Friday, March 27, 2026
Friday, March 27, 2026

Beluru Ramamurthy ಇಂದು‌ ಮಾನವೀಯ ಮೌಲ್ಯಗಳು ಅತ್ಯಂತ ಆವಶ್ಯಕವಾಗಿವೆ- ಬೇಲೂರು ರಾಮ ಮೂರ್ತಿ.

Date:

Beluru Ramamurthy ವಿದ್ಯಾರ್ಜನೆಗೆ ಬಂದಿರುವ ಮಕ್ಕಳು ಕಲಿಕೆ ಜೊತೆಗೆ ಕೆಲವು ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಳ್ಳಬೇಕು ಎಂದು ಖ್ಯಾತ ಸಾಹಿತಿ ಕುವೆಂಪು ಹಾಗೂ ರನ್ನ ಪ್ರಶಸ್ತಿ ಪುರಸ್ಕೃತರಾದ ಬೇಲೂರು ರಾಮಮೂರ್ತಿ ಅಭಿಮತ ವ್ಯಕ್ತಪಡಿಸಿದರು . ಅವರು ಸಹ್ಯಾದ್ರಿ ಲಲಿತಕಲಾ ಅಕಾಡೆಮಿ ವತಿಯಿಂದ ಕೀರ್ತಿನಗರದ ವನಿತಾ ವಿದ್ಯಾಲಯದಲ್ಲಿ ನಡೆದ ಮಕ್ಕಳಲ್ಲಿ ಮಾನವೀಯ ಮೌಲ್ಯಗಳು ಹಾಗೂ ಸಂಸ್ಕಾರದ ಬಗ್ಗೆ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಅವರು ಮುಂದುವರೆದು ಮಾತನಾಡಿ
ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ಅತ್ಯಂತ ಅವಶ್ಯಕ ಎಂದು ಪ್ರತಿಪಾದಿಸಿದರು. ಜೊತೆಗೆ ಹಾಸ್ಯ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಜೀವನ ಆಕರ್ಷಕವಾಗಿ ಕಾಣುತ್ತದೆ ಎಂದು ನುಡಿದರು. ಹಠ ಮತ್ತು ಛಲ ಇವೆರಡರ ಬಗ್ಗೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಸೋದಾಹರಣೆಯಾಗಿ ಮನವರಿಕೆ ಮಾಡಿಕೊಟ್ಟರು. ಸ್ನೇಹ, ಸದ್ಭಾವನೆ ಬೆಳೆಸುವ ವಿದ್ಯೆ ಇಂದಿನ ಅವಶ್ಯಕತೆ ಎಂದು ತಿಳಿಸಿದರು.
Beluru Ramamurthy ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರೊ.ವಿಜಯಕುಮಾರ್ ಮಾತನಾಡಿ ಜೀವನ ಕೌಶಲ್ಯ ಬೆಳೆಸಿಕೊಂಡು, ಓದಿನಲ್ಲಿ ಆಸಕ್ತಿ ಹೊಂದಿರಬೇಕೆಂದು ತಂತ್ರಜ್ಞಾನ ಮುಂದುವರೆದ ಹಾಗೆ ಮಕ್ಕಳಲ್ಲಿ ಸಂಸ್ಕಾರ ಹಾಗೂ ಮಾನವೀಯ ಗುಣಗಳು ಕಡಿಮೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದ್ದರು
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷೆ ತಾರಾಪ್ರಸಾದ್ ಮಾತನಾಡಿ ನಮ್ಮ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ವೇದಿಕೆಯಲ್ಲಿ ರಾಮ್ ಸುಬ್ರಾಯ ಶೇಟ್, ಹಾಲೇಶ್ ಮತ್ತು ಹರಿಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯದರ್ಶಿ ರುಕ್ಮಿಣಿ ಆನಂದ್ ವಂದನಾರ್ಪಣೆ ನಡೆಸಿಕೊಟ್ಟರು.
ಪುಟ್ಟಮ್ಮ ಶಿವಾನಿ ಯವರು ಕಾರ್ಯಕ್ರಮ ನಿರೂಪಿಸಿದರು.

ಪ್ರಾರಂಭದಲ್ಲಿ ಅಶ್ವತ್ ಅವರಿಂದ ಪ್ರಾರ್ಥನೆ, ಆರತಿ ತಿವಾರಿಯವರಿಂದ ಸ್ವಾಗತ ನಡೆಯಿತು.
ಎಂ. ಎನ್.ಸುಂದರ್ ರಾಜ್ ಕಾರ್ಯಕ್ರಮದ ಉದ್ಘಾಟನೆ ಮಾಡಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...

Online shopping ಆನ್ ಲೈನ್ ಶಾಪಿಂಗ್ ಬಗ್ಗೆ ಬಹಳ ಜಾಗರೂಕರು ಹಾಗು ಜಾಣರಾಗಿರಿ- ಟಿ.ಶಿವಣ್ಣ.

Online shopping ಇತ್ತೀಚಿನ ಕಾಲಮಾನದಲ್ಲಿ ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿದೆ. ಆನ್‌ಲೈನ್ ಶಾಪಿಂಗ್...