ಮಸರೂರು ದಿ.ರೇಣುಕಪ್ಪ ಗೌಡ ಪ್ರತಿಷ್ಠಾನ ಪ್ರಕಟಿಸಿರುವ ಹಾರನಹಳ್ಳಿ ಕರಿಬಸವಯ್ಯ ಅವರು ಬರೆದಿರುವ ನೆಲ-ಮುಗಿಲ ಮೌನ ಕವನ ಸಂಕಲನವನ್ನು ಮಾರ್ಚ್ 03 ರಂದು ಸಂಜೆ 6:30ಕ್ಕೆ ಶಿವಮೊಗ್ಗ ಶ್ರೀ ಬೆಕ್ಕಿನಕಲ್ಮಠದಲ್ಲಿ ನಡೆಯುವ 1158 ನೇ ಶಿವಾನುಭವ ಗೋಷ್ಠಿಯಲ್ಲಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಬಿಡುಗಡೆ ಮಾಡಲಿದ್ದಾರೆ.
ಪುಸ್ತಕ ಕುರಿತು ಜಾವಳ್ಳಿ ಜ್ಞಾನದೀಪ ಶಾಲೆಯ ಅಧ್ಯಾಪಕ ತುರುವನೂರು ಮಲ್ಲಿಕಾರ್ಜನ ಅವರು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ದಾಂಪತ್ಯ ಜೀವನ ಪೂರೈಸಿದ ಪ್ರೊ.ಸಿ.ಯು.ಸೋಮಶೇಖರ್ ದಂಪತಿಯನ್ನು ಸನ್ಮಾನಿಸಲಾಗುತ್ತದೆ. ನಿವೃತ್ತ ಉಪನ್ಯಾಸಕ ಡಾ.ಎಂ .ರಾಜಶೇಖರಯ್ಯ, ಮಸರೂರು ದಿ.ರೇಣುಕಪ್ಪ ಪ್ರತಿ಼ಷ್ಠಾನದ ಕಾರ್ಯದರ್ಶಿ ಡಾ.ಗಣೇಶ್ ಕೆಂಚನಾಲ ಉಪಸ್ಥಿತರಿರುತ್ತಾರೆ. ಕಲಾವಿದರಾದ ನಾಗರತ್ನಮ್ಮ ಚಂದ್ರಶೇಖರಯ್ಯ ,ಸುಮಾಹೆಗಡೆ ಕಾವ್ಯ ಗಾಯನ ನಡೆಸಿಕೊಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
