ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.
Purandara Dasa ಪುರಂದರದಾಸರು
ಮೊದಲ ಹೆಸರು
ಶ್ರೀನಿವಾಸನಾಯಕರು
ತಿರುಪತಿ ತಿಮ್ಮಪ್ಪನ
ದಯದಿಂದ
ಹುಟ್ಟಿದವರು.
ತಂದೆ ವರದಪ್ಪನಾಯಕರು
ದೊಡ್ಡ ಚಿನ್ನಬೆಳ್ಳಿ ವ್ಯಾಪಾರಸ್ಥರು
ಮಗನೂ ತಂದೆಯ ವ್ಯವಹಾರ
ಮುಂದುವರೆಸಿದನು.
ನವಕೋಟಿ ನಾರಾಯಣ ಎಂದು
ಕರೆಸಿಕೊಂಡನು.
ಸರಸ್ವತೀದೇವಿ ಸಾಧ್ವಿ
ಕೈಹಿಡಿದವಳು
ಸಂಪತ್ತು ಗಳಿಕೆಯಲ್ಲೇ
ತಲ್ಲೀನನಾದವನು
ಸಂಸಾರದ ಜಂಜಾಟ ತಲೆಗೆ
ಹಚ್ಚಿಕೊಳ್ಳದವನು.
ಜಿಪುಣಾಗ್ರೇಸ ಚಕ್ರವರ್ತಿ
ಎಂದು ಕರೆಸಿಕೊಂಡವನು.
ಪರೀಕ್ಷೆ ಮಾಡಲೆಂದೇ ವಿಠ್ಠಲನೇ
ವೇಷ ಮರೆಸಿಕೊಂಡು
ನಾಯಕನ ಬಳಿ ಬಂದನು.
ಮಗನ ಉಪನಯನಕ್ಕೆಂದು
ಹಣ ಯಾಚಿಸಿದನು.
ಪರೀಕ್ಷೆಯಲಿ ಪಾಸಾದವರು
ನಾಯಕರ ಪತ್ನಿ ಸರಸ್ವತಮ್ಮ
ನವರು
ವಿಠ್ಠಲನ ಕೃಪಾಂಕದ
ದಯೆಯಿಂದ ಪಾಸಾದರು
ನಾಯಕರು.
ಹೆಂಡತಿಯಿಂದ ಜ್ಞಾನೋದಯ
ವಾಯಿತೆಂದು
ಹಾಡಿ ಹೊಗಳಿದರು.
ಹೆಂಡತಿಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ
ಹಿಡಿಸಿದಳಯ್ಯ ಎಂದು
ಕೊಂಡಾಡಿದರು.
ಧನಕನಕಾದಿ ಸಂಪತ್ತೆಲ್ಲವನ್ನು
ನಾರಾಯಣನ ಪಾದಕ್ಕೆ
ಸಮರ್ಪಿಸಿದರು.
ಕೃಷ್ಣಾರ್ಪಣ
ಎಂದರು.
Purandara Dasa ತಾವು ಭಕ್ತಿಯೆಂಬೋ ಸಂಪತ್ತಿಗೆ
ಒಡೆಯರಾದರು.
ತಾಳ ತಂಬೂರಿ ಹಿಡಿದು
ವಿಜಯನಗರಕ್ಕೆ ಹೊರಟರು.
ವ್ಯಾಸರಾಯ ಗುರುಗಳಿಗೆ
ಅಡ್ಡಬಿದ್ದು ಶರಣೆಂದರು.
ಗುರುಗಳು ಆಶೀರ್ವದಿಸಿ
ದಾಸ ದೀಕ್ಷೆ ಬೋಧಿಸಿದರು
ಪುರಂದರವಿಠಲ ಅಂಕಿತ
ಪ್ರದಾನ ಮಾಡಿದರು.
ಶ್ರೀನಿವಾಸ ನಾಯಕರು
ತುಂಗಭದ್ರೆಯಲಿ ಮುಳುಗಿ
ಪುರಂದರದಾಸರಾಗಿ ಬಂದರು.
ಇವರು ಆಡಿದ ಮಾತೆಲ್ಲಾ
ಹಾಡಾಯಿತು.
ಕೇಳುವವರಿಗೆ ಬುದ್ಧಿಮಾತಾಯಿತು.
ಹಂಪಿಯನ್ನೇ ಕಾರ್ಯಕ್ಷೇತ್ರ
ಮಾಡಿಕೊಂಡರು.
ಯಂತ್ರೋದ್ಧಾರಕ ಪ್ರಾಣದೇವರ
ಪೂಜೆಮಾಡಿದರು
ತೀರ್ಥಕ್ಷೇತ್ರಗಳ ಯಾತ್ರೆ
ಮಾಡಿದರು.
ನಾಲ್ಕುಲಕ್ಷಕ್ಕೂ ಹೆಚ್ಚು
ಹಾಡು ಬರೆದರು.
ಸಂಗೀತಕ್ಷೇತ್ರದ ಸಾಧನೆಗೆ
ಸಂಗೀತಪಿತಾಮಹರೆಂದು
ಕರೆಸಿಕೊಂಡರು.
ಪುಷ್ಯ ಅಮಾವಾಸ್ಯೆಯಂದು
ಹರಿಪಾದ ಸೇರಿದರು.
ಇದನ್ನು ಆರಾಧನಾ ದಿನವನ್ನಾಗಿ
ಆಚರಿಸುವರು.
ಭಕ್ತಿಯಿಂದ ನಮನ
ಸಲ್ಲಿಸಿದವರಿಗೆ
ಹರಸುವರು
ಪುರಂದರದಾಸರು.
