Saturday, March 28, 2026
Saturday, March 28, 2026

ಸಣ್ಣಹಳ್ಳಿಗಳಲ್ಲಿ ಯುವಕರು ಒಗ್ಗೂಡಿ ಕ್ರೀಡೆಯನ್ನು ಆಯೋಜಿಸಬೇಕು- ಪ್ರದೀಪ್ ಗೌಡ ಬಾಡದಬೈಲು

Date:

ಗ್ರಾಮೀಣ ಮಟ್ಟದಲ್ಲಿ ಯುವಕರು ಕೇವಲ ಕ್ರೀಡಾಪಟುಗಳಾಗಿ ಅಷ್ಟೇ ಉಳಿಯದೆ. ಉತ್ತಮ ಸಂಘಟಕರಾಗಿ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಮುಂದಾಗುತ್ತಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆಯ ಸಂಕೇತವಾಗಿದೆ ಎಂದು ತಾಲೂಕು ಪಿ.ಎಲ್‌.ಡಿ ಬ್ಯಾಂಕ್ ನಿರ್ದೇಶಕ ಪ್ರದೀಪ್ ಗೌಡ ಬಾಡದಬೈಲು ಅಭಿಪ್ರಾಯಪಟ್ಟರು.

ತಾಲೂಕಿನ ಚಂದ್ರಗುತ್ತಿ ಸಮೀಪದ ಶಿವಪುರ-ಕತವಾಯಿ ಗ್ರಾಮಗಳ ಜಂಟಿ ಆಶ್ರಯದಲ್ಲಿ ನಾಲ್ಕು ದಿನಗಳ ಕಾಲ ಆಯೋಜಿಸಿದ ಎಸ್ ಕೆ ಪಿ ಎಲ್ ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಇಂದಿನ ಒತ್ತಡದ ಜೀವನದಲ್ಲಿ ಕ್ರೀಡೆಗಳು ಮನಸ್ಸಿಗೆ ನೆಮ್ಮದಿ ಮತ್ತು ಉಲ್ಲಾಸವನ್ನು ನೀಡುತ್ತವೆ. ಸಣ್ಣ ಹಳ್ಳಿಗಳಲ್ಲಿ ಯುವಕರು ಒಗ್ಗೂಡಿ ನಮ್ಮೂರಿನಲ್ಲಿ ನಾವು ಕ್ರೀಡೆಯನ್ನು ಆಯೋಜಿಸಬೇಕು ಎಂಬ ಮನೋಭಾವ ಬೆಳೆಸಿಕೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇಂತಹ ಪ್ರಯತ್ನಗಳಿಂದ ಗ್ರಾಮೀಣ ಕ್ರೀಡಾ ಪ್ರತಿಮೆಗಳು ಮುನ್ನೆಲೆಗೆ ಬರಲು ಸಾಧ್ಯವಾಗುತ್ತದೆ ಎಂದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಜ್ಜು ಮತ್ತು ಶಮ್ ಶೀರ್ ಮಾಲಿಕತ್ವದ ಕಾನಗೋಡು ರಾಕರ್ಸ್ ತಂಡ ಪ್ರಥಮ ಸ್ಥಾನ ಪಡೆದು ಸಂಭ್ರಮಿಸಿದರು, ಆರಕ್ಷಕ ಪ್ರದೀಪ್ ಮಾಲಿಕತ್ವದ ತಂಡ ಸೊರಬ ಸೂಪರ್ ಕಾಪ್ಸ್ ದ್ವಿತೀಯ ಸ್ಥಾನ ಗಳಿಸಿತು, ಮಂಜು ನಾಯ್ಕ ಅವರ ಸಿ ಎನ್ ಸಿ ಕ್ರಿಕೆಟರ್ಸ್ ಹಾಗೂ ನಿಖಿಲ್, ದಿನೇಶ್ ಶಿವಪುರ ಮಾಲಿಕತ್ವದ ಎಸ್ ಕೆ ಚಾಲೆಂಜರ್ಸ್ ತಂಡಗಳು ಕ್ರಮವಾಗಿ ತೃತೀಯ ಮತ್ತು ಚತುರ್ಥ ಸ್ಥಾನ ಪಡೆದುಕೊಂಡು. ಇನ್ನು ಉಳಿದಂತಹ ತಂಡಗಳಿಗೆ ಶಿಸ್ತು ಬದ್ಧ ಹಾಗೂ ಸಮಾಧಾನಕರ ಬಹುಮಾನ ನೀಡಿದರು. ಉತ್ತಮವಾಗಿ ಪ್ರದರ್ಶನ ನೀಡಿದ ಕ್ರೀಡಾಪಟುಗಳನ್ನು ಗುರುತಿಸಿ ಆಕರ್ಷಕ ಟ್ರೋಫಿ ವಿತರಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಗ್ರಾಪಂ ಸದಸ್ಯ ಸಲೀಂ, ಜಗದೀಶ್, ದಿನೇಶ್, ಶಿಕ್ಷಕ ಈರಪ್ಪ ನಾಯ್ಕ, ಮಂಜುನಾಥ್ ಶೇಟ್, ಅಜೀಮ್, ನೌಶಾದ್, ಅಜೀಜ್ ಸಾಬ್, ನಿಖಿಲ್, ಕೀರ್ತಿ ನಾಯ್ಕ, ಲೋಕೇಶ್, ಪ್ರವೀಣ್, ರವಿಕಿರಣ್, ಪುನೀತ್ ಬಡಿಗೇರ್, ಸೇರಿದಂತೆ ಶಿವಪುರ-ಕತವಾಯಿ ಗ್ರಾಮದ ಸಂಘಟಕರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kote SeethaRamanjaneya Temple ವೈಭವದಿಂದ ನಡೆದ ಶ್ರೀಆಂಜನೇಯಸ್ವಾಮಿ ರಥೋತ್ಸವ

Kote SeethaRamanjaneya Temple ಪುರಾತನವಾದ ಶ್ರೀ ಆಂಜನೇಯ ಸ್ವಾಮಿ ಸನ್ನಿಧಿಯಲ್ಲಿ ಪ್ರತಿವರ್ಷದಂತೆ...

Department of Kannada and Culture ಶ್ರೀಅಗ್ನಿಬನ್ನಿರಾಯಸ್ವಾಮಿಯವರ ಇತಿಹಾಸವನ್ನ ನಾವೆಲ್ಲಾ ತಿಳಿದುಕೊಳ್ಳಬೇಕು- ಆನಂದ್.

Department of Kannada and Culture ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು...

Rotary Club Shimoga ಚಿನ್ನ,ಬೆಳ್ಳಿ ಧಾರಣೆ ವ್ಯತ್ಯಾಸಕ್ಕೆ ಜಾಗತಿಕ ಸಮಸ್ಯೆಗಳೇ ಕಾರಣ- ಸೆಂಥಿಲ್ ವೆಲನ್.

Rotary Club Shimoga ಚಿನ್ನ ಮತ್ತು ಬೆಳ್ಳಿ ಕಷ್ಟಕಾಲದಲ್ಲಿ ಅಪತ್ಬಾಂದವ ರೀತಿಯಲ್ಲಿ ವರ್ತಿಸುತ್ತದೆ....

S. N. Channabasappa ಮಾದಕ ದ್ಯವ್ಯ ವ್ಯಸನ ವಿರೋಧಿ ಕ್ರಮಗಳಿಗೆ ವಿಶೇಷ ಕಾರ್ಯಪಡೆ ರಚನೆ ಮಾಡಿ- ಎಸ್.ಎನ್.ಚನ್ನಬಸಪ್ಪ.

S. N. Channabasappa ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳು ಮತ್ತು ಮಾದಕ...