Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ ತಿಂಗಳಿನಲ್ಲಿ ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಭದ್ರಾವತಿಯ ಆಕಾಶವಾಣಿ ಕೇಂದ್ರದಿಂದ ಶುಕ್ರವಾರದಂದು ಕಾಲೇಜಿನಲ್ಲಿ ನಡೆಸಿದ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರ ಕುರಿತು ಅದ್ಭುತವಾಗಿ ಬೆಳಕು ಚೆಲ್ಲಿದರು. ಸ್ವತಂತ್ರ ಹೋರಾಟ, ರಾಜ್ಯಾಡಳಿತ, ಸಮಾಜ ಸುಧಾರಣೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಾದ ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ರಾಣಿ ಚೆನ್ನ ಭೈರಾದೇವಿ, ಅಕ್ಕಮಹಾದೇವಿ, ಸಾಹಿತಿ ಸಹನಾ ವಿಜಯಕುಮಾರ್, ಸಬಿತಾ ಬನ್ನಾಡಿ ಮತ್ತು ದೀಪಾ ಬಸ್ತಿ ಯವರ ಕೊಡುಗೆ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿನಿಯರು ಮಾತನಾಡಿದರು.
ಭೈರಪ್ಪನವರ ಛಾಯೆಯಂತೆ ಬಿಂಬಿತರಾಗಿರುವ ಮತ್ತು ಮಾನಸ ಪುತ್ರಿ ಎಂದೇ ಕರೆಯಲ್ಪಡುವ ಸಹನಾ ವಿಜಯಕುಮಾರ್ ಅವರ ಬಗ್ಗೆ ಪ್ರಥಮ ಬಿ.ಎ.ವಿದ್ಯಾರ್ಥಿನಿ ಸಂಜನಾ ಮಾತನಾಡಿ ಸಹನಾ ವಿಜಯಕುಮಾರ್ ರವರ ಬರಹದಲ್ಲಿ ಎತ್ತಿರುವ ಪ್ರಶ್ನೆಗಳು, ಅವರ ವೈಚಾರಿಕತೆ ಮತ್ತು ಕಾದಂಬರಿಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಮತ್ತು ಕಾಳು ಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಗೇರುಸೊಪ್ಪದ ಚೆನ್ನ ಭೈರಾದೇವಿ ಕುರಿತು ಪ್ರಥಮ ಬಿ.ಎಸ್ಸಿ. ಯ ಸ್ಮಿತಾ ಎಂ.ಎಸ್ ಮಾತನಾಡಿದರು. ಉತ್ತಮ ಆಡಳಿತಕ್ಕೆ ಹೆಸರಾದ ಮಲೆನಾಡಿನ ರಾಣಿ ಕೆಳದಿ ಚೆನ್ನಮ್ಮನ ಕುರಿತು ಅಂತಿಮ ಬಿ.ಸಿ.ಎ ಯ ಶ್ರಾವ್ಯ ಕೆ.ಎಸ್. ಮಾತನಾಡಿ ಚೆನ್ನಮ್ಮಳ ಧೈರ್ಯ, ಆಡಳಿತ ವೈಖರಿ ಮತ್ತು ಜನಸಾಮಾನ್ಯರೊಂದಿಗಿನ ಸಂಬಂಧವನ್ನು ಸಮಗ್ರವಾಗಿ ವಿವರಿಸಿದರು.
ಕರ್ನಾಟಕದ ವಚನ ಸಾಹಿತ್ಯದಲ್ಲಿ ತನ್ನದೇ ಚಾಪು ಮೂಡಿಸಿದ ಅಕ್ಕಮಹಾದೇವಿಯ ಕುರಿತು ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಚಂದನಾ ಮಾತನಾಡಿ ಕರ್ನಾಟಕದ ಮಹಿಳೆಯರಿಗೆ ಅಕ್ಕಮಹಾದೇವಿ ಒಂದು ಆದರ್ಶ ಮತ್ತು ಭಕ್ತಿಯ ಮೂಲಕ ತನ್ನ ಹೆಸರನ್ನು ಇತಿಹಾಸದಲ್ಲಿ ದಾಖಲಿಸಿದ್ದಾಳೆ ಎಂದು ಅಭಿಪ್ರಾಯಪಟ್ಟಳು.
Sagara News ಕನ್ನಡ ಸಾಹಿತ್ಯದಲ್ಲಿ ತನ್ನದೇ ಹೆಸರು ಮಾಡಿದ ಸಬಿತಾ ಬನ್ನಾಡಿ ಕುರಿತು ಬಿ.ಸಿ.ಎ. ವಿದ್ಯಾರ್ಥಿನಿ ಸದ್ವಿನಿ ಮಾತನಾಡಿ ಅವರ ಲೇಖನ ಮತ್ತು ಬರಹಗಳು ಪ್ರಸ್ತುತತೆಯ ಕೈಗನ್ನಡಿಯಾಗಿವೆ ಮತ್ತು ನವ ಸಾಹಿತ್ಯದ ಹೊಸ ಆಯಾಮಗಳನ್ನು ಬಳಸಿಕೊಂಡು ಸಾಹಿತ್ಯವನ್ನು ರಚಿಸಿದ್ದಾರೆ ಎಂದು ಹೇಳಿದರು. ಕರ್ನಾಟಕದ ಹೆಸರನ್ನು ವಿಶ್ವದಾದ್ಯಂತ ಪರಿಚಯಿಸಿದ ಬುಕರ್ ಪ್ರಶಸ್ತಿಯ ಜೊತೆ ಗುರುತಿಸಿಕೊಂಡ ದೀಪಾ ಬಸ್ತಿ ಅವರ ಬಗ್ಗೆ ಬಿ ಕಾಂ ವಿದ್ಯಾರ್ಥಿನಿ ದಿವ್ಯಶ್ರೀ ಮಾತನಾಡಿದಳು. ಎದೆಯ ಹಣತೆ ತರ್ಜುಮೆಗಾಗಿ ಬುಕರ್ ಪ್ರಶಸ್ತಿ ದೊರೆತಿದ್ದು ಅವರ ಸಾಹಿತ್ಯಕ್ಕೆ ಹಲವಾರು ಮನ್ನಣೆಗಳು ಬಂದಿರುವುದನ್ನು ಸಮಗ್ರವಾಗಿ ವಿವರಿಸಿದರು. ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ವಿದ್ಯಾರ್ಥಿಗಳು ಮಹಿಳಾ ಸಾಧಕಿಯರ ಬಗ್ಗೆ ಅಧ್ಯಯನ ಮಾಡಿದ ವಿಷಯ ಮಂಡನೆಯು ಕೇಳುಗರನ್ನು ಆಕರ್ಷಿಸಿದರೆ, ಈ ಅವಕಾಶ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರೇರಣೆಯನ್ನು ನೀಡಿತು. ವಿದ್ಯಾರ್ಥಿನಿಯರ ಅದ್ಭುತವಾದ ಮಂಡನೆಯನ್ನು ಆಕಾಶವಾಣಿ ಕೇಂದ್ರದ ವಸಿಷ್ಠ ರವರು ಶ್ಲಾಘಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದ್ದಕ್ಕಾಗಿ ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕೆ ಕಾಲೇಜಿನ ಪ್ರಾoಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್. ರವರು ಧನ್ಯವಾದಗಳನ್ನು ಹೇಳಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಭದ್ರಾವತಿ ಆಕಾಶವಾಣಿ ಕೇಂದ್ರದ ಉದ್ಘೋಷಕರಾದ ಡಾ. ಬಸವರಾಜು ಟಿ. ಎನ್.
ರವರು ವಿದ್ಯಾರ್ಥಿನಿಯರ ಆಸಕ್ತಿಯನ್ನು ಮೆಚ್ಚಿ, ಇನ್ನಷ್ಟು ಅವಕಾಶಗಳನ್ನು ಬಳಸಿಕೊಳ್ಳುವoತೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಿರಂಜನ್ ಮೂರ್ತಿ ಟಿ, ಮಂಜುನಾಥ ಎಂ.ಎಲ್ , ರವೀಂದ್ರ , ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಕ್ಯಾl ನೂತನ ಹೆಚ್.ಡಿ, ವಿನಯ, ಚಂದನ್, ದೇವರಾಜ್ ಕೆ ಮತ್ತು ಕು. ಜೆನಿಫರ್ ಡಿಸೋಜ, ಕು. ನಂದನ ಟೆಂಬೆ ಇವರು ಪಾಲ್ಗೊಂಡಿದ್ದರು.
Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.
Date:
