Sunday, March 22, 2026
Sunday, March 22, 2026

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

Date:

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ ಮೇಲೆ ಚಿರತೆ ದಾಳಿ ನಡೆಸಿದೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಡಗಂಟಿ ಗ್ರಾಮದ ಸುದೀಪ್, ಸಂಜೆ ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿಗೆ ಮೇವು ತರಲು ಹೋಗಿದ್ದಾಗ ಚಿರತೆ ದಿಢೀರ್ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬುವರು ಶನಿವಾರ ಬೆಳಿಗ್ಗೆ ಗದ್ದೆಗೆ ನೀರು ಬಿಡುವುದಕ್ಕೆ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಸಂಜೆ ತಡಸನಹಳ್ಳಿ, ಅಡಗಂಟಿ ಗ್ರಾಮದ ನಡುವಿನ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ ಎಂಬುವರ ಮೇಲೂ ಚಿರತೆ ದಾಳಿ ನಡೆಸಲು ಯತ್ನಿಸಿದ್ದು, ಪ್ರಥಮ ಚಿಕಿತ್ಸೆ ಪಡೆದು ಅವರು ಮನೆಗೆ ತೆರಳಿದ್ದಾರೆ.
ತಡಸನಹಳ್ಳಿ, ಅಡಗಂಟಿ ಗ್ರಾಮದ ಜಮೀನಿನಲ್ಲಿ, ಮುತ್ತಗಿ ಕಿರು ಅರಣ್ಯ ಸೇರಿ ಮೂರು ಕಡೆ ಚಿರತೆ ಸೆರೆಗೆ ಬೋನ್ ಇಡಲಾಗಿದೆ.‌

Cheetah Attack ಚಿರತೆ ಮನುಷ್ಯನ ಮೇಲೆ ದಾಳಿ ಮಾಡುವುದು ಕಡಿಮೆ. ಅದು ಯಾವುದಾದರೂ ರೋಗದಿಂದ ಬಳಲುತ್ತಿರಬಹುದು ಅಥವಾ ವಿಚಲಿತವಾಗಿರುವ ಕಾರಣಕ್ಕೆ ಮನುಷ್ಯರ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಜಾವಿದ್ ಅಂಗಡಿ ತಿಳಿಸಿದ್ದಾರೆ.

ಚಿರತೆ ದಾಳಿಯಿಂದಾಗಿ ಜನ ಆತಂಕಕ್ಕೊಳಗಾಗಿದ್ದು, ಜಮೀನಿಗೆ ತೆರಳುವುದಕ್ಕೆ ಹೆದರುತ್ತಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಮೀನಿಗೆ ತೆರಳುವ ಸಮಯದಲ್ಲಿ ರೈತರು ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ...

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ...

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801...

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ...

Yakshagana ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸುವ ಯಕ್ಷಗಾನ ಕಲಾರಂಗ ಸಂಸ್ಥೆ ಬಿಟ್ಟರೆ ಮತ್ತೊಂದು ಕಂಡಿಲ್ಲ- ಡಾ.ಪಿ.ನಾರಾಯಣ

Yakshagana ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. (ಶ್ರೀಮತಿ...