Department of Health and Family Welfare ರಾಜ್ಯ ಸರ್ಕಾರದ ಈ ಮಹತ್ವದ ಯೋಜನೆಯ ಮೂಲಕ ಗಂಭೀರ ಶ್ರವಣ ಸಮಸ್ಯೆ ಹೊಂದಿರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ 25 ಯಶಸ್ವಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ ಎಂದು ಇಎನ್ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಶ್ರೀಧರ್ ತಿಳಿಸಿದರು.
ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶ್ರವಣ ಸಂಜೀವಿನಿ ಕೋಕ್ಲಿಯರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳಿಗೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸುತ್ತಿರುವ ಕುರಿತು ಮಾಹಿತಿ ನೀಡಲು ಗುರುವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯನ್ನುದ್ದೇಶಿ ಅವರು ಮಾತನಾಡಿದರು.
ಹುಟ್ಟು ಕಿವುಡು ಇರುವ ಮಕ್ಕಳಿಗೆ ನಡೆಸುವ ಉನ್ನತ ಮಟ್ಟದ ಮತ್ತು ಸಂಕೀರ್ಣವಾದ ಶಸ್ತ್ರ ಚಿಕಿತ್ಸೆ ಇದಾಗಿದ್ದು ಈ ಯೋಜನೆಯಡಿ ಆಸ್ಪತ್ರೆಯಲ್ಲಿ 01-03-2023 ರಂದು ಮೊದಲ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಪ್ರಾರಂಭಿಸಲಾಯಿತು. ಇಂದಿಗೆ ಆಸ್ಪತ್ರೆಯಲ್ಲಿ 25ನೇ ಕೋಕ್ಲಿಯರ್Department of Health and Family Welfare ಹುಟ್ಟು ಕಿವುಡು ಮಕ್ಕಳಿಗೆ ಆಶಾಕಿರಣ-ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದ್ದು, ಇದು ಮಕ್ಕಳ ಭವಿಷ್ಯವನ್ನು ಬೆಳಗಿಸುವ ಮಹತ್ವದ ಹೆಜ್ಜೆಯಾಗಿದೆ. ಸಾಮಾನ್ಯ ಜನರು ಈ ಯೋಜನೆಯ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಕೊಡಿಸುವಂತೆ ಮನವಿ ಮಾಡಿದರು.
ಈ ಸೌಲಭ್ಯವು ಬಿಪಿಎಲ್ ಹಾಗೂ ಎಪಿಎಲ್ ಎಂಬ ಭೇದವಿಲ್ಲದೆ ಎಲ್ಲಾ ಅರ್ಹ ರೋಗಿಗಳಿಗೆ ಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಇದೇ ಶಸ್ತ್ರಚಿಕಿತ್ಸೆಯ ಒಟ್ಟು ವೆಚ್ಚವು ಸಾಮಾನ್ಯವಾಗಿ ಸುಮಾರು ರೂ. 12 ರಿಂದ 15 ಲಕ್ಷದವರೆಗೆ ಆಗುತ್ತದೆ. ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಯೋಜನೆಯಡಿ ಈಗಾಗಲೇ 25 ಮಕ್ಕಳಿಗೆ ಯಶಸ್ವಿಯಾಗಿ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
ಈ ಯೋಜನೆಯಡಿ ಇಂಪ್ಲಾಂಟ್ ಸಾಧನದ ವೆಚ್ಚಕ್ಕಾಗಿ ಸುಮಾರು ರೂ. 6,00,000/- ಹಾಗೂ ಶಸ್ತ್ರಚಿಕಿತ್ಸೆ ಮತ್ತು ನಂತರದ ಪುನರ್ವಸತಿ (ರಿಹ್ಯಾಬಿಲಿಟೇಶನ್)ಗಾಗಿ ಒಟ್ಟು ಸುಮಾರು ರೂ. 1,75,000/- ಅನುದಾನವನ್ನು ಸರ್ಕಾರದಿಂದ ನೀಡಲಾಗುತ್ತದೆ. ಹೀಗಾಗಿ ಒಟ್ಟು ಸುಮಾರು ರೂ. 7,75,000/-ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.
ಶಸ್ತçಚಿಕಿತ್ಸೆ ನಂತರ ಎಲ್ಲಾ 25 ಮಕ್ಕಳನ್ನು ಮೈಸೂರಿನ ಎಐಐಎಸ್ ಹೆಚ್ ಸಂಸ್ಥೆಗೆ ಆಡಟರಿ ವರ್ಬಲ್ ಥೆರಪಿಗಾಗಿ ರೆಫರ್ ಮಾಡಲಾಗಿದೆ. ಚಿಕಿತ್ಸೆ ನಂತರ ಹೆಚ್ಚಿನ ಮಕ್ಕಳಲ್ಲಿ ಕೇಳುವ ಸಾಮರ್ಥ್ಯ ಮತ್ತು ಮಾತಿನ ಕೌಶಲ್ಯಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬAದಿದೆ.
Department of Health and Family Welfare ಈ ಶಸ್ತ್ರಚಿಕಿತ್ಸೆಯನ್ನು ಇಎನ್ ಟಿ ವಿಭಾಗದ ಸಹ ಪ್ರಾಧ್ಯಾಪಕರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಎಸ್. ಅವರು ನೆರವೇರಿಸಿದ್ದು, ಮೆಂಟರ್ ಸರ್ಜನ್ ಆಗಿ ಡಾ. ಶಂಕರ್ ಮೆಡಕೇರಿ ಅವರು ಮಾರ್ಗದರ್ಶನ ನೀಡಿದ್ದಾರೆ. ಇಎನ್ ಟಿ ವಿಭಾಗದ ವೈದ್ಯರು, ಸಿಬ್ಬಂದಿ ಹಾಗೂ ಆಸ್ಪತ್ರೆಯ ಆಡಳಿತ ವರ್ಗದ ಸಹಕಾರದೊಂದಿಗೆ, ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ನಿರ್ದೇಶಕರ ಸಹಾಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಮಕ್ಕಳಲ್ಲಿ ಗಂಭೀರದಿಂದ ಅತ್ಯಂತ ಗಂಭೀರವಾದ ಶ್ರವಣ ಸಮಸ್ಯೆಯನ್ನು ಬೇಗ ಗುರುತಿಸುವುದು, ಅರ್ಹ ಮಕ್ಕಳನ್ನು ಗುರುತಿಸಿ ಮೊದಲಿಗೆ ಹಿಯರಿಂಗ್ ಏಡ್ಸ್ ಮೂಲಕ ಟ್ರಯಲ್ ಥೆರಪಿ ನೀಡುವುದು, ಅಗತ್ಯವಿದ್ದರೆ ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡುವುದು ಹಾಗೂ ಶಸ್ತ್ರಚಿಕಿತ್ಸೆಯ ನಂತರ 2 ವರ್ಷಗಳ ಕಾಲ ಆಡಿಟರಿ ವರ್ಬಲ್ ಥೆರಪಿ (ಎವಿಟಿ) ಮೂಲಕ ಪುನರ್ವಸತಿ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.
ಆರೋಗ್ಯ ಕೇಂದ್ರಗಳು, ಎನ್ ಐ ಸಿಯು, ಎಸ್ ಎನ್ ಸಿಯು, ಮಕ್ಕಳ ಆಸ್ಪತ್ರೆಗಳು ಹಾಗೂ ಸಮುದಾಯ ಮಟ್ಟದಲ್ಲಿ ಆಶಾ, ಎಎನ್ಎಂ, ಆರ್ಬಿಎಸ್ ಕೆ ಹಾಗೂ ಎನ್ ಪಿಪಿಸಿಡಿ ತಂಡಗಳು ಶ್ರವಣ ತಪಾಸಣೆ ನಡೆಸುತ್ತಿದ್ದು, ಇಲ್ಲಿ ಶ್ರವಣ ಸಮಸ್ಯೆ ಕಂಡುಬAದ ಮಕ್ಕಳನ್ನು ಜಿಲ್ಲಾ ಮಟ್ಟದ ಜಿಲ್ಲಾ ಕೋಕ್ಲಿಯರ್ ಇಂಪ್ಲಾಂಟ್ ಕಮಿಟಿಗೆ ರೆಫರ್ ಮಾಡಲಾಗುತ್ತದೆ ಎಂದರು.
ಕೋಕ್ಲಿಯರ್ ಇಂಪ್ಲಾAಟ್ ಗೆ ಅರ್ಹತೆ ; ಎರಡೂ ಕಿವಿಗಳಲ್ಲಿ ಗಂಭೀರವಾದ ಕಿವುಡು ಇರುವ ಮಕ್ಕಳುಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಸಾಮಾನ್ಯವಾಗಿ 8 ರಿಂದ 2 ವರ್ಷ ವಯಸ್ಸಿನ ಮಕ್ಕಳು ಮುಖ್ಯವಾಗಿ ಪರಿಗಣನೆಗೆ ಒಳಪಡುತ್ತಾರೆ. ಹಿಯರಿಂಗ್ ಏಡ್ಸ್ ಮೂಲಕ ಕನಿಷ್ಠ 3 ತಿಂಗಳ ಹಿಯರಿಂಗ್ ಏಡ್ ಥೆರಪಿ ಪಡೆದಿರಬೇಕು. ಎವಿ ಥೆರಪಿಯಲ್ಲಿ ಕನಿಷ್ಠ 30 ಸೆಷನ್ಗಳಲ್ಲಿ ಭಾಗವಹಿಸಿರುವುದಕ್ಕೆ ದಾಖಲೆ ಇರಬೇಕು, ಸಿಟಿ ಮತ್ತು ಎಂಆರ್ಐ ಪರೀಕ್ಷೆಗಳಲ್ಲಿ ಕೋಕ್ಲಿಯಾ ಹಾಗೂ ಶ್ರವಣ ನರಗಳು ಶಸ್ತ್ರಚಿಕಿತ್ಸೆಗೆ ಅನುಕೂಲಕರವಾಗಿರಬೇಕು. ಐಕ್ಯು 80 ಕ್ಕಿಂತ ಹೆಚ್ಚು ಇರಬೇಕು ಮತ್ತು ಮಗು ಸ್ಪೀಚ್ ಪ್ರೊಸೆಸರ್ನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ಇರಬೇಕು. ಶಸ್ತ್ರಚಿಕಿತ್ಸೆಗೆ ಮೊದಲು ಮಕ್ಕಳತಜ್ಞರು ಮತ್ತು ಅರಿವಳಿಕೆ ತಜ್ಞರಿಂದ ವೈದ್ಯಕೀಯ ಅನುಮತಿ ಪಡೆಯಬೇಕು. ಹಾಗೂ ಕೋಕ್ಲಿಯರ್ ಇಂಪ್ಲಾಂಟ್ ಮಾಡುವ ಮುನ್ನ ಕಡ್ಡಾಯವಾಗಿ ಆಡಿಯೋಲಾಜಿಕಲ್ ಪರೀಕ್ಷೆಗಳನ್ನು ಮತ್ತು ರೇಡಿಯಾಲಜಿಕಲ್ ಪರೀಕ್ಷೆಗಳನ್ನು ನಡೆಸಲಾಗುವುದು ಎಂದರು.
ಡಾ.ಶAಕರ್ ಮೆಡಿಕೇರಿ ಮಾತನಾಡಿ, ಮೊದಲಿಗೆ 1 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಈ ಶಸ್ತçಚಿಕಿತ್ಸೆ ನಡೆಸಲಾಗುತ್ತಿತ್ತು. ಈಗ 2 ವರ್ಷದೊಳಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆ ಈ ಶಸ್ತçಚಿಕಿತ್ಸೆ ಅತ್ಯುತ್ತಮವಾಗಿದೆ ಎಂದ ಅವರು ಹೇಗೆ ಕೋಕ್ಲಿಯರ್ ಇಂಪ್ಲಾAಟ್ ಅಳವಡಿಸಲಾಗುವುದು ಎಂದು ವಿವರಿಸಿದ ಅವರು ಈ ಶಸ್ತ್ರಚಿಕಿತ್ಸೆ ಪಡೆದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಯಶಸ್ವಿ ಜೀವನ ಮಾಡುತ್ತಿರುವ ಕುರಿತು ತಿಳಿಸಿದರು.
1020 ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆ ನಡೆಸಿರುವ ಡಾ.ಶಂಕರ್ ಮೆಡಿಕೇರಿ ಇವರನ್ನು ಸನ್ಮಾನಿಸಲಾಯಿತು.
ಕೋಕ್ಲಿಯರ್ ಇಂಪ್ಲಾಂಟ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಐಶಾನಿ ಎಸ್ ಭಟ್ ರವರ ತಾಯಿ ತಮ್ಮ ಮಗಳ ಕಿವುಡು, ಪತ್ತೆ ಹಚ್ಚಿದ ಬಗೆ ಹಾಗೂ ಕೋಕ್ಲಿಯರ್ ಇಂಪ್ಲಾಂಟ್, ನಂತರದ ಅನುಭವಗಳನ್ನು ಹಂಚಿಕೊAಡರು.
ಪತ್ರಿಕಾಗೋಷ್ಟಿಯಲ್ಲಿ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಗೀತಾ ಸುಶೀಲ್ ಕುಮಾರ್, ಇಎನ್ಟಿ ವಿಭಾಗದ ಡಾ.ಚಂಪಾ, ಶುಶ್ರೂಷಕಾಧೀಕ್ಷಕರಾದ ಶೇಷಮ್ಮ ಹಾಜರಿದ್ದರು.
