Monday, October 7, 2024
Monday, October 7, 2024

ಬೆಂಗಳೂರು ವಿಮಾನ ನಿಲ್ದಾಣಕ್ಕೆಶೀಘ್ರ ಮೆಮು ರೈಲು ಸಂಪರ್ಕ

Date:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರು ಶೀಘ್ರವೇ ಮೆಮು ರೈಲುಗಳ ಮೂಲಕ ಪ್ರಯಾಣಿಸಬಹುದಾಗಿದೆ. ವಿಮಾನ ನಿಲ್ದಾಣದ ಸಮೀಪ ಈಗಾಲೇ ರೈಲ್ವೆ ಹಾಲ್ಟ್ ಸ್ಟೇಷನ್‌ ಆರಂಭಗೊಂಡಿದೆ.

ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ಆಯುಕ್ತರಾದ ಅಭಿ ಕುಮಾರ್ ರೈ ಯಲಹಂಕ-ದೇವನಹಳ್ಳಿ- ಚಿಕ್ಕಬಳ್ಳಾಪುರ 45 ಕಿ. ಮೀ. ವಿದ್ಯುದೀಕರಣಗೊಂಡ ಮಾರ್ಗವನ್ನು ಪರಿಶೀಲನೆ ನಡೆಸಿದರು.

ರೈಲ್ವೆ ಸುರಕ್ಷತಾ ಆಯುಕ್ತರು ವೇಗ ಪರೀಕ್ಷೆ ಮೂಲಕ ಹಳಿಯ ತಪಾಸಣೆ ನಡೆಸಿದ್ದಾರೆ. ಗಂಟೆಗೆ 100 ಕಿ. ಮೀ. ವೇಗದಲ್ಲಿ ಪರಿಶೀಲನೆ ಪೂರ್ಣಗೊಂಡಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.

ಶೀಘ್ರವೇ ಈ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರಕ್ಕೆ ಅನುಮತಿ ಸಿಗಲಿದೆ.
ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ವಿದ್ಯುದೀಕರಣದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

ಈ ಮಾರ್ಗದಲ್ಲಿ ಮೆಮು ರೈಲು ಸಂಚಾರ ನಡೆಸಲು ಅವಕಾಶ ನೀಡಲಾಗುತ್ತದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ ಬಿಐಎಲ್ ವಿಮಾನ ನಿಲ್ದಾಣ ಸಮೀಪವೇ ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಿದೆ. ಬೆಂಗಳೂರು ನಗರದಿಂದ ಹಾಲ್ಟ್‌ ಸ್ಟೇಷನ್‌ಗೆ ರೈಲು ಸಂಚಾರ ಆರಂಭಿಸಲಾಗಿತ್ತು. ಆದರೆ ಪ್ರಯಾಣಿಕರ ನೀರಸ ಪ್ರತಿಕ್ರಿಯೆ ಕಾರಣ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಈಗ ಇದೇ ಮಾರ್ಗದಲ್ಲಿ ಮೆಮು ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆಗಳು ಆರಂಭವಾಗಿದೆ.

2021ರ ಜನವರಿ 4ರಂದು ನೈಋತ್ಯ ರೈಲ್ವೆ ಬೆಂಗಳೂರು ನಗರಿಂದ ಏರ್‌ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್‌ಗೆ ರೈಲು ಸಂಚಾರ ಆರಂಭಿತ್ತು. ಪ್ರತಿದಿನ ನಗರದಿಂದ 10 ರೈಲುಗಳು ಈ ನಿಲ್ದಾಣಕ್ಕೆ ಸಂಚಾರ ನಡೆಸುತ್ತಿದ್ದವು. ನಗರರಿಂದ ವಿಮಾನ ನಿಲ್ದಾಣಕ್ಕೆ 10 ರಿಂದ 15 ರೂ. ನಲ್ಲಿ ಸಂಚಾರ ನಡೆಸಬಹುದಾಗಿತ್ತು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಶೆಟರ್ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

ರೈಲ್ವೆ ಹಾಲ್ಟ್ ಸ್ಟೇಷನ್‌ ಅನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ರೈಲು ಸಂಪರ್ಕ ಆರಂಭವಾದಾಗ ಅಂದಿನ ರೈಲ್ವೆ ಸಚಿವರು ಟ್ವೀಟ್ ಮಾಡಿ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಇದು ಮಹತ್ವದ ಮೈಲುಗಲ್ಲು ಎಂದು ಹೇಳಿದ್ದರು. ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 28,000 ಉದ್ಯೋಗಿಗಳಿಗೆ ಇದು ಸಹಾಯಕವಾಗಲಿದೆ ಎಂದು ಹೇಳಿತ್ತು. ಈ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿತ್ತು. ಆದರೆ ಅಪಾರ ನಿರೀಕ್ಷೆಯೊಂದಿಗೆ ಆರಂಭಿಸಿದ್ದ ವಿಮಾನ ನಿಲ್ದಾಣದ ರೈಲು ಸೇವೆಗೆ ನೀರಸ ಪ್ರತಿಕ್ರಿಯೆ ಸಿಕ್ಕಿತು. ಕೋವಿಡ್ ಲಾಕ್‌ಡೌನ್ ಘೋಷಣೆಯಾಗುತ್ತಲೇ ರೈಲು ಸೇವೆ ಸಹ ಸ್ಥಗಿತಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...