ಶಿವಮೊಗ್ಗ ನಗರದ ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ ಪಾಠ ಶಾಲೆಯಲ್ಲಿ ಗಾನಲಹರಿ ೧೧೬ನೇ ಅಮಾವಾಸ್ಯೆಯ ಸಂಗೀತ ಸಂಜೆ ಕಾರ್ಯಕ್ರಮವು ನಿನ್ನೆ ಸಂಜೆ ವಿಶೇಷವಾಗಿ ನಡೆಯಿತು.
ರಾಜ್ಯ ಪ್ರಶಸ್ತಿ ಪುರಸ್ಕೃತ ಆರ್.ಬಿ. ಸಂಗಮೇಶ್ವರ ಗವಾಯಿಗಳೂ ಅಧ್ಯಕ್ಷತೆ ವಹಿಸಿದ್ದರು. ಹೊಸಮನೆ ಬಡಾವಣೆಯ ಶ್ರೀ ಮುದ್ದು ಗಣಪ ಭಜನಾ ಮಂಡಳಿಯಿಂದ ಭಜನಾ ಸೇವೆ ಮತ್ತು ಆಶ್ರಮದ ಅಂಧ ಮಕ್ಕಳು ಪ್ರಾರ್ಥನೆ ನಡೆಯಿತು. ದಾವಣಗೆರೆಯ ಗಾಯಕರಾದ ಗೌರಿ ಎಂ. ಜೋಶಿ ಅವರು ಸಂಗೀತ ಕಾರ್ಯಕ್ರಮ ನಡೆಸಿ ಕೊಟ್ಟರು. ರಾಜ್ಯ ಪ್ರಶಸ್ತಿ ಪುರಸ್ಕತ ರಾಮಣ್ಣ ಭಜಂತ್ರಿ, ವೀರಭದ್ರಶಾಸ್ತ್ರಿ ವೇದ ಘೋಷ, ವಿನಾಯಕ ಭಟ್ ತಬಲ, ಸಿದ್ದಣ್ಣ ಬಡಿಗೇರ್ ಹಾರ್‍ಮೋನಿಯಂ ಜೊತೆ ಸಾಥ್ ನೀಡಿದರು. ರೇವಣ್ಣ ಸಿದ್ದಯ್ಯ ಹಿರೇಮಠನಿರೂಪಿಸಿದರು.
