CM Siddaramaiah ಮೌಢ್ಯ, ಕಂದಾಚಾರಗಳ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು ಶೋಷಣೆಗೊಳಪಡಿಸಿದ್ದ ಸಮಾಜದ ಪಟ್ಟಭದ್ರ ಶಕ್ತಿಗಳ ವಿರುದ್ಧ ಸಿಡಿದೆದ್ದು, ಸಮಸಮಾಜದ ಕನಸು ಬಿತ್ತಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.
ದಾಸಿಮಯ್ಯನವರು ಸೇರಿದಂತೆ ಶರಣರು ಮುನ್ನಡೆಸಿದ ಸಾಮಾಜಿಕ ಹಾಗೂ ಧಾರ್ಮಿಕ ಚಳವಳಿಯು ನೊಂದ ಜೀವಗಳೊಳಗೆ ಪ್ರತಿರೋಧದ ಧ್ವನಿ ಹುಟ್ಟಲು ಪ್ರೇರಣೆಯಾಯಿತು ಎಂದಿದ್ದಾರೆ.
CM Siddaramaiah ವಚನಗಳ ಮೂಲಕ ಅರಿವಿನ ಜ್ಯೋತಿ ಬೆಳಗಿದ ದೇವರ ದಾಸಿಮಯ್ಯನವರನ್ನು ಈ ದಿನ ನೆನೆದು, ನಮಿಸುತ್ತೇನೆ ಎಂದು ಹೇಳಿದ್ದಾರೆ.
