ಶಿವಮೊಗ್ಗ ನಗರದ ಹೊಸಮನೆ ಬಡಾವಣೆ ನಿವಾಸಿ ಪತ್ರಿಕಾ ವಿತರಕ ಕಿರಣ್(೩೫) ಮಾ.೦೫ರ ಗುರುವಾರ ಬೆಳಿಗ್ಗೆ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗಿದೆ ನಿಧನರಾಗಿದ್ದಾರೆ.
ಇವರು ಎರಡು ಹೆಣ್ನು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ರಾಜ್ಯಾಧ್ಯಕ್ಷ ಶಂಭುಲಿಂಗ ಕೆ., ಜಿಲ್ಲಾಧ್ಯಕ್ಷ ಎನ್.ಮಾಲತೇಶ್ ಹಾಗೂ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಪತ್ರಿಕಾ ವಿತರಕ ಕಿರಣ್ ನಿಧನ
Date:
