Sunday, March 29, 2026
Sunday, March 29, 2026

Dr. Dhananjaya Sarji ಅನುದಾನಿತ ಕಾಲೇಜುಗಳಲ್ಲಿ ಭಾಷಾವಿಷಯಕ್ಕೆ ಸಂಬಂಧಿಸಿದ ನಿಯಮ ಸಡಿಲಿಕೆಗೆ ಮನವಿ- ಡಾ.ಧನಂಜಯ ಸರ್ಜಿ.

Date:

Dr. Dhananjaya Sarji ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಭಾಷಾ ವಿಷಯಗಳ ಆಯ್ಕೆಗೆ ಸಂಬಂಧಿಸಿದಂತೆ ಜಾರಿಗೆ ತರಲಾಗಿರುವ ಕನಿಷ್ಠ 40 ವಿದ್ಯಾರ್ಥಿಗಳ ಸಂಖ್ಯೆಯ ನಿಯಮವನ್ನು ಸಡಿಲಗೊಳಿಸುವಂತೆ ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಮಧು ಬಂಗಾರಪ್ಪ ಅವರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ ಚರ್ಚಿಸಿದರು.

ಸರ್ಕಾರದ ಇತ್ತೀಚಿನ ನಿಯಮದಂತೆ ಪ್ರತಿ ವಿಭಾಗಕ್ಕೆ 40 ವಿದ್ಯಾರ್ಥಿಗಳಿರಬೇಕು ಎಂಬ ಷರತ್ತು ಭಾಷಾ ವಿಷಯಗಳಿಗೂ ಅನ್ವಯವಾಗುತ್ತಿರುವುದು ಪ್ರಾಯೋಗಿಕವಾಗಿ ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಒಂದು ವಿಭಾಗದಲ್ಲಿ ಒಟ್ಟು 40 ವಿದ್ಯಾರ್ಥಿಗಳಿದ್ದಾಗ, ಅವರು ತಮ್ಮ ಇಷ್ಟದ ವಿವಿಧ ಭಾಷೆಗಳನ್ನು ಹಂಚಿಕೊಂಡರೆ, ಯಾವುದೇ ಒಂದು ಭಾಷಾ ವಿಷಯಕ್ಕೆ ಕನಿಷ್ಠ 40 ವಿದ್ಯಾರ್ಥಿಗಳು ಸಿಗುವುದು ಅಸಾಧ್ಯದ ಮಾತು. ಈ ನಿಯಮದಿಂದಾಗಿ ಭಾಷಾ ಉಪನ್ಯಾಸಕರಿಗೆ ಕಾರ್ಯಭಾರದ ಕೊರತೆ ಉಂಟಾಗಿ, ಅವರು ಅನಿವಾರ್ಯವಾಗಿ ಬೇರೆ ಕಾಲೇಜುಗಳಿಗೆ ನಿಯೋಜನೆಗೊಳ್ಳುವ (Deputation) ಭೀತಿ ಎದುರಾಗಿದೆ. ಅಲ್ಲದೆ, ಖಾಲಿ ಇರುವ ಭಾಷಾ ವಿಷಯಗಳ ಹುದ್ದೆಗಳನ್ನು ಭರ್ತಿ ಮಾಡಲು ಈ ತಾಂತ್ರಿಕ ನಿಯಮವು ದೊಡ್ಡ ಅಡ್ಡಿಯಾಗಿದೆ ಎಂಬ ವಿಷಯವನ್ನ ಸಚಿವರ ಗಮನಕ್ಕೆ ಡಾ.ಧನಂಜಯ ಸರ್ಜಿ ತಂದರು.
ವಿದ್ಯಾರ್ಥಿಗಳಿಗೆ ತಮ್ಮ ಇಷ್ಟದ ಭಾಷೆಯನ್ನು ಕಲಿಯುವ ಸ್ವಾತಂತ್ರ್ಯ ಸಿಗಬೇಕು ಮತ್ತು ಭಾಷಾ ಉಪನ್ಯಾಸಕರ ವೃತ್ತಿ ಜೀವನಕ್ಕೆ ಭದ್ರತೆ ಒದಗಿಸಬೇಕು ಎಂಬ ಉದ್ದೇಶದಿಂದ, ಈ ಕೂಡಲೇ ಈ ನಿಯಮದಲ್ಲಿ ಬದಲಾವಣೆ ತರಬೇಕೆಂದು ಸಚಿವರಲ್ಲಿ ಮನವಿಮಾಡಿದರು.

Dr. Dhananjaya Sarji ಈ ವೇಳೆ ವಿಧಾನ ಪರಿಷತ್ ಶಾಸಕರುಗಳಾದ ಎಸ್.ಎಲ್ ಭೋಜೇಗೌಡ ಅವರು, ಕಿಶೋರ್ ಕುಮಾರ್ ಪುತ್ತೂರು ಅವರು, ಶಾಲಾ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ ಮಹೇಶ್ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಯ ಪದಾಧಿಕಾರಿಗಳ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪೊಲೀಸ್ ಇಲಾಖೆಯಲ್ಲಿ ಖಾಲಿಯಿರುವ 8000 ಹುದ್ದೆಗಳನ್ನ ಭರ್ತಿ ಮಾಡಲಾಗುವುದು,- ಸಿದ್ಧರಾಮಯ್ಯ.

CM Siddharamaih ಪೊಲೀಸ್ ಸೇವೆಯಲ್ಲಿ ಶಿಸ್ತು, ಸಂಯಮ, ಪ್ರಾಮಾಣಿಕತೆ, ಮಾನವೀಯತೆ ಬಹಳ ಮುಖ್ಯ....

Kuvempu University ಜೋನ್ ಲೀಲಾ ಮಾಡ್ತಾ ಅವರಿಗೆ ಪಿಎಚ್.ಡಿ. ಪದವಿ

Kuvempu University  ಎನ್.ಶಾಂತನಾಯ್ಕ ಮಾರ್ಗದರ್ಶನದಲ್ಲಿ ಜೋನ್ ಲೀಲಾ ಮಾಡ್ತಾ ಕಲಾ ಅಧ್ಯಯನ...

Shivamogga Police ಶಿವಮೊಗ್ಗ ಪೊಲೀಸ್ ಇಲಾಖೆಯ ಮೂವರಿಗೆ ಮುಖ್ಯಮಂತ್ರಿಗಳ ಪದಕ ಪುರಸ್ಕಾರ.

Shivamogga Police 2025ನೇ ಸಾಲಿನ ಮುಖ್ಯ ಮಂತ್ರಿಗಳ ಪದಕಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್...