Water Tax ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ಶಿವಮೊಗ್ಗ ಇವರ ವತಿಯಿಂದ 2025-26 ನೇ ಸಾಲಿನ ಮಾರ್ಚ್ 29 ರ ಭಾನುವಾರದಂದು ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿ ಮಾಡಲು ವಿಶೇಷ ವಸೂಲಾತಿ ಕೌಂಟರ್‌ಗಳನ್ನು ಕೆಳಕಂಡ ಸ್ಥಳಗಳಲ್ಲಿ ತೆರೆಯಲಾಗಿದೆ.
ಭಾರತೀಯ ಸಭಾ ಭವನ ಎದುರು, ಆರ್.ಎಂ.ಎಲ್.ನಗರ, ಹಲ್ ಹಬಿಬ್ ಶಾಲೆ ಎದುರು, 1ನೇ ತಿರುವು, ಟಿಪ್ಪುನಗರ, ಸೀಗೇಹಟ್ಟಿ ಸರ್ಕಾರಿ ಶಾಲೆ ಆವರಣ, ಅಶೋಕನಗರ ನಂದಿನ ಬೂತ್, ಪೊಲೀಸ್ ಕ್ವಾಟ್ರಸ್ ಹತ್ತಿರ, ಕಾಶಿಪುರ ಕೆನರಾ ಬ್ಯಾಂಕ್ ಹತ್ತಿರ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ Water Tax ಅಂತಹವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕೆಂದು ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
Water Tax ಶಿವಮೊಗ್ಗದ ವಿವಿಧೆಡೆ ನೀರಿನ ಕಂದಾಯ ಪಾವತಿ ಕೌಂಟರ್ ವ್ಯವಸ್ಥೆ.
Date:
