Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ರೌಡಿ ಶೀಟರ್ ಡಿಚ್ಚಿ ಮುಬಾರಕ್ ನನ್ನು ಚೇಸ್ ಮಾಡಿಕೊಂಡು ಬಂದ ಪೊಲೀಸರು ಕಾಲಿಗೆ ಗುಂಡು ಹಾರಿಸಬೇಕಾಯಿತು. ದರೋಡೆಗೆ ಹೊಂಚು ಹಾಕುತ್ತಿದ್ದ ಎಂದು ಮುಬಾರಕ್ ನನ್ನು ಸಂದೇಹಿಸಲಾಗಿದೆ.
ಶಾಸಕ ಸಂಗಮೇಶ್ವರ್ ಪುತ್ರ ಬಸವೇಶ್ ಕೊಲೆ ಬೆದರಿಕೆ ಹಾಕಿದ್ದ ಡಿಚ್ಚಿ ಮುಬಾರಕ್ ಸುಮಾರು ಒಂದುವರೆ ವರ್ಷದ ಹಿಂದೆ ಜೈಲು ಸೇರಿದ್ದ ನಿನ್ನೆ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದ ಡಿಚ್ಚಿ ಮುಬಾರಕ್ ಇದ್ದ ಕಾರಿನ ತುಂಬ ಮಾರಕಾಸ್ತ್ರಗಳು ಪತ್ತೆಯಾಗಿದೆ ಎಂಬ ಮಾಹಿತಿ ವರದಿಯಾಗಿದೆ.
Breaking News ಡಿಚ್ಚಿ ಮುಬಾರಕ್ ನ್ನ ಉಕ್ಕುಂದದಿಂದ ಚೇಸ್ ಮಾಡಿಕೊಂಡು ಬಂದ ಪೊಲೀಸರು
ಕಾರು ತೆಗೆಯಲಾಗದ ಹಿನ್ನಲೆಯಲ್ಲಿ ಡಿಚ್ಚಿ ಸೇರಿ ನಾಲ್ವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.
ಗನ್ ಸಮೇತ ಸಿಕ್ಕಿಹಾಕಿಕೊಂಡ ಮುಬಾರಕ್ ಎಂಬ ವ್ಯಕ್ತಿಯನ್ನು
ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಡಿಚ್ಚಿಗೆ ಚಿಕಿತ್ಸೆಗೆ ಸೇರಿಸಲಾಗಿದೆ. ಇದೇ ಸಂದರ್ಭದಲ್ಲಿ
ಪಿಎಸ್ಐ ಕೃಷ್ಣರಾಜ್ ಮೂವರು ಪಿಸಿ ಸಹ ಗಾಯಗೊಂಡಿದ್ದು ಭದ್ರಾವತಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
