Monday, October 7, 2024
Monday, October 7, 2024

ಜನಕ್ಷೇಮವೇ ಜನೌಷಧ ಅಭಿಯಾನ

Date:

ಇಂದಿನ ಜೀವನದಲ್ಲಿ ಮನುಷ್ಯನಿಗೆ ಗಾಳಿ ನೀರು ಆಹಾರದೊಂದಿಗೆ ಔಷಧಗಳು ಕೂಡ ಬಹುಮುಖ್ಯವಾಗಿ ಬೇಕಾಗಿದೆ.
ಬದಲಾಗುತ್ತಿರುವ ಜೀವನಶೈಲಿ, ಆಹಾರ ಪದ್ಧತಿ, ವಾಯುಮಾಲಿನ್ಯದಿಂದಾಗಿ ಆರೋಗ್ಯವೂ ಹದಗೆಡುತ್ತಿದೆ.

ಮನುಷ್ಯ ಬದುಕುಳಿಯಲು ಹರಸಾಹಸ ಪಡುವಂತಾಗಿದೆ. ಆಹಾರದೊಂದಿಗೆ ಔಷಧಗಳು ಅತ್ಯಗತ್ಯವಾಗಿದೆ. ಆರೋಗ್ಯ ಸ್ಥಿತಿ ಸುಧಾರಿಸಲು, ಆರೋಗ್ಯದಿಂದ ಇರಲು, ಅನಾರೋಗ್ಯಕ್ಕೆ ಒಳಗಾಗದಂತೆ ದೇಶವನ್ನು ರಕ್ಷಿಸಲು ಔಷಧಗಳು ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ.
ಯಾವುದೇ ವ್ಯಕ್ತಿಗೆ ಅನಾರೋಗ್ಯ ಉಂಟಾದಾಗ ವೈದ್ಯರಿಗಿಂತಲೂ ಮೊದಲು ಆಯ್ಕೆ ಮಾಡುವುದು ಮಾತ್ರೆ ಅಥವಾ ಔಷಧಗಳನ್ನ.

ಕೊರೊನಾ ಸಾಂಕ್ರಮಿಕ ರೋಗದಿಂದಾಗಿ ಜನರಿಗೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಶ್ರೀಮಂತರೋ ಏನಾದರೂ ದೊಡ್ಡ ಕಾಯಿಲೆಗಳು ಎದುರಾದಾಗ ಪ್ರತಿಷ್ಠಿತ ಹಾಸ್ಪಿಟಲ್ ಗಳಿಗೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ.
ಆದರೆ ಬಡ ಜನರು ಅನಾರೋಗ್ಯ ಉಂಟಾದಾಗ ಅಥವಾ ಯಾವುದೋ ದೊಡ್ಡ ಕಾಯಿಲೆ ಬಂದಾಗ ಔಷಧಗಳನ್ನೂ ಖರೀದಿಸಲು ಹಾಗೂ ವೈದ್ಯರ ಬಳಿ ಹೋಗಲು ಹಣವಿಲ್ಲದೆ ಜೀವನ ಕಳೆದುಕೊಳ್ಳುತ್ತಾರೆ.
ಬಡಜನರಿಗೂ ಬದುಕುವ ಹಕ್ಕಿದೆ.
ಹಾಗಾಗಿ, ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ವಿಶೇಷ ಕೇಂದ್ರಗಳ ಮೂಲಕ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಯಲ್ಲಿ ಜೆನೆರಿಕ್ ಔಷಧಿಗಳನ್ನು ಒದಗಿಸುತ್ತಿದೆ.
ಈ ಜನೌಷದ ಕೇಂದ್ರಗಳ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿಲ್ಲ.

ಜನೌಷಧ ವಿಶೇಷ ಕೇಂದ್ರಗಳನ್ನು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ ಕೇಂದ್ರ ಎಂದು ಕರೆಯಲಾಗುತ್ತದೆ.

ದುಬಾರಿ ಬ್ರಾಂಡ್ ಔಷಧಗಳಂತೆಯೇ ಗುಣಮಟ್ಟದ ಔಷಧಗಳನ್ನು ಕೈಗೆಟಕುವ ಬೆಲೆಯಲ್ಲಿ ತಲುಪಿಸಲು ಇದನ್ನು ಸ್ಥಾಪಿಸಲಾಗಿದೆ.
ಇದನ್ನು ಯುಪಿಎ ಸರ್ಕಾರವು 2008 ರಲ್ಲಿ ಪ್ರಾರಂಭಿಸಿತು.

2015 ರಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನಾ (ಪಿಎಂಬಿಜೆಪಿ) ಎಂದು ನವೀಕರಿಸಲಾಯಿತು. ಈ ಹಿಂದೆ, ದೇಶದ ವಿವಿಧ ಭಾಗಗಳಲ್ಲಿ ಔಟ್‌ಲೆಟ್‌ಗಳಿಗೆ ಪ್ರತ್ಯೇಕವಾಗಿ ಜನೌಷಧಿ ಮೆಡಿಕಲ್ ಸ್ಟೋರ್ ಎಂದು ಹೆಸರಿಸಲಾಗಿತ್ತು.

ಈ ಜನೌಷಧ ಕೇಂದ್ರ ಗಳಲ್ಲಿ ಜನಸಾಮಾನ್ಯರಿಗೆ ಅಗತ್ಯವಾಗಿ ಬೇಕಾಗಿರುವ ಮಾತ್ರೆಗಳು, ಔಷಧಗಳು, ಸ್ಯಾನಿಟರಿ ಪ್ಯಾಡ್ ಗಳು ಮತ್ತು ವೈದ್ಯಕೀಯ ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯವಿವೆ.

ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುವ ಗುಣಮಟ್ಟದ ಮತ್ತು ಜೆನೆರಿಕ್ ಔಷಧಿಗಳು ಇಲ್ಲಿ ಸಿಗುತ್ತವೆ.

ಇದು ಬ್ರಾಂಡೆಡ್ ಔಷಧಿಗಳಿಗೆ ಸಮಾನವಾದ ಔಷಧಿಗಳ ಪೂರೈಕೆಯನ್ನು ಹೋಲುತ್ತದೆ.

ಪಿಎಂಬಿಜೆಪಿ ಅಡಿಯಲ್ಲಿ, ಆರೋಗ್ಯ ರಕ್ಷಣೆಗಾಗಿ ಬರುವ ಹಣದ ಹೊರಗಿನ ವೆಚ್ಚಗಳನ್ನು ಕಡಿಮೆ ಮಾಡಲು ಈ ಕೇಂದ್ರವನ್ನು ದೇಶಾದ್ಯಂತ ತೆರೆಯಲಾಗಿದೆ.

ಫಾರ್ಮಾಸ್ಯುಟಿಕಲ್ಸ್ ಇಲಾಖೆಯ ಅಡಿಯಲ್ಲಿ ಭಾರತದ ಫಾರ್ಮಾ ಪಿಎಸ್ಯುಗಳ ಬ್ಯೂರೋವು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಮೂಲಕ ಮಾರಾಟ ಮಾಡಬೇಕಾದ ಔಷಧಿಗಳನ್ನು ಸಂಯೋಜಿಸುವುದು, ಸಂಗ್ರಹಿಸುವುದು, ಸರಬರಾಜು ಮಾಡುವುದು ಮತ್ತು ಮಾರಾಟ ಮಾಡುವುದನ್ನು ಒಳಗೊಂಡಿದೆ‌.

ಬ್ರಾಂಡೆಡ್ ಔಷಧಿಗಳ ಮಾರುಕಟ್ಟೆ ಬೆಲೆಗೆ ಹೋಲಿಸಿದರೆ ವಾಸ್ತವಿಕ ಬೆಲೆಯ ಸುಮಾರು 50-90 ಪ್ರತಿಶತದಷ್ಟು ಕಡಿತವಿದೆ. ಈ ಯೋಜನೆಯಡಿಯಲ್ಲಿ ಸಂಗ್ರಹಿಸಲಾದ ಔಷಧಗಳನ್ನು ಗುಣಮಟ್ಟದ ಭರವಸೆಗಾಗಿ ರಾಷ್ಟ್ರೀಯ ಮಾನ್ಯತಾ ಮಂಡಳಿಯ ಪ್ರಯೋಗಾಲಯಗಳು (ಎನ್‌ಎಬಿಎಲ್) ವಿಶ್ವ ಆರೋಗ್ಯ ಸಂಸ್ಥೆಯ ಉತ್ತಮ ಉತ್ಪಾದನಾ ಅಭ್ಯಾಸಗಳಿಗೆ ಅನುಸಾರವಾಗಿ ಪರೀಕ್ಷಿಸಲಾಗುತ್ತದೆ.

ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರವು 2.5 ಲಕ್ಷದವರೆಗೆ ಮೊತ್ತವನ್ನು ನೀಡುತ್ತದೆ. ಇದನ್ನು ವೈದ್ಯರು, ಔಷಧಿಕಾರರು, ಉದ್ಯಮಿಗಳು, ಸ್ವ-ಸಹಾಯ ಗುಂಪುಗಳು, ದತ್ತಿ ಸಂಘಗಳು ಯಾವುದೇ ಅನುಕೂಲಕರ ಸ್ಥಳದಲ್ಲಿ ಮಾಡಬಹುದು.

ರೈಲ್ವೆ ಸಚಿವಾಲಯ ಕೂಡ ರೈಲ್ವೆ ನಿಲ್ದಾಣಗಳು ಮತ್ತು ಇತರ ರೈಲ್ವೆ ಸಂಸ್ಥೆಗಳಲ್ಲಿ ಜನೌಷದಿ ಕೇಂದ್ರಗಳನ್ನು ತೆರೆಯಲು ಅನುಮೋದನೆ ನೀಡಿದೆ. ಈ ವಿಧಾನವು ಗ್ರಾಹಕರಿಗೆ ಅಗತ್ಯ ಔಷಧಿಗಳ ಲಭ್ಯತೆ ಮತ್ತು ಕೈಗೆಟುಕುವ ಸಾಮರ್ಥ್ಯವನ್ನು ಹೆಚ್ಚಿಸಲು ರೈಲ್ವೆ ನಿಲ್ದಾಣಗಳಲ್ಲಿ ಗುಣಮಟ್ಟದ ಔಷಧಿಗಳು ದೊರೆಯಲು ಸಾಧ್ಯವಾಗುತ್ತದೆ.

ಜನೌಷಧಿ ಸುಗಮ್ ಅಪ್ಲಿಕೇಶನ್ ಕೂಡ ಲಭ್ಯವಿದೆ.
ಗ್ರಾಹಕರ ಸುತ್ತಲಿನ ಪ್ರದೇಶಗಳಲ್ಲಿ ಜನೌಷಧಿ ಕೇಂದ್ರಗಳನ್ನು ಪತ್ತೆಹಚ್ಚಲು ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ.

ತಂತ್ರಜ್ಞಾನದ ಮೂಲಕ ಕೈಗೆಟುಕುವ ಆರೋಗ್ಯ ಯೋಜನೆಗಳನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ. ಈ ಔಷಧಿಗಳು ಕಡಿಮೆ ವೆಚ್ಚದಲ್ಲಿರುತ್ತವೆ. ಸಮಾಜದ ಎಲ್ಲಾ ವರ್ಗಗಳಿಗೆ ಕೈಗೆಟಕು ಬೆಲೆಯನ್ನು ಔಷಧಿಗಳನ್ನು ಇಲ್ಲಿ ಖರೀದಿಸಬಹುದು.

ಜನೌಷಧ ಕೇಂದ್ರ ದಲ್ಲಿ ದೊರೆಯುವ ಔಷಧಗಳ ಪರಿಣಾಮಕಾರಿಯೇ ? ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತದೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈಗಾಗಲೇ ಮಾರುಕಟ್ಟೆಯಲ್ಲಿ ಬ್ರಾಂಡ್ ಹಕ್ಕನ್ನು ಹೊಂದಿರುವ ಯಾವುದೇ ಔಷಧವನ್ನು ಇಲ್ಲಿ ಮಾರಾಟವಾಗುವುದಿಲ್ಲ.

ಸದ್ಯ ವಿದ್ಯಮಾನದಲ್ಲಿ ಯಾವುದೇ ಕಂಪನಿಗಳು ತಯಾರಿಸುವ ಔಷಧಕ್ಕೆ ಇಂತಿಷ್ಟು ವರ್ಷಗಳ ಪೇಟೆಂಟ್ ಹೊಂದಿರುತ್ತವೆ. ಔಷಧಗಳನ್ನು ಬೇರೆ ಯಾರೂ ತಯಾರಿಸುವುದಿಲ್ಲ ಎಂಬ ಕಾನೂನು ಇರುತ್ತದೆ.

ಆದರೆ, ಅಂತಹ ಪೇಟೆಂಟನ್ನು ಕಳೆದುಕೊಂಡ ಔಷಧಗಳನ್ನು ಯಾರೇ ಆದರೂ ತಯಾರಿಸಬಹುದು.
ಅಂತಹ ಔಷಧಗಳು ಜನೌಷದ ಕೇಂದ್ರಗಳಲ್ಲಿ ಮಾರಾಟವಾಗುತ್ತವೆ.

ಹಾಗಾಗಿ ಜನೌಷಧ ಕೇಂದ್ರಗಳಲ್ಲಿ ಸಿಗುವ ಔಷಧಿಗಳು ಕೇಂದ್ರೀಯ ಔಷಧ ನಿಯಂತ್ರಣ ಮಂಡಳಿಯಿಂದ ಮನ್ನಣೆ ಪಡೆದಿವೆ.

ಇಲ್ಲಿ ಸಿಗುವ ಮಾತ್ರೆ ಗಳಾಗಲಿ, ಔಷಧಿ ಗಳಾಗಲಿ ಕಡಿಮೆ ಬೆಲೆಯದ್ದಾದರೂ ಗುಣಮಟ್ಟದಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲ ಎಂಬುದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕಾಗಿದೆ.

ಕೆಲವು ಖಾಸಗಿ ವ್ಯಕ್ತಿಗಳು ಜನೌಷಧ ಕೇಂದ್ರದ ಜನಪ್ರಿಯತೆಯಲ್ಲಿ
ಕಡಿಮೆ ಗುಣಮಟ್ಟದ
ಔಷಧಗಳನ್ನು ಕೌಟರನಲ್ಲಿರಿಸಿ ಮಾರಾಟ ಮಾಡಲು
ಹವಣಿಸುತ್ತಿವೆ. ಈ ಆರೋಪ ಈಗೀಗ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಈ ಬಗ್ಗೆ ಸರ್ಕಾರ ಸೂಕ್ತ ಜಾಗೃತಿವಹಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.


Latest News on WhatsApp

Send a Whatsapp message Start‘ to this contact to get started. That’s it! We will send you your daily dose of positive news on Whatsapp!

Why Keelambi Media Lab Pvt Ltd ?

Klive News has simplified and given a complete makeover to the whole process of booking ads for different media platforms. Now there is no need for you to travel all the way to the respective offices. Nor do you need to write messages manually on Email form. Klive.news lets you do all this and more from the comfort of your home, office or even when you’re travelling. We have created a niche for ourselves in the world of advertising and our work speaks volumes about our ability and integrity.

KLIVE at Google News App

KLIVE Android App on Google Play Store

Download the most loved Klive App for your Android phone or tablet.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...