2025-26 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಅಧಿನಿಯಮ ಮತ್ತು ಪಿಸಿಆರ್ ಕಾಯ್ದೆಯ ಬಗ್ಗೆ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ಜಾಗೃತಿ/ಅರಿವು ಮೂಡಿಸಲು ವಿಚಾರಗೋಷ್ಟಿ ಮತ್ತು ಕಾರ್ಯಾಗಾರಗಳನ್ನು ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಮಟ್ಟದಲ್ಲಿ ಆಯೋಜಿಸುವ ಸಲುವಾಗಿ ಸಂಘ/ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯೊಂದಿಗೆ ಸಂಘ/ಸಂಸ್ಥೆಯ ನೋಂದಣಿ ಪ್ರಮಾಣ ಪತ್ರ, ನವೀಕರಣ ಪ್ರಮಾಣ ಪತ್ರ, ಕಳೆದ 3 ವರ್ಷದ ಆಡಿಟ್ ವರದಿ, ಸಂಘ ಸಂಸ್ಥೆಯು ಪರಿಶಿಷ್ಟ ಜಾತಿ/ವರ್ಗದ ಅಭಿವೃದ್ದಿಗಾಗಿ 5 ವರ್ಷ ಸೇವೆ ಸಲ್ಲಿಸಿರುವ ಬಗ್ಗೆ ದೃಢೀಕೃತ ದಾಖಲೆ, ಈ ಹಿಂದೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿರುವ ಬಗ್ಗೆ ದಾಖಲೆಗಳು, ಛಾಯಾಚಿತ್ರ, ಪತ್ರಿಕಾ ವರದಿ, ಸಂಸ್ಥೆಯು ದೌರ್ಜನ್ಯ ಪ್ರತಿಬಂಧಕ ಅಧಿನಿಯಮ-1989 ರ ಅನುಷ್ಟಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿರುವ ಬಗ್ಗೆ ದಾಖಲೆಗಳು, ಪ್ರಕಟಣೆಗಳು, ಕರಪತ್ರ, ಭಿತ್ತಿ ಪತ್ರ ಇತ್ಯಾದಿ ಲಗತ್ತಿಸಬೇಕು.
ಆಸಕ್ತ ಸ್ವಯಂ ಸೇವಾ ಸಂಘ/ಸAಸ್ಥೆಯವರು ಫೆ.19 ರೊಳಗೆ ಪೂರಕ ದಾಖಲೆಳೊಂದಿಗೆ ಪ್ರಸ್ತಾವನೆಯನ್ನು ಸಮಾಜ ಕಲ್ಯಾಣ ಇಲಾಖೆ, ಉಪ ನಿರ್ದೇಶಕರ ಕಚೇರಿ, ಪೃಥ್ವಿ ಮ್ಯಾನ್ಶನ್, 100 ಅಡಿ ರಸ್ತೆ, ವಿನೋಬ ನಗರ ಶಿವಮೊಗ್ಗ ಇಲ್ಲಿ ಸಲ್ಲಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಮಲ್ಲೇಶಪ್ಪ ತಿಳಿಸಿದ್ದಾರೆ.
ದೌರ್ಜನ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ವಿಚಾರಗೋಷ್ಠಿ ನಡೆಸಲು ಸಂಘಸಂಸ್ಥೆಗಳಿಂದ ಅರ್ಜಿ ಆಹ್ವಾನ
Date:
