Friday, April 10, 2026
Friday, April 10, 2026

Health & Family welfare Shimoga ಹೊಸನಗರ ಎನ್.ಪಿ‌.ಎನ್.ಸಿ.ಡಿ. ವಿಭಾಗದಲ್ಲಿ ತಾಲ್ಲೂಕು ಆಸ್ಪತ್ರೆಗೆ ಪ್ರಯೋಗಶಾಲಾ ತಂತ್ರಜ್ಞರ ನೇಮಕಾತಿ: ನೇರ ಸಂದರ್ಶನಕ್ಕೆ ಕರೆ.

Date:

Health & Family welfare Shimoga ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಹೊಸನಗರ ತಾಲೂಕು ಆಸ್ಪತ್ರೆಯಲ್ಲಿ ಖಾಲಿಯಿರುವ ಪ್ರಯೋಗಶಾಲಾ ತಂತ್ರಜ್ಞರ 2 ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇರನೇಮಕಾತಿ ಮಾಡಿಕೊಳ್ಳಲು ನೇರ ಸಂದರ್ಶನಕ್ಕೆ ಕರೆ ನೀಡಲಾಗಿದೆ.
ಆಸಕ್ತರು ಏ.17 ರಂದು ಬೆಳಗ್ಗೆ 11.00 ರಿಂದ ಮಧ್ಯಾಹ್ನ 5.00ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣ, ಬಿ.ಹೆಚ್.ರಸ್ತೆ, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ತಮ್ಮ ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಹಾಜರಾಗುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Health & Family welfare Shimoga ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ಎಸ್.ಎಸ್.ಎಲ್.ಸಿ. + ಪಿ.ಯು.ಸಿ. ಹಾಗೂ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಹೊಂದಿದ್ದು, 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವವಿರಬೇಕು. ವಾರ್ಡ್ ಪ್ರೊಸೆಸ್ಸಿಂಗ್, ಡೇಟಾ ಪ್ರೊಸೆಸ್ಸಿಂಗ್ ನಂತರ ಕಂಪ್ಯೂಟರ್‌ನ ಮೂಲಭೂತ ಜ್ಞಾನ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ನೇಮಕಾತಿಯು ಎನ್.ಹೆಚ್.ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Krishnashastry ಶ್ವೇತವಸ್ತ್ರದ ಸಂತ, ಬೆಳಗೆರೆ ಕೃಷ್ಣಶಾಸ್ತ್ರಿಗಳು.

ಲೇ: ಪ್ರಸಾದ್ ಶ್ರೀವತ್ಸ.ದಾವಣಗೆರೆ. Krishnashastry ಅದು ನಾನು ಹತ್ತನೇ ತರಗತಿಯನ್ನು ಮುಗಿಸಿ, ಪಿಯುಸಿಯ...

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ವತಿಯಿಂದ “ಬಾಕ್ಸ್ ಕ್ರಿಕೆಟ್ ಪಂದ್ಯಾವಳಿ” ಟ್ರೋಫಿ ಅನಾವರಣ.

JCI Shimoga ಜೇಸಿಸ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಶಿವಮೊಗ್ಗ ವತಿಯಿಂದ ದಿನಾಂಕ...

Hulikal Ghat ಹುಲಿಕಲ್ ಘಾಟಿಯಲ್ಲಿ ಧರೆ ಕುಸಿತ. ಕಾಮಗಾರಿಯಲ್ಲಿದ್ದ ಮೂವರು ಕಾಣೆ. ಶೋಧಕಾರ್ಯ ಪ್ರಗತಿ.

Hulikal Ghat ಹುಲಿಕಲ್ ಘಾಟಿಯಲ್ಲಿ ರಸ್ತೆ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ.ಕಾಮಗಾರಿ...

Dr. B.R. Ambedkar ಏಪ್ರಿಲ್ 14. ಡಾ.ಅಂಬೇಡ್ಕರ್ಜನ್ಮ ದಿನಾಚರಣೆಗೆ ಜಿಲ್ಲಾಡಳಿತ‌ದಿಂದ ಸರ್ವಸಿದ್ಧತೆ.

Dr. B.R. Ambedkar ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ,...