Saturday, March 21, 2026
Saturday, March 21, 2026

S. N. Channabasappa ಕೊಳಚೆ ಪ್ರದೇಶ ವಾಸಿಗಳಿಗೆ ಇರುವ ತಾಂತ್ರಿಕ ಅಡೆತಡೆ ನಿವಾರಿಸಿ,ಹಕ್ಕುಪತ್ರ ವಿತರಿಸಿ- ಎಸ್.ಎನ್.ಚನ್ನಬಸಪ್ಪ.

Date:

S. N. Channabasappa ಶಿವಮೊಗ್ಗ ನಗರದ 6 ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲು ಇರುವ ತಾಂತ್ರಿಕ ಅಡೆತಡೆಗಳನ್ನು ತಕ್ಷಣ ನಿವಾರಿಸುವಂತೆ ಶಾಸಕ ಶ್ರೀ ಎಸ್.ಎನ್. ಚನ್ನಬಸಪ್ಪ ಅವರು ವಸತಿ ಸಚಿವರಿಗೆ ಒತ್ತಾಯಿಸಿದರು.

ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ಶಾಸಕರು ಈ ವಿಷಯದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರ ಸೂಚನೆಯಂತೆ ಇಂದು ವಿಧಾನಸೌಧದಲ್ಲಿ ವಸತಿ ಸಚಿವ ಶ್ರೀ ಜಮೀರ್ ಅಹ್ಮದ್ ಖಾನ್ ಅವರ ನೇತೃತ್ವದಲ್ಲಿ ವಿಶೇಷ ಸಭೆ ನಡೆಯಿತು. ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಖಾರಾಬು ಕಟ್ಟೆ, ಕೆರೆ ಅಂಗಳ ಹಾಗೂ ಸರ್ಕಾರಿ ಜಮೀನುಗಳಲ್ಲಿ ದಶಕಗಳಿಂದ ನೆಲೆಸಿರುವ ಕುಟುಂಬಗಳಿಗೆ ಕಾನೂನುಬದ್ಧ ಭದ್ರತೆ ಒದಗಿಸುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.

S. N. Channabasappa ಸಭೆಯಲ್ಲಿ ಉಪಸ್ಥಿತರಿದ್ದ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಪ್ರಭುಲಿಂಗ ಕವಲಿಕಟ್ಟಿ ಅವರು, ಜಮೀನು ಲಭ್ಯತೆ ಮತ್ತು ವರ್ಗಾವಣೆ ಪ್ರಕ್ರಿಯೆಯಲ್ಲಿರುವ ಕಾನೂನು ತೊಡಕುಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಮತ್ತು ಹಕ್ಕುಪತ್ರ ವಿತರಣೆಗೆ ಆದ್ಯತೆ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ವಸತಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಹಾಗೂ ಕೊಳಗೇರಿ ಮಂಡಳಿಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಬಡವರಿಗೆ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ಧವಾಗಿರಬೇಕು ಎಂದು ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್...

Yakshagana ಶಿವಮೊಗ್ಗದ ವರದಾ ಐತಾಳ್ ಅವರಿಗೆ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಸಾಧಕಿ ಪ್ರಶಸ್ತಿ” ಪುರಸ್ಕಾರ.

Yakshagana ತಾll 15.03.2026 ರಂದು ಯಕ್ಷಗಾನ ದಲ್ಲಿ ಹೊಸಸಾಧ್ಯತೆಯ ಅನಾವರಣಕ್ಕಾಗಿ ಡಾllಶಿವರಾಮ...

Ramadan ಸಮಾಜದಲ್ಲಿ ಶಾಂತಿ – ಸೌಹಾರ್ದದಿಂದ ಬಾಳಬೇಕು- ಮೌಲಾನಾ ಮುಫ್ತಿ ತಪ್ಜಿಲ್ ಆಲಂ ಖಾಸ್ಮಿ

Ramadan ತಿಂಗಳು ಪೂರ್ತಿ ಉಪವಾಸ ವ್ರತ ಆಚರಣೆಯ ನಂತರ ಮುಸ್ಲಿಂ ಬಾಂಧವರು...

Chess ಮಾರ್ಚ್ 25 ರಿಂದ ಶಿವಮೊಗ್ಗದಲ್ಲಿ ಬೇಸಿಗೆ ರಜೆ ನಿಮಿತ್ತ ಚೆಸ್ ತರಬೇತಿ ಶಿಬಿರ.

Chess ಶಿವಮೊಗ್ಗ ನಗರದ ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯಿಂದ ಈ...