Sunday, March 15, 2026
Sunday, March 15, 2026

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಕ್ಕೆ” ಡಿಜಿಟಲ್ ಸ್ಟುಡಿಯೊ” ಆರಂಭಿಸುವ ಉದ್ದೇಶವಿದೆ- ಮಧು ಬಂಗಾರಪ್ಪ.

Date:

Madhu Bangarappa ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ- ಶೈಕ್ಷಣಿಕ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯನ್ನು ಒದಗಿಸುವ ‘ಡಿಜಿಟಲ್ ಸ್ಟುಡಿಯೋ’ ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ನುಡಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗಾಗಿ ಮಲ್ಲಿಗೇನಹಳ್ಳಿಯ
ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಇಲ್ಲಿ ಏರ್ಪಡಿಸಲಾಗಿದ್ದ ‘ ನಾನು ವಿಜ್ಞಾನಿ’ ತರಬೇತಿ ಕಾರ್ಯಾಗಾರದಲ್ಲಿ ಶವಿವಾರ ಸಂಜೆ ಭಾಗವಹಿಸಿ ಮಾತನಾಡಿದರು.
ಈಗಾಗಲೇ ಡಿಜಿಟಲ್ ಸ್ಟುಡಿಯೋಗಾಗಿ ರೂ. ೧೫ ಲಕ್ಷ ಮೀಸಲಿಡಲಾಗಿದೆ. ಇಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸಣ್ಣ ಸಣ್ಣ ವಿಡಿಯೋ ತುಣುಕುಗಳ‌ ಮೂಲಕ ಪ್ರದರ್ಶಿಸಬೇಕು. ಆ ವಿಡಿಯೋಗಳನ್ನು ಯೂಟ್ಯೂಬ್ ನಲ್ಲಿ ಹಂಚಿಕೊಳ್ಳಲಾಗುವುದು. ಆಗ ವಿದ್ಯಾರ್ಥಿಗಳ ರೀಲ್ಸ್ ಗೀಳು ಸಹ ಕಡಿಮೆಯಾಗಲಿದ್ದು, ವಿನೂತನ ವೈಜ್ಞಾನಿಕ ಆವಿಷ್ಕಾರಗಳು, ಇತರೆ ವಿಷಯ ಕಲಿಕೆ ಕಡೆ ಹೆಚ್ಚಿನ ಗಮನ ಹರಿಯಲಿದೆ ಎಂದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಈ ತರಬೇತಿ‌ ಮೂಲಕ ಗ್ರಾಮೀಣ ಜ್ಞಾನ ಕೇಂದ್ರಗಳನ್ನು ಕೌತುಕದ ವಿಜ್ಞಾನ ಕಲಿಕಾ ಕೇಂದ್ರಗಳನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಲಾಗಿದ್ದು ಅರಿವು ಕೇಂದ್ರದ ಗ್ರಂಥಪಾಲಕರಿಗಾಗಿ ನಾನು ವಿಜ್ಞಾನಿ ಎಂಬ ವಿಜ್ಞಾನ ಮತ್ತು ಖಗೋಳಶಾಸ್ತ್ರ ಕಾರ್ಯಾಗಾರವನ್ನು ಯಶಸ್ವಿಯಾಗಿ ಪ್ರಾರಂಭಿಸುವ ಮೂಲಕ ವೈಜ್ಞಾನಿಕ ಮನೋಭಾವವನ್ನು ಬೆಳೆಸುವಲ್ಲಿ ಪ್ರವರ್ತಕ ಹೆಜ್ಜೆಯನ್ನು ಇಡಲಾಗಿದೆ.
Madhu Bangarappa ಈ ಪ್ರಾಯೋಗಿಕ ಅನುಭವದಲ್ಲಿ, ಗ್ರಂಥಪಾಲಕರು ತಮ್ಮದೇ ಆದ ದೂರದರ್ಶಕಗಳನ್ನು ವಿನ್ಯಾಸಗೊಳಿಸಿ, ತಯಾರಿಸಿದ್ದಾರೆ ಹಾಗೂ ಇವುಗಳ‌ಮೂಲಕ ಗ್ರಹಗಳು ಮತ್ತು ಉಪಗ್ರಹಗಳನ್ನು ವೀಕ್ಷಿಸಬಹುದಾಗಿದೆ.
ಈ ಭವಿಷ್ಯದ ಉಪಕ್ರಮದ ಭಾಗವಾಗಿ, ಶಿವಮೊಗ್ಗದಾದ್ಯಂತ ವಿಜ್ಞಾನ ಕ್ಲಬ್‌ಗಳನ್ನು ಸ್ಥಾಪಿಸಲಾಗುವುದು. ಗ್ರಂಥಪಾಲಕರು ಹವ್ಯಾಸಿ ಖಗೋಳಶಾಸ್ತ್ರಜ್ಞರಾಗಿ ಹೊಸ ಪಾತ್ರವನ್ನು ವಹಿಸಿಕೊಳ್ಳುತ್ತಾರೆ, ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಸಮುದಾಯಗಳು ಬ್ರಹ್ಮಾಂಡದ ಅದ್ಭುತಗಳನ್ನು ಅನ್ವೇಷಿಸಲು ಮತ್ತು ವೈಜ್ಞಾನಿಕ ಕುತೂಹಲವನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಾರೆಂದು ಭರವಸೆ ವ್ಯಕ್ತಪಡಿಸಿದರು.
ವಿಜ್ಞಾನಿಗಳು ಮಾತನಾಡಿ, ಟೆಲಿಸ್ಕೋಪ್ ಗಳಿಗೆ ಬಹಳ ಬೇಡಿಕೆ ಇದೆ. ಗ್ರಂಥಪಾಲಕರೇ ಸಿದ್ದಪಡಿಸಿರುವ ಈ ಟೆಲಿಸ್ಕೋಪ್ ಮೂಲಕ ರಾತ್ರಿಯಲ್ಲಿ‌ ನಕ್ಷತ್ರಗಳು, ಚಲಿಸುತ್ತಿರವ ಸ್ಯಾಟಲೈಟ್ಗಳು, ಈಗ ಗುರು ಗ್ರಹವನ್ನು ಈ ಟೆಲಿಸ್ಕೋಪ್ ಮೂಲಕ ಹತ್ತಿರದಿಂದ ಕಾಣಬಹುದು.
ಗುರುಗ್ರಹ ೪೦ ಪಟ್ಟು ಹತ್ತಿರ ಕಾಣುತ್ತದೆ, ಪಶ್ಚಿಮ ಘಟ್ಟದಲ್ಲಿ‌ನ ಆಕಾಶ ಅದ್ಭುತವಾಗಿ ಕಾಣು ತ್ತದೆ ಎಂದರು.
ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಓ ಹೇಮಂತ್ ಎನ್, ಸನ್ನಿಧಿ ಸೆಂಟರ್ ಫಾರ್ ಪ್ಯಾಸ್ಟರಲ್ ರಿನೀವಲ್ ಚರ್ಚ್ ಮುಖ್ಯಸ್ಥ ಫಾ.ಪಿಂಟೋ, ವಿಜ್ಞಾನಿಗಳು, ಗ್ರಂಥಪಾಲಕರು, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Priyank Kharge ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಎದುರಿಸಲು ಮುಂಜಾಗ್ರತಾ ಕ್ರಮ- ಪ್ರಿಯಾಂಕ್ ಖರ್ಗೆ.

Priyank Kharge ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಎದುರಾಗಲಿರುವ ಕುಡಿಯುವ ನೀರಿನ...

Shivanand Patil ಯಶವಂತಪುರದಲ್ಲಿ ಶೀಘ್ರವೇ ಟೆಕ್ಸ್ ಟೈಲ್ ಪಾರ್ಕ್ ಶಂಕುಸ್ಥಾಪನೆ- ಜವಳಿ ಸಚಿವ ಶಿವಾನಂದ ಪಾಟೀಲ್.

Shivanand Patil ಪಾರಂಪರಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಉತ್ಪನ್ನಗಳಿಗೆ...