Bharat Scouts and Guides ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ಜಿಲ್ಲಾ ಸ್ಕೌಟ್ ಭವನದ ಆವರಣದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ದೆಹಲಿಯಲ್ಲಿ ನಡೆಯುವ ರೀತಿ ಮಾದರಿಯ ‘ಬೀಟಿಂಗ್ ದ ರಿಟ್ರೀಟ್’ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಜನರಲ್ ಮ್ಯಾನೇಜರ್ ವಿನಯ್ ಕಠಾರೆ ಅವರು ಅಮರ್ ಜವಾನ್‌ಗೆ ಗೌರವ ಸಲ್ಲಿಸಿದರು.
25ನೇ ವರ್ಷದ ರಿಟ್ರೀಟ್ ಕಾರ್ಯಕ್ರಮದ ಆಯೋಜನೆ ಮಾಡಿದ್ದ ಮಲ್ನಾಡ್ ಓಪನ್ ಗ್ರೂಪ್‌ನ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ 60 ವಿದ್ಯಾರ್ಥಿಗಳ ತಂಡ ಅತ್ಯುತ್ತಮ ಬ್ಯಾಂಡ್ ಪ್ರದರ್ಶನ ನೀಡಿತು.
ಸಾಂದೀಪನಿ ಶಾಲೆಯ ವಿದ್ಯಾರ್ಥಿಗಳು ಉತ್ತಮವಾಗಿ ದೈಹಿಕ ಕವಾಯತು ಪ್ರದರ್ಶಿಸಿದರು. ಮೇರಿ ಇಮಾಕ್ಯುಲೇಟ್ ಹಿರಿಯ ಪ್ರಾಥಮಿಕ ಶಾಲೆ ಗೈಡ್ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗೆ ನೃತ್ಯ ಪ್ರದರ್ಶಿಸಿದರು. ರೇಡಿಯೋ ಶಿವಮೊಗ್ಗ 90.8 ಎಫ್.ಎಂನ ಆರ್.ಜೆ.ಅರ್ಪಿತ ಅವರ ಮುಂಗೋಳಿ ಕೂಗ್ಯಾವೋ, ಪರಿಸರ ಪರಿಚಯ, ಬ್ಯುಜಿನೆಸ್ ಬಝ್ ಕಾರ್ಯಕ್ರಮಗಳ ವಿಶೇಷ ಕಾಳಜಿಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಮಲ್ನಾಡ್ ಓಪನ್ ಗ್ರೂಪ್‌ನ ಸ್ವಯಂ ಸೇವಕ ಚಂದನ್.ಕೆ.ಎಂ, ರಾಷ್ಟ್ರೀಯ ಟೆಕ್ವಾಂಡೋ ರೆಫರಿ ಆಗಿರುವ ನವೀ.ಡಿ.ಸಿ, ಕರಾಟೆಯಲ್ಲಿ ಸಾಧನೆ ಮಾಡಿರುವ ಶೃತಿ.ಪಿ, ಗ್ರೂಪ್ ಹಿರಿಯ ಸದಸ್ಯ ಉಮೇಶ್.ಹೆಚ್.ವಿ, 25 ವರ್ಷ ಶಿಕ್ಷಕ ಸೇವೆ ಗುರುತಿಸಿ ಸ್ವಾಮಿ ವಿವೇಕಾಂದ ಶಾಲೆಯ ದೈಹಿಕ ಶಿಕ್ಷಕ ಜಯದೇವ್.ಹೆಚ್.ಎನ್ ಅವರನ್ನು ಸನ್ಮಾನಿಸಲಾಯಿತು.
ಗ್ರೂಪ್ ಸದಸ್ಯ ಚೇತನ್ ಕುಮಾರ್.ಸಿ 46ನೇ ಬಾರಿ ರಕ್ತದಾನ ಮಾಡಿದ್ದನ್ನು ಗುರುತಿಸಿ ಉತ್ತಮ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿದರು. ನಗರದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
Bharat Scouts and Guides ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿ.ವಿಜಯ್ ಕುಮಾರ್, ರವಿ.ಕೆ, ಎಸ್.ಜಿ.ಆನಂದ್, ಎಸ್.ಕೆ.ಲಕ್ಷ್ಮೀ, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾದ ನವೀನ್ ಜವಳಿ, ಗ್ರೂಪ್‌ನ ಫೋಷಕರ್ ಪ್ರರಮೇಶ್ವರ.ಹೆಚ್, ರಾಜೇಶ್ ಅವಲಕ್ಕಿ ಮತ್ತು ಚೇತನ್ ಕುಮಾರ್.ಸಿ, ಶ್ರೀನಿವಾಸ ವರ್ಮಾ ಇದ್ದರು.
ಅಮರ್ ಜವಾನ್ ಮುಂದೆ ದೇಶಕ್ಕಾಗಿ ಮಡಿದ ವೀರಯೋಧರಿಗೆ ದೀಪ ಬೆಳಗಿಸುವ ಮೂಲಕ ನಮನ ಸಲ್ಲಿಸಲಾಯಿತು. ಪರಮವೀರಚಕ್ರ ಪುರಸ್ಕತ 21 ಯೋಧರ ಭಾವಚಿತ್ರವನ್ನು ಅಮರ್ ಜವಾನ್ ಹಿಂಭಾಗದಲ್ಲಿ ಹಾಕಲಾಗಿತ್ತು.
