ಮತದಾನ ಒಂದು ಶ್ರೇಷ್ಟವಾದ ಪ್ರಕ್ರಿಯೆಯಾಗಿದ್ದು ಇದು ನಮಗೆ ಪ್ರಶ್ನಿಸುವ ಹಕ್ಕನ್ನೂ ನೀಡುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಮಂಜುನಾಥ ಜಿ ಎ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಘೂ ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಕುವೆಂಪು ರಂಗಮAದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮದು ವಿಶಾಲ ಮತ್ತು ಸಂಬತ್ಭರಿತ ದೇಶವಾಗಿದ್ದರೂ ಸ್ವಾತಂತ್ರಾö್ಯ ಮುನ್ನ ಒಗ್ಗಟ್ಟಿನ ಕೊರತೆ ಕಾರಣ ಉತ್ತಮ ನಾಯಕರನ್ನು ಆರಿಸಲು ಆಗದೇ ನಾಯಕನ ಕೊರತೆ ಕಾಣುತ್ತಿತ್ತು. ಸ್ವಾತಂತ್ರಾö್ಯ ನಂತರ ಸಂವಿಧಾನ ರಚನೆಯಾದ ಮೇಲೆ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಆರಂಭಿಸಿದೆವು. ಚುನಾವಣೆ ಎಂಬುದೊAದು ಶ್ರೇಷ್ಟತಮ ಪ್ರಕ್ರಿಯೆಯಾಗಿದ್ದು ಎಲ್ಲ ಮತದಾರರು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮತದಾನವು ನಮ್ಮ ನಾಯಕರ ಕುರಿತು ಪ್ರಶ್ನಿಸುವ ಹಕ್ಕನ್ನು ಸಹ ನೀಡುವುದರಿಂದ ಇದೊಂದು ಉತ್ಕೃಷ್ಟ ಕೆಲಸವಾಗಿದೆ. ಅತ್ಯಂತ ನಿಷ್ಟೆ ಮತ್ತು ನ್ಯಾಯಪರವಾಗಿ ಚುನಾವಣೆಗಳನ್ನು ಮಾಡಬೇಕು. ನಾವೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ಶಿವಮೊಗ್ಗ ಜಿಲ್ಲಾ ಚುನಾವಣಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ ಮಾತನಾಡಿ, ನಾವು ರಾಷ್ಟçಕ್ಕಾಗಿ ಮಾಡುವ ಪ್ರಮುಖ ಕೆಲಸ ಮತದಾನವಾಗಿದ್ದು, ಪ್ರತಿಯೊಬ್ಬ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿಕೊಳ್ಳುವುದು ಅತಿ ಮುಖ್ಯ ಕೆಲಸವಾಗಿದೆ ಎಂದರು.
ಚುನಾವಣಾ ಪ್ರಕಿಯೆ ಬಗ್ಗೆ, ತಾವು ಆರಿಸಲಿರುವ ನಾಯಕರ ಬಗ್ಗೆ ಸರಿಯಾಗಿ ತಿಳಿದುಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆ ಇದ್ದು, ನಾಗರೀಕರಲ್ಲಿ ಈ ನಿರಾಸಕ್ತಿ ಹೋಗಬೇಕು. ಯುವ ಮತದಾರರು ಮತದಾನದ ಕುರಿತು ಜಾಗೃತಿ ಮೂಡಿಸಬೇಕು ಎಂದ ಅವರು ಮತದಾನದಲ್ಲಿ ಮೂಲ ದಾಖಲಾತಿ ಮತದಾರರ ಪಟ್ಟಿಯಾಗಿದ್ದು, ಇದು ಸಮರ್ಪಕವಾಗಿದ್ದರೆ ಮುಂದಿನ ಎಲ್ಲ ಹಂತಗಳು ಸುಸೂತ್ರವಾಗಿ ಆಗುತ್ತದೆ. ಆದ್ದರಿಂದ ಪ್ರತಿ ಮತದಾರ ತನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಪರಿಶೀಲಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‌ಐಆರ್) ಪೂರ್ವಭಾವಿ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿದ್ದು ಚುನಾವಣಾ ಆಯೋಗದ ನಿರ್ದೇಶನದಂತೆ ಶೇ. 100 ಕಾರ್ಯ ಸಾಧಿಸುತ್ತೇವೆ. ಎಲ್ಲ ಬಿಎಲ್ ಓಗಳು ಮತದಾರರ ಮ್ಯಾಪಿಂಗ್, ಪ್ರೊಜೆನಿ ಮ್ಯಾಪಿಂಗ್ ಕಾರ್ಯ ಮಾಡುವಲ್ಲಿ ಸಹಕರಿಸಬೇಕು. ಬಿಎಲ್‌ಓ ಸೇರಿದಂತೆ ಎಲ್ಲ ಹಂತದ ಚುನಾವಣಾ ಅಧಿಕಾರಿಗಳು ಉತ್ತಮವಾಗಿ ಕೆಲಸ ಮಾಡಿ ಜಿಲ್ಲೆಗೆ ಒಳ್ಳೆಯ ಹೆಸರು ತರೋಣ ಎಂದರು..
ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ನಿಖಿಲ್ ಬಿ ಮಾತನಾಡಿ, ಚುನಾವಣೆಯ ಸಂಪೂರ್ಣ ಪ್ರಕ್ರಿಯೆ ಸಾಮಾನ್ಯವಾದುದ್ದಲ್ಲ. ಚುನಾವಣೆ ಒಂದು ಅತಿ ಮುಖ್ಯ ಕೆಲಸವಾಗಿದ್ದು ಸಂವಿಧಾನದ ಎಲ್ಲ ಆಶಯಗಳನ್ನು ಜಾರಿಗೆ ತರುವ ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಬಿಎಲ್‌ಓ ಮಟ್ಟದಿಂದ ಎಲ್ಲ ಹಂತದ ಅಧಿಕಾರಿಗಳು ಕಷ್ಟು ಪಟ್ಟು ಕೆಲಸ ಮಾಡುತ್ತೀರಿ. ಇದು ನಾವು ಸಂವಿಧಾನಕ್ಕಾಗಿ ಮಾಡುವ ಕೆಲಸ. ಅತ್ಯಂತ ಸಮರ್ಪವಾಗಿ ಮಾಡಬೇಕು.
ಸ್ವೀಪ್ ಚಟುವಟಿಕೆಯಿಂದ ಹಿಡಿದು ಮತಗಳ ಎಣಿಕೆ ವರೆಗೆ ಅನೇಕ ಕೆಲಸಗಳಿದ್ದು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು. ಪ್ರತಿಯೊಂದು ಚುನಾವಣೆಯನ್ನು ಹೆಮ್ಮೆಯಿಂದ ಮಾಡಬೇಕು. ಇವಿಎಂ ಒಂದು ಅದ್ಭುತ ಆಯುಧ ಎಂದೇ ಹೇಳಬಹುದಾಗಿದ್ದು ಇದನ್ನು ಅಭೂತಪೂರ್ವವಾಗಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ಎತ್ತಿ ಹಿಡಿಯುವುದು ಚುನಾವಣೆಯಾಗಿದ್ದು ನಾವೆಲ್ಲಾ ನಮ್ಮ ವಿವೇಚನೆ ಉಪಯೋಗಿಸಿ ಮತ ಚಲಾಯಿಸಬೇಕು. ಪ್ರತಿ ಮತದಾರರು ಪಕ್ಷದ ಪ್ರಣಾಳಿಕೆಯನ್ನು ಸರಿಯಾಗಿ ಓದಿಕೊಂಡು, ಯೋಚಿಸಿ ಮತದಾನ ಮಾಡಬೇಕು. ಮಹಿಳೆಯರು ಸಕ್ರಿಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ತಮಗೆ ಸರಿಯಾಗಿ ಕಂಡ ಅಭ್ಯರ್ಥಿಗೆ ಮತ ಹಾಕಿರಿ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್. ‘ನನ್ನ ಭಾರತ ನಮ್ಮ ಮತ ನಾನು ಭಾರತೀಯ’ ಎಂಬ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 1752885 ಜನ ನೋಂದಯಿತ ಮತದಾರರ ಪೈಕಿ 1378579 ಜನರು ಮಾತ್ರ ಮತ ಚಲಾವಣೆ ಮಾಡಿರುತ್ತಾರೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರದಲ್ಲಿ ಅತಿ ಕಡಿಮೆ ಪ್ರಮಾಣದ ಅಂದರೆ ಶೇ. 68.96 ಮತದಾನವಾಗಿದೆ.
ಮತದಾನದಲ್ಲಿ ಎಲ್ಲ ಮತದಾರರು ಪಾಲ್ಗೊಳ್ಳಬೇಕಿರುವುದು ಅತಿ ಅವಶ್ಯವಾಗಿದ್ದು 2013 ರಲ್ಲಿ ಸರ್ವೋಚ್ಚ ನ್ಯಾಯಾಲಯವು ನೋಟಾ(ನನ್ ಆಫ್ ದಿ ಎಬವ್) ಅಂದರೆ ಯಾವುದೇ ಅಭ್ಯರ್ಥಿಗೆ ಮತ ನೀಡಲು ಇಷ್ಟವಿಲ್ಲ ಎಂಬುದನ್ನು ನಮೂದಿಸಲು ಅವಕಾಶವನ್ನು ನೀಡುವ ಮೂಲಕ ನಮ್ಮ ಮೂಲಭೂತ ಹಕ್ಕನ್ನು ಕರ್ತವ್ಯ ಕೂಡ ಆಗಿದೆ ಎಂದು ಆದೇಶಿಸಿದೆ. ಆದ್ದರಿಂದ ಯಾವುದೇ ಅಭ್ಯರ್ಥಿಗಳಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ನೋಟಾ ಹಾಕುವ ಮೂಲಕವಾದರೂ ಶೇ. 100 ಮತದಾನವಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿಗಳಾದ ಅಭಿಷೇಕ್ ವಿ. ಮಾತನಾಡಿ, ನಮ್ಮ ದೇಶದಲ್ಲಿ ಸಂವಿಧಾನ ರಚನೆಯಾದ ಮೊದಲನೇ ದಿನದಿಂದ ಸಾರ್ವತ್ರಿಕ ಮತದಾನದ ಮೂಲಕ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದಂತೆ ಮುಕ್ತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರತಿ ಮತಗಟ್ಟೆಗಳಲ್ಲಿ ಒಂದು ಮದುವೆಯಂತೆ ನಡೆಯುತ್ತದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಬಿಎಲ್‌ಓ ಗಳ ಕಾರ್ಯ ಪ್ರಮುಖವಾಗಿದ್ದು ನಿಮ್ಮ ಶ್ರಮ ಅಭಿನಂದನಾರ್ಹವಾಗಿದೆ ಎಂದ ಅವರು ಚುನಾವಣಾ ಆಯೋಗವು ನೀಡುವ ಸೂಚನೆ, ನಿರ್ದೇಶನಗಳ ಅನುಗುಣವಾಗಿ ನಾವೆಲ್ಲ ಚುನಾವಣಾ ಕೆಲಸಗಳನ್ನು ಮಾಡೋಣ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ಹಾಗೂ ಅತ್ಯುತ್ತಮ ಬಿಎಲ್‌ಓ ಗಳು, ಅತ್ಯುತ್ತಮ ಸೂಪರ್‌ವೈಸರ್ ಗಳನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಮತ್ತು ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಮತದಾರರ ನೋಂದಣಾಧಿಕಾರಿ ಪ್ರಶಸ್ತಿ ಪಡೆದ ಪಾಲಿಕೆಯ ಆಯುಕ್ತರಾದ ಕೆ.ಮಾಯಣ್ಣ ಗೌಡರನ್ನು ಅಭಿನಂದಿಸಲಾಯಿತು.
ಮಹಾನಗರಪಾಲಿಕೆ ಆಯುಕ್ತರು ಹಾಗೂ 113-ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮಾಯಣ್ಣಗೌಡ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿವಮೊಗ್ಗ ಉಪ ವಿಭಾಗಾಧಿಕಾರಿ ಬಿ.ಹೆಚ್ ಸತ್ಯನಾರಾಯಣ, ಸಾಗರ ಉಪ ವಿಭಾಗದ ಉಪ ವಿಭಾಗಾಧಿಕಾರಿ ವೀರೇಶಕುಮಾರ್, ಶಿವಮೊಗ್ಗ ತಹಶೀಲ್ದಾರ್ ವಿ.ಎಸ್. ರಾಜೀವ್,ತಹಶೀಲ್ದಾರ್ (ಚುನಾವಣೆ) ಶೋಭಾಲಕ್ಷ್ಮಿ ಹೆಚ್.ಎಸ್., ಪಾಲಿಕೆ ಕಾರ್ಯಪಾಲಕ ಅಭಿಯಂತರರು ಪ್ರಿಯಾ.ಪಿ., ಜಿಲ್ಲಾ ಪಂಚಾಯತ್ ಸಿಪಿಓ ಹನುಮಾನಾಯಕ್ ಮತ್ತು ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಶ್ನಿಸುವ ಹಕ್ಕನ್ನೂ ನೀಡುವ ಮತದಾನ ಶ್ರೇಷ್ಟತಮ ಪ್ರಕ್ರಿಯೆ : ನ್ಯಾ.ಮಂಜುನಾಥ ಜಿ. ಎ.
Date:
