Thursday, February 19, 2026
Thursday, February 19, 2026

ಭಜನೆಯಿಂದ ಚಿತ್ತಶುದ್ಧಿ.ಅರಿಷಡ್ವರ್ಗ ಕರಗುತ್ತವೆ- ಶಬರೀಶ್ ಕಣ್ಣನ್

Date:

ಭಗವಂತನ ನಾಮವನ್ನು ಶ್ರದ್ಧೆಯಿಂದ ಉಚ್ಚರಿಸುವಾಗ ಮನಸ್ಸು ಕ್ರಮೇಣ ಶುದ್ಧವಾಗುತ್ತದೆ ಎಂದು ಭಜನಾ ಪರಿಷತ್ ಶಿವಮೊಗ್ಗ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹೇಳಿದರು.

ಮಹಾಶಿವರಾತ್ರಿ ಪ್ರಯುಕ್ತ ಫ್ರೆಂಡ್ಸ್ ಸೆಂಟರ್ ವತಿಯಿಂದ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿ, ಚಿತ್ತಶುದ್ಧಿಯೇ ಆಧ್ಯಾತ್ಮಿಕ ಜೀವನದ ಮೊದಲ ಹೆಜ್ಜೆ. ಭಜನೆಯ ಮೂಲಕ ಮನಸ್ಸಿನಲ್ಲಿ ನೆಲೆಯೂರಿರುವ ಅಹಂಕಾರ, ಅಸೂಯೆ, ಕ್ರೋಧ ಮತ್ತು ಲೋಭದಂತಹ ದುರ್ಗುಣಗಳು ನಿಧಾನವಾಗಿ ಕರಗುತ್ತವೆ. ಅವುಗಳ ಸ್ಥಾನದಲ್ಲಿ ಪ್ರೀತಿ, ಶಾಂತಿ, ಸಹನೆ ಮತ್ತು ಕ್ಷಮೆಯಂತಹ ಸದ್ಗುಣಗಳು ಬೆಳೆಸಿಕೊಳ್ಳುತ್ತವೆ ಎಂದು ತಿಳಿಸಿದರು.

ಭಜನೆ ಪ್ರೀತಿಯನ್ನು ಜಾಗೃತಗೊಳಿಸುವ ಪ್ರಕ್ರಿಯೆ. ನಿಷ್ಕಾಮ ಭಾವದಿಂದ ಭಗವಂತನ ನಾಮಸ್ಮರಣೆ ಮಾಡುವುದು ಮತ್ತು ಅವನ ಲೀಲೆಗಳನ್ನು ಚಿಂತಿಸುವುದು ಜೀವನದ ಶ್ರೇಯಸ್ಸಿನ ಅತ್ಯುತ್ತಮ ಉಪಾಯವಾಗಿದೆ. ಫಲಾಪೇಕ್ಷೆ ಇಲ್ಲದೆ ಮಾಡುವ ಭಜನೆ ಮನಸ್ಸನ್ನು ಲಘುವಾಗಿಸಿ, ಜೀವನದ ಸಂಕಷ್ಟಗಳನ್ನು ಸಮಾಧಾನದಿಂದ ಎದುರಿಸುವ ಶಕ್ತಿಯನ್ನು ನೀಡುತ್ತದೆ ಎಂದರು.

ಭಜನೆಯ ಮತ್ತೊಂದು ಪ್ರಮುಖ ಅಂಶ ಸಮಾಜದ ಮೇಲೆ ಅದರ ಪರಿಣಾಮ. ಭಜನಾ ಮಂಡಳಿಗಳ ಮೂಲಕ ಸಮಾಜದಲ್ಲಿ ಸಾಮರಸ್ಯ ಮತ್ತು ಸಂಘಟನೆ ಸಾಧ್ಯವಾಗುತ್ತದೆ. ವಿಭಿನ್ನ ವರ್ಗ, ವಯಸ್ಸು ಮತ್ತು ಹಿನ್ನೆಲೆಯ ಜನರು ಒಂದೇ ಸ್ಥಳದಲ್ಲಿ ಸೇರಿ ಭಗವಂತನ ನಾಮವನ್ನು ಹಾಡುವಾಗ ಭೇದಭಾವ ಕರಗುತ್ತದೆ. ಪರಸ್ಪರ ಗೌರವ, ಸಹಕಾರ ಮತ್ತು ಸಹೋದರತ್ವ ಬೆಳೆಯುತ್ತದೆ. ಈ ದೃಷ್ಟಿಯಿಂದ ಭಜನೆ ಕೇವಲ ವೈಯಕ್ತಿಕ ಸಾಧನೆಯಲ್ಲ; ಅದು ಸಾಮಾಜಿಕ ಪರಿವರ್ತನೆಯ ಶಕ್ತಿಯೂ ಹೌದು ಎಂದು ತಿಳಿಸಿದರು.

ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್, ಮಹಿಳಾ ವಿಭಾಗದ ಅಧ್ಯಕ್ಷೆ ಸ್ವಪ್ನಾ ಬದ್ರಿನಾಥ್, ಮಾಜಿ ಅಧ್ಯಕ್ಷ ಜಿ.ವಿಜಯಕುಮಾರ್, ರಮೇಶ್, ರವೀಂದ್ರನಾಥ್ ಐತಾಳ್, ವಿ.ನಾಗರಾಜ್, ಬಿಂದು ವಿಜಯಕುಮಾರ್, ಸ್ಮಿತಾ ಜವಳಿ, ವೆಂಕಟೇಶ್, ಟಿ.ಎಸ್.ಅಶ್ವತ್ಥ್ ನಾರಾಯಣಶೆಟ್ಟಿ, ಮಹೇಶ್ವರಪ್ಪ, ಲೋಕೇಶ್, ಮೋಹನ್, ಸತ್ಯನಾರಾಯಣ, ದತ್ತಾತ್ರಿ, ಶ್ರೀರಂಜಿನಿ ದತ್ತಾತ್ರಿ, ಮಾಜಿ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು, ಮಹಿಳಾ ವಿಭಾಗದ ನಿರ್ದೇಶಕರು, ಸದಸ್ಯರು ಉಪಸ್ಥಿತರಿದ್ದರು. ಶಾರದಾ ಮಹಿಳಾ ಕೂಟದ ಶುಭ ರಾಘವೇಂದ್ರ ಹಾಗೂ ತಂಡದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Badminton Association ಅಖಿಲ ಭಾರತ ಬ್ಯಾಡ್ಮಿಂಟನ್ ಪಂದ್ಯಾವಳಿ. ಶಿವಮೊಗ್ಗದ ಪವನ್ – ಪುನೀತ್ ಚಾಂಪಿಯನ್ಸ್

Karnataka Badminton Association ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ ಬೆಂಗಳೂರಿನ ವಸಂತ ನಗರದಲ್ಲಿ...

Department of Kannada and Culture ಫೆ.20. ಕವಿ ಸರ್ವಜ್ಞ ಜಯಂತಿ ಆಚರಣೆಗೆ ಜಿಲ್ಲಾಡಳಿತ ಸಜ್ಜು

Department of Kannada and Culture ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ...

Water Supply and Drainage Board ನಿರುದ್ಯೋಗಿಗಳಿಗೆ ಸಿಹಿಸುದ್ದಿ!. ...

Water Supply and Drainage Board ಶಿವಮೊಗ್ಗ ನಗರ ನೀರು ಸರಬರಾಜು...