ಉಮೇಶ್ ಎಸ್. ಈ. (ಡಿ.ಎ.ಆರ್ ಎ. ಆರ್. ಎಸ್ ಐ) ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ ಯು ರವರು ” CBR ರಾಷ್ಟ್ರೀಯ ಕಾನೂನು ಕಾಲೇಜು” ಶಿವಮೊಗ್ಗ ಮೂರನೇ ವರ್ಷದ ಪದವಿ ಪಡೆಯುತ್ತಿದ್ದು. ಮತ್ತು “ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಗರಡಿಯಲ್ಲಿ ಕರಾಟೆ ಅಭ್ಯಾಸ ಪಡೆದು ದೀಕ್ಷಾ ಯು ರವರು ಮಾರ್ಚ್ 10 ರಂದು ನಡೆದ ಧಾರವಾಡ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂಟರ್ ಯುನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಮೈನಸ್ 68 ಕೆಜಿ ಕಮಿಟೆ ವಿಭಾಗದಲ್ಲಿ ಆಯ್ಕೆಯಾಗಿ, “ಮಾರ್ಚ್ 17 ಮತ್ತು 18 ರಂದು ಭೂಪಾಲ್ (M P) ನಲ್ಲಿ ನಡೆದ ಸೇಜ್ ವಿಶ್ವವಿದ್ಯಾನಿಲಯ ಸೌತ್- ವೆಸ್ಟ್ ಇಂಟೆರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಟಾಪ್ 08 ನೇ ಸ್ಥಾನದಲ್ಲಿ ಆಯ್ಕೆಯಾಗಿ ಮತ್ತು ಅಸ್ಸಾಂನಲ್ಲಿ ನಡೆಯಲಿರುವ ಆಲ್ ಇಂಡಿಯಾ ಯೂನಿವರ್ಸಿಟಿ ಬಾಲಕಿಯರ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಆಯ್ಕೆಯಾದಂತಹ ಕ್ರೀಡಾಪಟುವಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾದಿಕ್ ತರಬೇತಿದಾರರ,
ಸನ್ ಸೈ ಮಂಜುನಾಥ್ ಮತ್ತು ಅಪೂರ್ವ, ಮಹಮ್ಮದ್ ಗೌಸ್ ಸಂಸ್ಥೆಯ ಸದಸ್ಯರು ಅಭಿನಂದಿಸಿದ್ದಾರೆ.
