ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಹುಟ್ಟು ಹಬ್ಬಕ್ಕೂ ಯುದ್ಧದ ಎಫೆಕ್ಟ್ ತಟ್ಟಿದೆ.
ಶಿವಮೊಗ್ಗದ ಪುನಿತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗ್ಯಾಸ್ ನ ತೊಂದರೆ ಉಂಟಾಗಿತ್ತು.
ಎರಡು ಸಾವಿರ ಜನರಿಗೆ ಊಟದ ವ್ಯವಸ್ಥೆಗೆ ಮಾಡಲಾಗಿದ್ದು, ಗ್ಯಾಸ್ ಇಲ್ಲದೇ ಅಭಿಮಾನಿಗಳು ಪರದಾಡಿದ್ದಾರೆ.
ಗ್ಯಾಸ್ ಇಲ್ಲದೇ ಅಡುಗೆ ಅಭಿಮಾನಿಗಳು ಸೌದೆಯಲ್ಲಿ ಅಡಿಗೆ ಮಾಡಿದ್ದಾರೆ.
ರೈಸ್ ಬಾತ್ , ಪಾನಕ ಸೇರಿದಂತೆ ಹಲವು ಆಹಾರ ತಯಾರಿ ಮಾಡಿದ್ದಾರೆ.
ಗ್ಯಾಸ್ ಕೊರತೆಯಿಂದ ಹೆಚ್ಚುವರಿ ಹಣ ಖರ್ಚಾಗಿದ್ದು, ಸೌದೆಯ ಬೆಲೆ ಗಗನಕ್ಕೇರಿದೆ.
ಮೊದಲು 10 ಕೆಜಿ ಸೌದೆಗೆ 50 ರೂಪಾಯಿ ಇದ್ದ ಸೌದೆ ಈಗ 90 ರೂಪಾಯಿಗೆ ಏರಿಕೆಯಾಗಿದೆ.
