Wednesday, April 8, 2026
Wednesday, April 8, 2026

Navyashree Eeshwaravan Charitable Trust ಒಬ್ಬರ ಪ್ರಾಣವುಳಿಸಿದ ಪುಣ್ಯ ರಕ್ತದಾನದಿಂದ ಬರುತ್ತದೆ- ನವ್ಯಶ್ರೀ ನಾಗೇಶ್

Date:

ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಪರಶಿವನ ಅನುಗ್ರಹ ಪಡೆಯಬಹುದು. ಮತ್ತೊಬ್ಬರ ಜೀವ ಉಳಿಸುವಂತಹ ರಕ್ತದಾನ ಮಹಾದಾನಗಳಲ್ಲೊಂದು. ಇಂತಹ ದಾನದ ಮೂಲಕ ಶಿವನ ಅನುಗ್ರಹ ಲಭಿಸುತ್ತದೆ. ಶಿವರಾತ್ರಿಯ ಉಪವಾಸ, ಜಾಗರಣೆಗಿಂತ ಹೆಚ್ಚು ಪುಣ್ಯ ಪ್ರಾಪ್ತವಾಗುತ್ತದೆ ಎಂದು ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ನವ್ಯಶ್ರೀ ನಾಗೇಶ್ ಅವರು ಹೇಳಿದರು.

ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ವತಿಯಿಂದ ತಾಲೂಕಿನ ಅಬ್ಬಲಗೆರೆಯ ಈಶ್ವರವನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಫೆ. 15ರಂದು ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಶಿವರಾತ್ರಿಯಂದು ಓಂ ನಮಃ ಶಿವಾಯ ಎಂದು ಜಪ-ತಪ, ಪೂಜೆ, ಭಜನೆ, ಆರಾಧನೆ, ಉಪವಾಸ, ಜಾಗರಣೆ ಮಾಡುವ ಮೂಲಕ ಶಿವನ ಅನುಗ್ರಹಕ್ಕೆ ಪ್ರಾಪ್ತರಾಗಲು, ಪುಣ್ಯ ಸಂಪಾದಿಸಲು ಪೂಜಾ ಕೈಂಕರ್ಯವನ್ನು ಕೈಗೊಳ್ಳಲಾಗುತ್ತದೆ. ಪರಿಸರವೇ ಪರಮೇಶ್ವರ ಎಂಬ ಜಾಗೃತಿಯ ಪರ್ವದೊಂದಿಗೆ ಶಿವರಾತ್ರಿ ಪ್ರಯುಕ್ತ ರಕ್ತದಾನ ಮಾಡಬೇಕೆಂದು ಕರೆ ನೀಡಿದರು.

ಸಕಾಲದಲ್ಲಿ ರಕ್ತ ಸಿಗದೆ ಸಾಕಷ್ಟು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು ರಕ್ತದ ಕೊರತೆ ಸಾಕಷ್ಟು ಎದ್ದು ಕಾಣುತ್ತಿದೆ. ಯುವಕರು ರಕ್ತದಾನ ಮಾಡಲು ಜಾಗೃತಿಯ ಕೊರತೆ ಇದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಚೈತನ್ಯ ಮೂಡುತ್ತದೆ ಹಾಗೂ ಸದಾಕಾಲ ಆರೋಗ್ಯವಂತರಾಗಿ ಇರುತ್ತಾರೆ ಎಂದು ತಿಳಿಸಿದರು.

ಅಪಘಾತ, ಆಪರೇಷನ್, ಹೆರಿಗೆ, ರಕ್ತಸ್ರಾವ ಮತ್ತಿತರೆ ತುರ್ತು ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ದೊರೆಯದಿದ್ದಲ್ಲಿ ಪ್ರಾಣಕ್ಕೆ ಕುತ್ತು ಬರುವ ಅಥವಾ ಪ್ರಾಣವೇ ಹೊರಟು ಹೋಗುವಂತಹ ಸಂದರ್ಭಗಳೂ ಇರುತ್ತವೆ. ಇದನ್ನು ತಪ್ಪಿಸಲು ಅಗತ್ಯವಾದ ರಕ್ತ ಸಂಗ್ರಹ ಅತಿಮುಖ್ಯ. ಅರ್ಹ ರಕ್ತದಾನಿಗಳು ರಕ್ತದಾನ ಮಾಡುವುದರ ಮುಖಾಂತರ ಸದೃಢವಾದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.

ಕೇವಲ ವಿಭೂತಿ ಧರಿಸಿ ಓಂ ನಮಃ ಶಿವಾಯ ಎನ್ನುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪ್ರತಿಯೊಂದು ಕಣದಲ್ಲೂ ಇರುವ ಶಿವತತ್ವವನ್ನು ಅನುಭವಿಸುವುದೇ ನಿಜವಾದ ಪೂಜೆ. ಈಶ್ವರ ಎಂದರೆ ಎಲ್ಲೋ ದೂರದ ಲೋಕದಲ್ಲಿರುವ ಅಸ್ತಿತ್ವವಲ್ಲ, ಜಗತ್ತಿನ ಪ್ರತಿಯೊಂದು ಕಣದಲ್ಲೂ ವ್ಯಾಪಿಸಿರುವ ಚೈತನ್ಯ ಎಂದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್ ಅವರು ಮಾತನಾಡಿ ಶಿವಮೊಗ್ಗದಲ್ಲಿ ಸಾಕಷ್ಟು ರಕ್ತದಾನಿಗಳಿದ್ದರೂ ಸಹ ರಕ್ತದ ಕೊರತೆ ಉಂಟಾಗುತ್ತದೆ. ಇತ್ತೀಚಿನ ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ರಕ್ತದಾನ ಮಾಡುವುದರಿಂದ ದೀರ್ಘಾಯುಷ್ಯ ಉಳ್ಳವರಾಗುತ್ತಾರೆ ಹಾಗೂ ನಮ್ಮ ದೇಹದಲ್ಲಿ ಗೊತ್ತಿಲ್ಲದೆ ಇರುವಂತಹ ಯಾವುದಾದರೂ ಕಾಯಿಲೆಗಳಿದ್ದರೆ ಈ ರಕ್ತದಾನದಿಂದ ತಿಳಿಯುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ರಕ್ತದಾನ ಮಾಡುವುದರ ಮುಖಾಂತರ ರಕ್ತದ ಕೊರತೆಯನ್ನು ನೀಗಿಸೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 120 ಬಾರಿ ರಕ್ತದಾನ ಮಾಡಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಧರಣೇಂದ್ರ ದಿನಕರ್, ಈ ಶಿವರಾತ್ರಿಯ ಪವಿತ್ರ ದಿನದಂದು ರಕ್ತದಾನ ಮಾಡಿದರೆ ತೃಪ್ತಿ ಸಿಗುವುದರ ಜೊತೆಗೆ ನಾಲ್ಕು ಜನರ ಪ್ರಾಣ ಉಳಿಸಿದ ಫಲ ನಮಗೆ ದೊರೆಯುತ್ತದೆ. ನವ್ಯಶ್ರೀ ನಾಗೇಶ್ ಅವರ ಸೇವೆ ಅಮೋಘ ಎಂದು ನೋಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್. ಮನೋಹರ್, ಆರತಿ ತಿವಾರಿ, ಸಂತೋಷ್ ಎಲಿಗಾರ್, ನಾಗರಾಜ್ ಶೆಟ್ಟರ್, ಪಿ. ಪ್ರದೀಪ್, ಎಸ್. ಸುಬ್ರಹ್ಮಣ್ಯ, ವಿಜಯಕುಮಾರ್, ಲಕ್ಷಿö್ಮ, ಡಾ. ದಿನಕರ್, ನವ್ಯಶ್ರೀ ಈಶ್ವರವನ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳಾದ ಶಶಿಕಲಾ ನಾಗೇಶ್, ಶರತ್, ಶರಣ್ಯ, ಹಾಗೂ ರಕ್ತದಾನಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...