ಶಿಕ್ಷಣವು ಕೇವಲ ತರಗತಿ ಕೊಠಡಿ ಮತ್ತು ಪಠ್ಯಪುಸ್ತಕಗಳಿಗೆ ಸೀಮಿತವಾಗಿರಬಾರದು. ವಿದ್ಯಾರ್ಥಿಗಳ ಹೃದಯ, ದೇಹ ಮತ್ತು ಮನಸ್ಸಿನ ಸಮಗ್ರ ಬೆಳವಣಿಗೆಗೆ ಪೂರಕವಾಗಿರಬೇಕು ಎಂದು ಡೆಲ್ಲಿ ವರ್ಲ್ಡ್ ಶಾಲೆಯ ಪ್ರಾಂಶುಪಾಲರಾದ ದಿವ್ಯ ಶೆಟ್ಟಿ ಹೇಳಿದರು.
ಅವರು ಶಾಲೆಯಲ್ಲಿ ಸಿಸಿಎ ಬಹುಮಾನ ವಿತರಣಾ ಸಮಾರಂಭದಲ್ಲಿ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಡೆಲ್ಲಿ ವರ್ಲ್ಡ್ ಶಾಲೆಯ ಕ್ರೀಡಾ ವಿಭಾಗದಲ್ಲಿ ಶಾಂತಿ ಹೌಸ್ ಒಟ್ಟಾರೆ ಚಾಂಪಿಯನ್‌ಷಿಪ್‌ನ್ನು ಪಡೆದುಕೊಂಡರೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸ್ಪೂರ್ತಿ ಹೌಸ್ ಒಟ್ಟಾರೆ ಚಾಂಪಿಯನ್‌ಷಿಪ್‌ನ್ನು ತಮ್ಮದಾಗಿಸಿಕೊಂಡಿತು.
ವಿದ್ಯಾರ್ಥಿಗಳು ವರ್ಷಪೂರ್ತಿ ವಿವಿಧ ಸ್ಪರ್ಧೆಗಳಲ್ಲಿ ಗಳಿಸಿದ ಸಾಧನೆಗಳಿಗೆ ಗೌರವಪೂರ್ವಕವಾಗಿ ಟ್ರೋಫಿಗಳು ಮತ್ತು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಶಿಕ್ಷಣವು ತರಗತಿ,ಪಠ್ಯಗಳನ್ನು ಮೀರಿ ವಿದ್ಯಾರ್ಥಿಗಳ ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾಗಿರಬೇಕು- ದಿವ್ಯಾ ಶೆಟ್ಟಿ.
Date:
