Wednesday, February 18, 2026
Wednesday, February 18, 2026

‘ತರಕಾರಿ ಬೀಜಗಳ ಕಿಟ್ ‘ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನ

Date:

ಶಿವಮೊಗ್ಗ ತಾಲ್ಲೂಕು ತೋಟಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ದಿ ಯೋಜನೆಯಡಿ ‘ತರಕಾರಿ ಬೀಜಗಳ ಕಿಟ್’ ಗಳನ್ನು ರೈತರಿಗೆ ವಿತರಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಫೆ.23 ಕಡೆಯ ದಿನವಾಗಿದ್ದು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಪ್ರಸ್ತುತ ವರ್ಷದ ಪಹಣಿ/ಆರ್‌ಟಿಸಿ, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸಬೇಕು.

ಆಸಕ್ತ ರೈತರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಗಾಂಧಿಪಾರ್ಕ್, ಶಿವಮೊಗ್ಗ ಇವರನ್ನು ಅಥವಾ ಹೋಬಳಿ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಅರ್ಜಿಯನ್ನು ಪಡೆದು ಸಲ್ಲಿಸಬಹುದು ಎಂದು ಶಿವಮೊಗ್ಗ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

State Legal Services Authority ಡಾ.ಹರೀಶ್ ದೇಲಂತ ಬೆಟ್ಟು, ಈಗ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧಿಕಾರೇತರ ಸದಸ್ಯರು

State Legal Services Authority ರಾಜ್ಯ ಕಾನೂನು ಸೇವೆಗಳ ಪಾಧಿಕಾರದ ಅಧಿಕಾರೇತರ...

MESCOM ಶಿವಮೊಗ್ಗ ಗ್ರಾಮೀಣ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ.20 ರಂದು ಜನಸಂಪರ್ಕ ಸಭೆ

MESCOM ಶಿವಮೊಗ್ಗ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯುತ್ ಗ್ರಾಹಕರ...