ಶ್ರೀ ನಿಖಿಲ್ ಬಿ., ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಶಿವಮೊಗ್ಗ ನಗರದ ಪೂರ್ವ ಸಂಚಾರ ಪೊಲೀಸ್ ಠಾಣೆ ಹಾಗೂ ಸಂಚಾರ ವೃತ್ತ ಕಛೇರಿಗೆ ಭೇಟಿ ನೀಡಿ, ಪೊಲೀಸ್ ಗೌರವ ವಂದನೆಗಳನ್ನು ಸ್ವೀಕರಿಸಿ, ಆನಂತರ ಪೊಲೀಸ್ ಠಾಣಾ ಸ್ವಚ್ಚತೆ, ಕಡತಗಳು ಮತ್ತು ಸ್ವತ್ತಿನ ನಿರ್ವಹಣೆಯ ಬಗ್ಗೆ ಪರಿಶೀಲಿಸಿದರು.
ಈ ಸಂದರ್ಭದಲ್ಲಿ, ಡಿವೈಎಸ್.ಪಿ ಶಿವಮೊಗ್ಗ ‘ಬಿ ‘ಉಪ ವಿಭಾಗ ರವರು ಹಾಗೂ ಸಿಪಿಐ ಸಂಚಾರ ವೃತ್ತ ರವರು ಉಪಸ್ಥಿತರಿದ್ದರು. ನಂತರ ಶಿವಮೊಗ್ಗ ಸಂಚಾರ ವೃತ್ತ ಕಛೇರಿಯಲ್ಲಿ ಶಿವಮೊಗ್ಗ ಪೂರ್ವ ಹಾಗೂ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು. ಆನಂತರ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ, ಅವರುಗಳ ಕುಂದು ಕೊರತೆಯನ್ನು ಆಲಿಸಿದರು.
