ತೀರ್ಥಹಳ್ಳಿ ಪ್ರತ್ಯೇಕ ಎರಡು ಮನೆಗಳಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡ ಪ್ರಕರಣ ಬೆಳಕಿಗೆ ಬಂದಿವೆ. ಒಂದು ಪ್ರಕರಣ, ಇಂದು ಬೆಳಗ್ಗೆ ತೀರ್ಥಹಳ್ಳಿಯ ಬೆಳಗಾರ್ ನಲ್ಲಿ ನಡೆದಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಬಾಳಗಾರಿನ ನಾಗರಾಜ್ ಭಟ್ ಎನ್ನುವವರ ಮನೆಯಲ್ಲಿ ಬಳಸುತ್ತಿದ್ದ ಎಚ್ ಪಿ ಗ್ಯಾಸ್ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಗ್ಯಾಸ್ ಬ್ಲಾಸ್ಟ್ ಆಗುವ ಭಯದಲ್ಲಿ ಬೆಂಕಿ ನಂದಿಸುವ ಪ್ರಯತ್ನ ನಡೆದಿದೆ. ಆ ನಂತರ ಎಚ್ ಪಿ ಗ್ಯಾಸ್ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಹಾಗೆ ಇನ್ನೊಂದು ಪ್ರಕರಣ, ಲೇಔಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿಹಾರ ಮೂಲದ ಕಾರ್ಮಿಕರು ಅಡುಗೆ ಮಾಡುವಾಗ ಗ್ಯಾಸ್ ಸ್ಟವ್ ನಲ್ಲಿ ಲೀಕ್ ಆದ ಹಿನ್ನಲೆಯಲ್ಲಿ ಸಿಲಿಂಡರ್ ಗೆ ಏಕಾಏಕಿ ಬೆಂಕಿ ಹತ್ತಿಕೊಂಡಿದ್ದು ಬೆಂಕಿ ಆರಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಮೇಲಿನಕುರುವಳ್ಳಿಯ ಕೊಪ್ಪ ರಸ್ತೆಯ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ಕಾರ್ಮಿಕರ ತಂಡ ಕೆಲಸ ನಿರ್ವಹಿಸುತ್ತಿದ್ದಾರೆ. ಅಡುಗೆ ಮಾಡುವಾಗ ಬೆಂಕಿ ಹತ್ತಿಕೊಂಡಿದೆ. ಸ್ಥಳಕ್ಕೆ ಅಗ್ನಿಶಾಮಕದಳದ ಸಿಬ್ಬಂದಿಗಳು ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಇಂದು ಬೆಳಗ್ಗೆ ಬಾಳಗಾರಿನಲ್ಲಿ ಸಂಜೆ ಮೇಲಿನಕುರುವಳ್ಳಿಯಲ್ಲಿ ಒಂದೇ ರೀತಿಯಲ್ಲಿ ಘಟನೆ ನಡೆದಿದೆ.
