Sunday, March 29, 2026
Sunday, March 29, 2026

Marikamba Jatra 2026 ಶಿವಮೊಗ್ಗದ ಮಾರಿಕಾಂಬ ಜಾತ್ರೆ ವಿಶೇಷ: ಟಗರು ಕಾಳಗದ ಅಂಕಣ ಪೂಜೆ.

Date:

Marikamba Jatra 2026 ನಮ್ಮೂರ ಬಳಗ ರಾಷ್ಟ್ರಮಟ್ಟದ ಟಗರು ಕಾಳಗ ಅಂಕಣ ಪೂಜೆ – ಕ್ರೀಡೆಗಳಿಂದ ಸಂಘಟನೆಗೆ ಬಲ – ಹಾರನಹಳ್ಳಿ ಚೌಕಿ ಮಠದ ಶ್ರೀ ನೀಲಕಂಠ ಸ್ವಾಮೀಜಿ

ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಅಂಗವಾಗಿ ಫೆಬ್ರವರಿ 15ರಂದು ಅಲ್ಲಮಪ್ರಭು ಮೈದಾನ ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ರಾಷ್ಟ್ರಮಟ್ಟದ ಟಗರು ಕಾಳಗದ ಅಂಕಣ ಪೂಜೆಯನ್ನು ಹಾರನಹಳ್ಳಿಯ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿಯವರು ನೆರವೇರಿಸಿ, ಪ್ರಚಾರದ ವಾಹನಕ್ಕೆ ಚಾಲನೆ ನೀಡಿದರು

ನಂತರ ಮಾತನಾಡಿದ ಸ್ವಾಮೀಜಿಗಳು ಇಂತಹ ಕ್ರೀಡಾ ಉತ್ಸವಗಳಿಂದ ಸಂಘಟನೆಗಳು ಶಕ್ತಿಯುತವಾಗಿ ಬೆಳೆಯುವುದರ ಜೊತೆಗೆ ಜಾತ್ರೆ ಉತ್ಸವಗಳ ಸಂದರ್ಭದಲ್ಲಿ ಟಗರು ಕಾಳಗ ಕುಸ್ತಿ ಹಾಗು ಗ್ರಾಮೀಣ ಕ್ರೀಡೆಗಳನ್ನು ನಡೆಸುವುದರಿಂದ ಊರ ಹಬ್ಬಗಳಿಗೆ ಮೆರಗು ಬರಲಿದೆ ಎಂದರು, ನಮ್ಮೂರ ಬಳಗದಿಂದ ನಡೆಯುತ್ತಿರುವ ರಾಷ್ಟ್ರಮಟ್ಟದ ಟಗರು ಕಾಳಗವು ಯಶಸ್ವಿಯಾಗಲೆಂದು ಶುಭ ಹಾರೈಸಿದರು

Marikamba Jatra 2026 ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕರಾದ ಕೆ ರಂಗನಾಥ್, ಗೌರವ ಸಂಚಾಲಕರಾದ ಎಚ್ ಪಾಲಾಕ್ಷಿ , ಐಡಿಯಲ್ ಗೋಪಿ ಹೆಚ್ ಸಿ ಮಾಲ್ತೇಶ್, ಹಾಪ್ ಕಾಮ್ಸ್ ನಿರ್ದೇಶಕ ಶರತ್ ಮರಿಯಪ್ಪ, ಸೂಡ ಸದಸ್ಯರಾದ ಎಂ ಪ್ರವೀಣ್ ,ಕುಮಾರ್ ಯುವ ಮುಖಂಡರಾದ ಬಳ್ಳಕೆರೆ ಸಂತೋಷ್,ಸಂಚಾಲಕರುಗಳಾದ ಕೆ ಆರ್ ಸುರೇಶ್, ಹೆಚ್. ಪಿ. ಗಿರೀಶ್, ಬಿ .ಲೋಕೇಶ್,ವಿನಯ್, ವಿಜಯ್, ಗುರು ಪ್ರಸಾದ್, ಚಂದ್ರು ಗೆಡ್ಡೆ, ಆರ್ ಕಿರಣ್, ರಾಜೇಶ್ ಮಂದಾರ, ಎಮ್ ರಾಕೇಶ್, ಕೆ ಎಲ್ ಪವನ್, ರವಿ ಶಾಸ್ತ್ರಿ, ಕೇಬಲ್ ಲೋಕೇಶ್, ಎಂ ವಿಜಯ್, ರಾಜೀವ್ ರಾಯ್ಕರ್, ರಜನಿಕಾಂತ್, ದೀಪು, ಜಿ ಕಿರಣ್, ಕೇಶವ ಸಿಗೆಹಟ್ಟಿ, ಪ್ರವೀಣ್ ಕಾಶಿಪುರ, ರಾಹುಲ್, ಮಣಿ, ಸುನಿಲ್, ಕುಮಾರ್ ಶ್ರೀಕಾಂತ್ ಇತರರು ಇದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...