Thursday, March 19, 2026
Thursday, March 19, 2026

Shivamogga Police ಕಾಣೆಯಾಗಿದ್ದಾರೆ : ಸುಳಿವು ನೀಡಲು ಮನವಿ

Date:

Shivamogga Police ಶಿವಮೊಗ್ಗ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ದಿನಾಂಕಗಳAದು ನಾಲ್ವರು ಕಾಣೆಯಾಗಿದ್ದು, ವಿವರ ಕೆಳಕಂಡಂತಿವೆ.
ನಗರದ ಹೊಸಮನೆ ಬಲಭಾಗದ 2ನೇ ಕ್ರಾಸ್ ವಾಸಿ ಸ್ವಾಮಿ ಎಂಬುವವರ ತಮ್ಮ ಶಿವು ಜಿ. ಬಿನ್ ಗಂಗಾ ಭೋವಿ ಎಂಬ 29 ವರ್ಷದ ವ್ಯಕ್ತಿ ಮೇ 2025 ರಲ್ಲಿ ಮನೆಯಿಂದ ಜೆಸಿಬಿ ಡ್ರೈವರ್ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ನಗರದ ಬಸವನಗಂಗೂರು ವಾಸಿ ಹಾಲೇಶಪ್ಪ ಎಂಬುವವರ ಮಗ ನ್ಯೂಮಂಡ್ಲಿ ವಾಸಿ ಲೋಹಿತ ಎಂಬ 36 ವರ್ಷದ ವ್ಯಕ್ತಿ ಆಗಸ್ಟ್ 2025 ರಲ್ಲಿ ಟೈಲ್ಸ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.6 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿರುತ್ತಾರೆ.
Shivamogga Police ಬೊಮ್ಮನಕಟ್ಟೆ ಕೊನೆ ಬಸ್ ನಿಲ್ದಾಣದ ಹತ್ತಿರ ಶ್ರೀ ಮಲ್ಲಿಕಾರ್ಜುನ ನಿಲಯ, ಇ ಬ್ಲಾಕ್ ವಾಸಿ ಬಿ.ಎಂ. ಸಿದ್ದಯ್ಯ ಬಿನ್ ಮಲ್ಲಯ್ಯ ಎಂಬ 64 ವರ್ಷದ ವ್ಯಕ್ತಿ ಫೆಬ್ರವರಿ 2025ರಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸಕ್ಕೆಂದು ಮನೆಯಿಂದ ಹೋದವರು ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.3 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಗಾಡಿಕೊಪ್ಪ ಗಂಧರ್ವ ಬಾರ್ ಹಿಂಭಾಗ ವಾಸಿ ಸಚಿನ್ ಈ ಬಿನ್ ಈಶ್ವರ ಎಂ. ಹೆಚ್. ಎಂಬ 19 ವರ್ಷದ ಯುವಕ ಸೆಪ್ಟಂಬರ್ 2024 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈ ವ್ಯಕ್ತಿಯ ಚಹರೆ 5.4 ಅಡಿ ಎತ್ತರ, ದುಂಡುಮುಖ, ಗೋಧಿಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ.
ಈ ಮೇಲ್ಕಂಡ 4 ಜನ ವ್ಯಕ್ತಿಗಳ ಸುಳಿವು ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ನಂ.: 100 ಅಥವಾ ದೂ.ಸಂ.: 08182-261400 261424/ 9480803308/ 9480803373 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ತಿಳಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...