Thursday, June 18, 2026
Thursday, June 18, 2026

ದಸರಾ ಅಂಬಾರಿ ಹೊರಲು ಗಜಪಡೆ ಸಜ್ಜು

Date:

  • ದಸರಾ ಉತ್ಸವ ಹಿನ್ನೆಲೆಯಲ್ಲಿ ಅಂಬಾರಿ ಹೊರಲು ಸಕ್ರೆಬೈಲ್​​​ ಆನೆ ಬಿಡಾರದಿಂದ ಎರಡು ಆನೆಗಳು ನಗರಕ್ಕೆ ಆಗಮಿಸಿವೆ. ಶಿವಮೊಗ್ಗ ದಸರಾದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿರುವ ಅಂಬಾರಿ ಉತ್ಸವಕ್ಕಾಗಿ ಸಾಗರ್​ ಮತ್ತು ಭಾನುಮತಿ ಆನೆಗಳನ್ನು ನಿನ್ನೆಯೇ ನಗರಕ್ಕೆ ಬರಮಾಡಿಕೊಳ್ಳಲಾಗಿದೆ.

ಸಕ್ರೆಬೈಲ್​​​​ನಲ್ಲಿ ಆನೆಗಳು ಲಾರಿ ಏರಲು ಹಿಂದೇಟು ಹಾಕಿದ್ದು, ಬಳಿಕ ನಡೆದುಕೊಂಡೇ ಶಿವಮೊಗ್ಗ ತಲುಪಿವೆ. ನಗರ ತಲುಪಿದ ಆನೆಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪೂಜೆ ಸಲ್ಲಿಸಿ, ಸ್ವಾಗತ ಕೋರಲಾಯಿತು.

ವಾಸವಿ ಶಾಲೆಯ ಬಳಿ ವಾಸ್ತವ್ಯ ಹೂಡಿರುವ ಆನೆಗಳು ಇಂದಿನಿಂದ ಎರಡು ದಿನ ನಡೆಯಲಿರುವ ದಸರಾದಲ್ಲಿ ಭಾಗಿಯಾಗಲಿವೆ. ಈ ವೇಳೆ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ, ಆಯುಕ್ತ ಚಿದಾನಂದ ವಾಟರೆ ಸೇರಿ ಸಿಬ್ಬಂದಿ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಆರೋಗ್ಯಕರ ವೃದ್ಧಾಪ್ಯಕ್ಕೆ ಯೋಗ ಸಹಕಾರಿ ಲೇ: ಡಾ.ಎಸ್.ಎಲ್.ಪಲ್ಲವಿ

Klive Special Article ಪ್ರತಿ ವರ್ಷ ಜೂನ್ 21ರಂದು ವಿಶ್ವದಾದ್ಯಂತ ಅಂತರಾಷ್ಟ್ರೀಯ...

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...