Thursday, March 19, 2026
Thursday, March 19, 2026

Bhadravati VISL ಭದ್ರಾವತಿ ವಿಐಎಸ್ಎಲ್ ಸಂಸ್ಥಾಪಕರ ದಿನಾಚರಣೆ.

Date:

Bhadravati VISL ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನಾಚರಣೆ ಅತ್ಯುತ್ತಮ ಇಂಜೀನಿಯರ್, ರಾಜನೀತಿಜ್ಞ ಸರ್.ಎಮ್. ವಿಶ್ವೇಶ್ವರಾಯರವರ ಮಾರ್ಗದರ್ಶನ ಮತ್ತು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ನೇತೃತ್ವದಲ್ಲಿ ೧೯೧೮, ಜನವರಿ ೧೮ ರಂದು ಮೈಸೂರು ವುಡ್ ಡಿಸ್ಟಿಲೇಶನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಭದ್ರಾವತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

Bhadravati VISL ಆ ದಿನವನ್ನು ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನವೆಂದು ಪ್ರತೀವರ್ಷ ಆಚರಿಸಲಾಗುವುದು. ಅದರಂತೆ ಈ ವರ್ಷವೂ ಸಹ ವಿಐಎಸ್ ಎಲ್ ಸ್ಥಾಪನೆಯ ವರ್ಷದ ಅಂಗವಾಗಿ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ದಿನಾಂಕ ೧೮.೦೧.೨೦೨೬ ರಂದು ಮಾಲಾರ್ಪಣೆ ಮಾಡುವ ಮೂಲಕ ವಿ.ಐ.ಎಸ್.ಎಲ್‌ನ ಸಮುದಾಯವು ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿತು. ಶ್ರೀ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಕೆ.ಬಿ. ಮಲ್ಲಿಕಾರ್ಜುನ, ಅಧ್ಯಕ್ಷರು, ಕಾರ್ಮಿಕರ ಸಂಘ ಮತ್ತು ಶ್ರೀ ಅಜಯ್ ಸೋಂಕುವಾರ್, ಅಧ್ಯಕ್ಷರು, ಅಧಿಕಾರಿಗಳ ಸಂಘ ಇವರುಗಳು ವಿಐಎಸ್ ಎಲ್ ಆವರಣದೊಳಗಿರುವ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥಾಪಕರಾದ ಸರ್. ಎಮ್. ವಿಶ್ವೇಶ್ವರಾಯರವರಿಗೆ ತಮ್ಮ ನಮ್ರತೆಯ ಗೌರವ ವಂದನೆಗಳನ್ನು ಸಲ್ಲಿಸಿದರು.

ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಮಹಾಪ್ರಬಂಧಕ ಶ್ರೀ ನವೀನ್ ರಾಹುಲ್‌ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...