆ ಖ್ಯಾತಿ ತರಲು ಸಾಮರ್ಥ್ಯತೆ ಹೊಂದಿದೆ. ಜಪಾನ್, ಜರ್ಮನಿ, ಇಟಲಿ, ಲಂಡನ್ ಮೊದಲುಗೊಂಡು ದೇಶ-ವಿದೇಶದ ವಿದ್ವಾಂಸರು ಬೇರೆಬೇರೆ ವಿಶ್ವವಿದ್ಯಾಲಯಗಳಲ್ಲಿ ಕೆಳದಿ ಇತಿಹಾಸವನ್ನು ಆಧರಿಸಿ ಮಹಾಪ್ರಬಂಧ ಸಾದರಪಡಿಸಿದೆ. ಇದು ಕನ್ನಡಿಗರಿಗೆ ಅರಿವಿಲ್ಲ. ಇದುವರೆಗೂ 35ಕ್ಕೂ ಅಧಿಕ ಪಿಹೆಚ್ ಡಿ ಪದವಿ ಘೋಷಿಸಲಾಗಿದೆ. ಅದರಲ್ಲಿ ಕೇವಲ ಇಬ್ಬರ ಮಹಾಪ್ರಬಂಧಗಳು ಕನ್ನಡದಲ್ಲಿ ಪ್ರಕಟವಾಗಿವೆ. ಇಟಲಿ ಮ್ಯೂಸಿಯಂನಲ್ಲಿ ಡೆಲ್ಲ ವಲ್ಲೆಯು ರಚಿಸಿದ ಕೆಳದಿ ಇತಿಹಾಸ ಇಟಲಿ ಭಾಷೆಯಲ್ಲಿ ಹಸ್ತಪತ್ರಿಯಲ್ಲಿದೆ. 15- 16 ನೇ ಶತಮಾನದಲ್ಲಿ ಸುಮಾರು 10 ಜನ ವಿದೇಶಿ ಪ್ರವಾಸಿಗಳು ಈ ಜಿಲ್ಲೆಗೆ ಭೇಟಿ ಇತ್ತು ರಚಿಸಿದ ಪ್ರವಾಸಿ ಕಥನಗಳು ಪ್ರಕಟವಾಗಬೇಕಿದೆ ಎಂದು ಕೆಳದಿ ಗುಂಡಾಜೋಯಿಸ್ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ವಾತಂತ್ರ್ಯನಂತರದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಲ್ಲಿ ಕಡಿದಾಳ್ ಮಂಜಪ್ಪ, ಕಬಟೂರು ಬಂಗಾರಪ್ಪ, ಜೆ. ಹೆಚ್. ಪಟೇಲ್, ಬಿ.ಎಸ್. ಯಡಿಯೂರಪ್ಪನವರು ಹೀಗೆ ನಾಲ್ವರು ಶಿವಮೊಗ್ಗ ಜಿಲ್ಲೆಯವರು ಎಂಬುದು ಹೆಮ್ಮೆಯ ವಿಷಯ. ಇವರುಗಳು ಈ ಜಿಲ್ಲೆಯ ಅಭಿವೃದ್ಧಿಗೆ ಪ್ರಯತ್ನ ಮಾಡಿದ್ದಾರೆ. ಶ್ರೀ ಬದೀ ನಾರಾಯಣ್ ಅಯ್ಯಂಗಾರ್, ಕೆ.ಜಿ.ಒಡೆಯರ್, ಕಾಗೋಡು ತಿಮ್ಮಪ್ಪ, ಹರತಾಳ ಹಾಲಪ್ಪ, ಗೋಪಾಲಗೌಡರು, ಶಂಕರಮೂರ್ತಿ, ಆರಗ ಜ್ಞಾನೇಂದ್ರ, ಇನ್ನು ಮುಂತಾದವರು ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಗುಂಡಾಜೋಯಿಸ್ ಅವರು ಸ್ವಾತಂತ್ರ್ಯನಂತರದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆಗಳನ್ನು ವಿವರಿಸಿದರು.

ಜನಪದ ವಾಗ್ಮಿ, ಲಘು ವಿಷಯಗಳನ್ನು ಜನರಿಗೆ ಮುಟ್ಟಿಸುವಂತಹ ಮಾತುಗಾರ ರಾದ ಪ್ರೊ. ಕೃಷ್ಣೇಗೌಡರು ಮಾತನಾಡುತ್ತಾ, ನಮ್ಮ ಭಾಷೆಯನ್ನು ನಾವುಪ್ರೀತಿಸಬೇಕು. ನಮ್ಮ ಹಿರಿಯರು ಅದನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ಕನ್ನಡಕ್ಕಿಂತ ಇಂಗ್ಲಿಷ್ ಭಾಷೆಗೆ ಯಾವ ಕ್ರಮವೂ ಇಲ್ಲ. ಭಾಷೆ ಮಾತನಾಡುವವರಿಗೆ ಒಂದು ಗೌರವವಿದೆ. ಅದು ಒಂದು ಸಣ್ಣ ಭಾಷೆ. ದ್ವೀಪದ ಭಾಷೆಯಾಗಿದೆ. ಆ ಭಾಷೆಯನ್ನು ಇವತ್ತು ಪ್ರಪಂಚದಾದ್ಯಂತ ಬಳಸುತ್ತಿದ್ದಾರೆ. ಕನ್ನಡ ಕೂಡ ಒಂದು ದೊಡ್ಡ ಭಾಷೆ. ಜನರು ಇದನ್ನು ಅದ್ಭುತವಾಗಿ ಬಳಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಮಾ ದಿಲೀಪ್, ರಾಷ್ಟ್ರೀಯ ಶಿಕ್ಷಣ ಸಮಿತಿ, ಪಿಆರ್ ಓ ಸಿ.ಎಂ.
ನೃಪತುಂಗ, ಜಿಲ್ಲಾ ಕೋಶಾಧ್ಯಕ್ಷರು ಎನ್ ನವೀನ್ ಕುಮಾರ್ ಇನ್ನು ಮುಂತಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...