Monday, February 2, 2026
Monday, February 2, 2026

Keladi Shivappa Nayak University of Agricultural ಅಡಿಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ”; ರಾಷ್ಟ್ರೀಯ ವಿಚಾರ ಸಂಕಿರಣ

Date:

Keladi Shivappa Nayak University of Agricultural ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತುತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ, ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡ್, ಐ.ಸಿ.ಎ.ಆರ್. – ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಸಂಸ್ಥೆ, ಕೋಜಿಕೋಡ್, ಐ.ಸಿ.ಎ.ಆರ್. – ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆ (ಸಾಂಬಾರು ಬೆಳೆ), ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತುರಫ್ತು ನಿಗಮ ಲಿಮಿಟೆಡ್, ಬೆಂಗಳೂರು, ಮಲ್ನಾಡ್ ಅಡಿಕೆ ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್, ಶಿವಮೊಗ್ಗ, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ, ಚನ್ನಗಿರಿ ಮತ್ತು ಇಂಡಿಯನ್ ಸೊಸೈಟಿ ಆಫ್ ಸ್ಪೈಸಸ್, ಕೋಜಿಕೋಡ್‌ರವರ ಸಹಯೋಗದೊಂದಿಗೆ ಜ. 28 ಮತ್ತು 29 ರಂದು “ಅಡಿಕೆ ಸಮೃದ್ಧಿಗಾಗಿ ಕಾಳು ಮೆಣಸಿನ ಅಂತರ ಬೆಳೆ” (An Intercrop in Arecanut for prosperity) ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಭಾರತದ ಬೇರೆ ಬೇರೆ ರಾಜ್ಯಗಳಿಂದ 500ಕ್ಕೂ ಹೆಚ್ಚು ಅಧಿಕಾರಿಗಳು, ವಿಜ್ಞಾನಿಗಳು, ರೈತರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈ ಎರಡು ದಿನದ ಕಾರ್ಯಕ್ರಮದಲ್ಲಿ ಮೊದಲನೆಯ ದಿನ ನಾಲ್ಕು ತಾಂತ್ರಿಕ ಅಧಿವೇಶನವಿದ್ದು, ಮೊದಲ ತಾಂತ್ರಿಕ ಅಧಿವೇಶನದಲ್ಲಿ ‘ಸಂಶೋಧನೆ ಮತ್ತು ಪ್ರಚಲಿತ ಸಮಸ್ಯೆಗಳು’ ಎಂಬ ವಿಷಯದ ಬಗ್ಗೆ ಆಹ್ವಾನಿತ ಮೂರು ಸಂಪನ್ಮೂಲ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಎರಡನೆಯ ಅಧಿವೇಶನದಲ್ಲಿ ‘ಅಡಿಕೆ ಮತ್ತು ಕಾಳುಮೆಣಸಿನ ಸಸ್ಯೋತ್ಪಾದನೆ ಮತ್ತು ಸಾಗುವಳಿ’ ಎಂಬ ವಿಷಯದ ಬಗ್ಗೆ ಆಹ್ವಾನಿತ ನಾಲ್ಕು ಸಂಪನ್ಮೂಲ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಮೂರನೇ ಅಧಿವೇಶನದಲ್ಲಿ ‘ಕಾಳುಮೆಣಸಿನಲ್ಲಿ ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ ಮತ್ತು ಜೀನೋಮಿಕ್ಸ್’ ಎಂಬ ವಿಷಯದ ಬಗ್ಗೆ ಆಹ್ವಾನಿತ ಐದು ಸಂಪನ್ಮೂಲ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಕೊನೆಯ ಮತ್ತು ನಾಲ್ಕನೇ ಅಧಿವೇಶನದಲ್ಲಿ ‘ಕಾಳುಮೆಣಸಿನಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ’ ಕುರಿತು ಆಹ್ವಾನಿತ ಇಬ್ಬರು ಸಂಪನ್ಮೂಲ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.
ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನದ ಕಾರ್ಯಕ್ರಮದಲ್ಲಿ ಎರಡು ತಾಂತ್ರಿಕ ಅಧಿವೇಶನವಿದ್ದು, ಮೊದಲ ತಾಂತ್ರಿಕ ಅಧಿವೇಶನದಲ್ಲಿ ‘ಕಾಳುಮೆಣಸು ಬೆಳೆಯಲ್ಲಿ ನೂತನ ಉತ್ಪಾದನಾ ತಾಂತ್ರಿಕತೆ ಮತ್ತು ಸಸ್ಯ ಸಂರಕ್ಷಣೆ’ ಕುರಿತು ಆಹ್ವಾನಿತ ಇಬ್ಬರು ಸಂಪನ್ಮೂಲ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ. ಎರಡನೇ ತಾಂತ್ರಿಕ ಅಧಿವೇಶನದಲ್ಲಿ ‘ಕಾಳುಮೆಣಸಿನ ಬೆಳೆಯಲ್ಲಿ ಉತ್ಪಾದನೆ, ಸಂಸ್ಕರಣೆ ಮತ್ತು ಮಾರುಕಟ್ಟೆಯ ಕ್ಷೇತ್ರದಲ್ಲಿ ನಾವೀನ್ಯತೆ’ ಬಗ್ಗೆ ಸಂಪನ್ಮೂಲ ವಿಜ್ಞಾನಿಗಳು ಚರ್ಚೆ ನಡೆಸಲಿದ್ದಾರೆ. ನಂತರ ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಗೆ ಸೇರುವ ಕಾಳುಮೆಣಸು ಬೆಳೆಯುವ ಪ್ರಗತಿಪರ ರೈತರು ಹಾಗೂ “ಅಂತರಾಷ್ಟಿçಯ ಕಾಳುಮೆಣಸು ಪ್ರಶಸ್ತಿ” ಪಡೆದಿರುವ ರೈತರು ತಮ್ಮ ಅನಿಸಿಕೆ ಹಂಚಿಕೊಳ್ಳಲ್ಲಿದ್ದಾರೆ. 30ಕ್ಕೂ ಹೆಚ್ಚು ಕಾಳುಮಣಸಿನ ತಳಿಗಳ ಪ್ರದರ್ಶನ ಹಾಗೂ 20ಕ್ಕೂ ಹೆಚ್ಚು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ವಿಚಾರ ಸಂಕಿರಣದಲ್ಲಿ ಮಂಡಿಸಿದ ‘ವಿಷಯದ ಪುಸ್ತಕ’, ‘ಅಡಿಕೆಯಲ್ಲಿ ಅಂತರ ಬೆಳೆಯಾಗಿ ಕಾಳುಮೆಣಸು’ ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುವುದು ಹಾಗೂ ಸಸ್ಯ ತಳಿ ಸಂರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರದಲ್ಲಿ ನೋಂದಾಯಿಸಿದ ನಾಲ್ಕು ಕಾಳುಮೆಣಸಿನ ತಳಿಗಳ ನೋಂದಣಿ ಪ್ರಮಾಣಪತ್ರವನ್ನು ರೈತರಿಗೆ ಕೊಡಲಾಗುವುದು.
Keladi Shivappa Nayak University of Agricultural ಈ ಕಾರ್ಯಕ್ರಮದಲ್ಲಿ ಡಾ. ಹೋಮಿ ಚೆರಿಯನ್, ನಿರ್ದೇಶಕರು, ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯ ಕೋಜಿಕೋಡ್, ಡಾ. ಆರ್ ದಿನೇಶ್, ನಿರ್ದೇಶಕರು, ಐ.ಸಿ.ಎ.ಆರ್. ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಸಂಸ್ಥೆ, ಅಖಿಲ ಭಾರತ ಸಂಯೋಜಿತ ಸಂಶೋಧನಾಯೋಜನೆ (ಸಾಂಬಾರು), ಡಾ. ಡಿ ಪ್ರಸಾತ್, ಯೋಜನಾ ಸಂಯೋಜಕರು, ಸಿ.ಎನ್ ಶಿವಪ್ರಕಾಶ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಲಿಮಿಟೆಡ್, ಬೆಂಗಳೂರು, ಮಹೇಶ್ ಹೆಚ್.ಎ¸.ï ಹುಲ್ಕುಳಿ, ಉಪಾಧ್ಯಕ್ಷರು, ಮಲ್ನಾಡ್ ಅಡಿಕೆ ಕೋ-ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್, ಶಿವಮೊಗ್ಗ, ಹೆಚ್.ಎಸ್ ಶಿವಕುಮಾರ್, ಅಧ್ಯಕ್ಷರು, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘ ನಿಯಮಿತ, ಚನ್ನಗಿರಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಡಾ. ಆರ್.ಸಿಜಗದೀಶ್, ಕುಲಪತಿಗಳು, ವಿಶ್ವವಿದ್ಯಾಲಯದ ಎಲ್ಲಾ ವಿಜ್ಞಾನಿಗಳು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಯವರು ತಮ್ಮ ಸಂಶೋಧನೆಯ ಫಲಿತಾಂಶದ ಬಗ್ಗೆಯೂ ಸಹ ಪ್ರಸ್ತುತ ಪಡಿಸಲಾಗುವುದು ಎಂದು ಡಾ. ಆರ್.ಸಿ ಜಗದೀಶ್, ಗೌರವಾನ್ವಿತ ಕುಲಪತಿಗಳು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ನವಿಲೆ, ಶಿವಮೊಗ್ಗರವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...