Wednesday, March 11, 2026
Wednesday, March 11, 2026

Chamber of Commerce Shivamogga ಮಹಿಳೆಯರು ಸಂಘಟಿತರಾಗುವುದು ಅತ್ಯಂತ ಅವಶ್ಯ : ಜಿ.ವಿಜಯಕುಮಾರ್

Date:

Chamber of Commerce Shivamogga ಸಮಾಜದ ಬೆಳವಣಿಗೆಗೆ ಮಹಿಳೆಯರ ಪಾತ್ರ ದೊಡ್ಡದು. ಮಹಿಳೆಯರು ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಲು, ಆರ್ಥಿಕವಾಗಿ ಸದೃಢರಾಗಲು ಸಂಘಟಿತರಾಗುವುದು ಮುಖ್ಯ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಹೇಳಿದರು
ಶಿವಮೊಗ್ಗ ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಜಿಲ್ಲಾ ಸರ್ವೋದಯ ಮಂಡಲದಿಂದ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸಾಧನೆ ಮಾಡಿದ ಮಹಿಳೆಯರು ಮತ್ತು ಆಕಾಶವಾಣಿ ಆರ್ ಜೆ ಬಳಗದವರನ್ನು ಸನ್ಮಾನಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಸ್ವಾವಲಂಬಿಯಾಗಬೇಕು. ಮಹಿಳೆ ತನ್ನ ಪ್ರಯತ್ನ, ಪರಿಶ್ರಮದಿಂದ ಈಗ ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ತಾನು ಪಡೆದುಕೊಂಡ ಶಿಕ್ಷಣದಿಂದ ಸ್ವತಂತ್ರವಾಗಿ ಜೀವನ ಮಾಡುವ ಶಕ್ತಿ ಹೊಂದಿದ್ದಾಳೆ. ಮಹಿಳೆಯರ ಅಭಿವೃದ್ಧಿ ಎಂದರೆ ಒಟ್ಟಾರೆ ಸಮಾಜದ ಅಭಿವೃದ್ಧಿ ಎಂದು ತಿಳಿಸಿದರು.
ಮನೋವೈದ್ಯೆ ಕೆ.ಎಸ್.ಪವಿತ್ರ ಮಾತನಾಡಿ, ಮಹಿಳೆಯು ಆರೋಗ್ಯದಿಂದ ಇದ್ದರೆ ಮನೆಗೆ ಅಡಿಪಾಯವಿದ್ದಂತೆ. ಅವರು ಆರೋಗ್ಯದಿಂದ ಇದ್ದಷ್ಟು ಮನೆ ಸಬಲವಾಗಿರುತ್ತದೆ. ಮಹಿಳೆಯ ದೃಢಸಂಕಲ್ಪವು ಯಾವುದೇ ಸವಾಲನ್ನು ಜಯಿಸಬಹುದು ಎಂದರು.
ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಆರ್.ಮನೋಹರ ಮಾತನಾಡಿ, ಹೆಣ್ಣು ಭ್ರೂಣ ಹತ್ಯೆ ಕೇವಲ ಅಪರಾಧವಲ್ಲ, ಅದೊಂದು ನೈತಿಕ ಕಳಂಕ ಮತ್ತು ಸಾಂವಿಧಾನಿಕ ಅವಮಾನ ಎಂದು ಹೇಳಿದರು.
ಸನ್ಮಾನಿತರಾದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಮಿರೇಟ್ಸ್ ಪ್ರಾಧ್ಯಾಪಕಿ ಡಾ. ವಿಜಯ ದೇವಿ ಮಾತನಾಡಿ, ಮಹಿಳೆಯ ಸಬಲೀಕರಣ ಮನೆಯಿಂದಲೇ ಪ್ರಾರಂಭವಾಗಬೇಕು. ಶೈಕ್ಷಣಿಕ ಪ್ರಗತಿ ತುಂಬಾ ಮುಖ್ಯ. ಮಹಿಳೆಯರ ಪ್ರತಿಭೆಯನ್ನು ಗುರುತಿಸುವ ಕೆಲಸವಾಗಬೇಕು ಎಂದರು.
Chamber of Commerce Shivamogga ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಬಸವರಾಜ ನೆಲ್ಲಿಸರ, ಆಕಾಶವಾಣಿ ಆರ್ ಜೆ ಗಣೇಶ್ ಕೆಂಚನಾಲ್, ಸನ್ಮಾನಿತ ಆಕಾಶವಾಣಿ ಆರ್ ಜೆ ಗಳಾದ ಪ್ರೇಮ ಸಾಲೆರಾ, ನಂದಿನಿ, ವಿದ್ಯಾ ಕಾರಂತ್ ಹಾಗೂ ಬಸವರಾಜ್ ಗುಬ್ಬಿ.. ಮಾನಸ ಶಿವರಾಮ್ ಕೃಷ್ಣ, ಚಂದ್ರಿಕಾ ನೇರಲಗುಂಡಿ, ಬ್ರಹ್ಮಾನಂದ ರಾನಾದೆ, ಪಂಕಜ, ಸಹನಾ ಚೇತನ್, ರಾಜು ಶಂಕರಘಟ್ಟ, ಡಾ ಮಾನಸ, ಆಕಾಶವಾಣಿ ಆರ್ ಜೆ ಬಳಗ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Renukacharya Jayanti ಮಾ.16ರ ಮತ್ತು ಮಾ. 17ರಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ

Renukacharya Jayanti ಸೊರಬ ತಾಲೂಕಿನ ಸುಕ್ಷೇತ್ರ ದುಗ್ಲಿಯ ಶ್ರೀಮದ್ ರಂಭಾಪುರಿ ಶಾಖಾ...

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮ : ಎಸ್‌.ಪಿ ಪರಮೇಶ್ವರ್ ಹೆಚ್

ಸೇವಿಸುವ ಆಹಾರವು ಉತ್ತಮ ಗುಣಮಟ್ಟದ್ದಾಗಿದ್ದಲ್ಲಿ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ದಾವಣಗೆರೆ ಜಿಲ್ಲಾ...

ಉದ್ಯೋಗ ನೀಡಲು ನೇರ ಸಂದರ್ಶನ

ಶಿವಮೊಗ್ಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಉದ್ಯೋಗಕ್ಕೆ ಆಯ್ಕೆ...

L. B College ಎಲ್. ಬಿ ಕಾಲೇಜಿನಲ್ಲಿ ಕೃತಕ ಬುದ್ದಿಮತ್ತೆ ಕುರಿತು ಕಾರ್ಯಗಾರ

L. B College ಸಾಗರದ ಎಲ್. ಬಿ. ಕಾಲೇಜಿನಲ್ಲಿ ಕೃತಕ ಬುದ್ದಿಮತ್ತೆ...