Saturday, February 28, 2026
Saturday, February 28, 2026

Shimoga News ಅಂಧತ್ವ ಮುಕ್ತ ಯೋಜನೆಗೆ ವಿಶಿಷ್ಟ ಸೇವೆ ಸಲ್ಲಿಸಿದ ನಂದೀಶ್ ಗೆ ಸನ್ಮಾನ.

Date:

Shimoga News ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 317ಅ ವತಿಯಿಂದ ಉಡುಪಿಯ ಅಮೃತ್ ಗಾರ್ಡನ್‌ನಲ್ಲಿ ನಡೆದ ತೃತೀಯ ಕ್ಯಾಬಿನೆಟ್ ಸಭೆಯಲ್ಲಿ ‘ಅಂಧತ್ವ ಮುಕ್ತ ಯೋಜನೆ’ ಅಡಿಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಜಿಲ್ಲಾ ಸಂಯೋಜಕ ಲಯನ್ ನಂದೀಶ್ ಎನ್.ಟಿ ಅವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.
ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ಸಪ್ನಾ ಸುರೇಶ್ ಹಾಗೂ ಪ್ರಥಮ ಉಪ ಜಿಲ್ಲಾ ಗವರ್ನರ್ ಪಿ.ಎಂ.ಜೆ.ಎಫ್ ಲಯನ್ ರಾಜೀವ್ ಕೋಟಿಯನ್ ಅವರು ಲಯನ್ ನಂದೀಶ್ ಎನ್.ಟಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಸೆಪ್ಟೆಂಬರ್ 2025ರಿಂದ ಜನವರಿ 202೬ರವರೆಗೆ ಅವರ ಸಂಯೋಜನೆಯಲ್ಲಿ ಒಟ್ಟು 16 ಉಚಿತ ಕಣ್ಣಿನ ತಪಾಸಣಾ ಶಿಬಿರಗಳು ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮಗಳು ಯಶಸ್ವಿಯಾಗಿ ಆಯೋಜಿಸಲ್ಪಟ್ಟವು.
Shimoga News ಈ ಶಿಬಿರಗಳು ಡಿಸ್ಟ್ರಿಕ್ಟ್ ಬ್ಲೈಂಡ್ನೆಸ್ ಕಂಟ್ರೋಲ್ ಸೊಸೈಟಿ , ಜಿಲ್ಲಾ ಆರೋಗ್ಯಾಧಿಕಾರಿ ಶಿವಮೊಗ್ಗ, ಲಯನ್ಸ್ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 307ಅ ಹಾಗೂ ಶಿವಮೊಗ್ಗ ಆಪ್ಟಿಕಲ್ಸ್ ಇವರ ಸಹಯೋಗದಲ್ಲಿ ನಡೆಯಿತು. 2880ಕ್ಕೂ ಹೆಚ್ಚು ಜನರಿಗೆ ಕಣ್ಣಿನ ತಪಾಸಣೆ ಮಾಡಲಾಯಿತು. ಜೊತೆಗೆ 992 ಉಚಿತ ಕನ್ನಡಕಗಳನ್ನು ವಿತರಿಸಲಾಯಿತು. ಈ ಎಲ್ಲಾ ಸೇವಾ ಕಾರ್ಯಗಳನ್ನು ಗಿರುತಿಸಿ ಈ ಪ್ರಶಸ್ತಿ ನೀಡಲಾಗಿದ್ದು, ಅಂಧತ್ವ ನಿರ್ಮೂಲನೆ ದಿಸೆಯಲ್ಲಿ ಇವರ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಗವರ್ನರ್ ಪ್ರಶಂಸಿಸಿದರು. ಲಯನ್ಸ್ ನಂದೀಶ್ ಎನ್.ಟಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಸೇವಾ ಚಟುವಟಿಕೆಗಳನ್ನು ವಿಸ್ತರಿಸುವ ಸಂಕಲ್ಪವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕ್ಲಬ್‌ನ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಶಿವಮೊಗ್ಗದ ಶ್ರೀಮತಿ ನಿರ್ಮಲಾ ಮಹೇಂದ್ರ ಭೂಪಾಳಂ ನಿಧನ.

Shimoga News ನಗರದ ವಾಣಿಜ್ಯೋದ್ಯಮ ಕುಟುಂಬದ ದಿವಂಗತ ಮಹೇಂದ್ರ ಭೂಪಾಳಂ ಅವರ...

Shimoga News ಖಾಸಗಿ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ಶ್ಲಾಘನೀಯ- ಸಂಸದ ರಾಜಶೇಖರ ಹಿಟ್ನಾಳ್.

Shimoga News ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ವಿಕಲಚೇತನರಿಗೆ...