Thursday, March 19, 2026
Thursday, March 19, 2026

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Date:

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ ದತ್ತ ಅವರಿಗೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ಈ ನಾಡು ಕಂಡ ಅಪ್ರತಿಮ ಪ್ರಾಮಾಣಿಕ ರಾಜಕಾರಣಿ. ಕಡು ಬಡತನದಿಂದ ಸಾಲ ಸೂಲ ಮಾಡಿ ತನ್ನ ಪ್ರಾಮಾಣಿಕ ರಾಜಕಾರಣದಿಂದ ಕಡು ಬಡವರ ಸೇವೆ ಮಾಡಿದವರು ಕಾಗೋಡು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಸಿದ್ಧರಾಗಿ ಡಾ ರಾಮಮನೋಹರ ಲೋಹಿಯವರ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡು ಶಿವಮೊಗ್ಗ ಜಿಲ್ಲೆಯನ್ನು ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು. ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಇಡೀ ವಿಧಾನಸಭೆ ನಡುಗುತ್ತಿತ್ತು. ಅವರಂತಹ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ ಮತ್ತೆ ನೋಡಲು ಸಾಧ್ಯವಿಲ್ಲವಾಗಿದೆ. ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬದುಕಿದ್ದರೆ ಅವರಿಗೆ 101 ವರ್ಷ ವಯಸ್ಸು ಆಗುತ್ತಿತ್ತು ಅವರ ಹೆಸರಿನಲ್ಲಿರುವ ಈ ಪ್ರಶಸ್ತಿ ನನಗೆ ಕೊಟ್ಟಿರುವುದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದರು

ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಎಂ ಎನ್ ಸುಂದರ್ ರಾಜ್ ರವರು ಅವರು ಮೂಲತ ರಾಜಕಾರಣಿಯಾಗಿದ್ದರು ತನ್ನೊಳಗಿನ ಬರಹಗಾರ ಲೇಖಕ ಯಾವಾಗಲೂ ಜಾಗೃತನಾಗಿದ್ದಾನೆ ಇದರಿಂದ ಅವರು ತಮ್ಮ ಪ್ರಾಮಾಣಿಕ ರಾಜಕಾರಣವನ್ನು ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು

ನಂತರ ಮಾತನಾಡಿದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ್ ರವರು ವೈ ಎಸ್ ವಿ ದತ್ತ ರಂತಹ ನೇರ ನಿಷ್ಟುರ ಪ್ರಾಮಾಣಿಕ ಆದರ್ಶ ರಾಜಕಾರಣವನ್ನು ಮಾಡಿಕೊಂಡು ಬಂದವರು ಸಾಮಾಜಿಕ ರಾಜಕೀಯ ಸೇವೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ರಾಜಕೀಯಕ್ಕೆ ಮೌಲ್ಯವನ್ನು ತುಂಬಿಕೊಟ್ಟವರು ಅವರು ಎಂದು ವಿಶ್ಲೇಷಣೆ ಮಾಡಿದರು

Shimoga News ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ವೋದಯ ಜಿಲ್ಲಾ ಮಂಡಲದ ಕಾರ್ಯದರ್ಶಿಯಾದ ರೊಟೇರಿಯನ್ ಜಿ ವಿಜಯ್ ಕುಮಾರ್ ಅವರು ವೈ ಎಸ್ ವಿ ದತ್ತ ರವರ ಪ್ರಾಮಾಣಿಕ
ರಾಜಕಾರಣ,ಸಾಹಿತ್ಯ,ಲೇಖಕ ಬರಹಗಾರರಾಗಿ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ಅದು ಸಹ ನಮ್ಮ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ಹೆಸರಿನ ಈ ಪ್ರಶಸ್ತಿಗೆ ಅವರು ಅರ್ಹ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನನ್ನ ಕನಸಿನ ಶಿವಮೊಗ್ಗದ ಎನ್ ಗೋಪಿನಾಥ್ ರವರು ಸುಮಾರು 40 ವರ್ಷದಿಂದ ರಾಜಕಾರಣದಲ್ಲಿದ್ದರು ಸರಳತೆಯಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು

ಇದೆ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್ ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ ಆರ್ ಜೆ ಗಳಾದ ಗಣೇಶ್ ಕೆಂಚನ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್ ರುದ್ರಪ್ಪ ಚೀಲು, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...