Thursday, March 19, 2026
Thursday, March 19, 2026

Makar Sankranti ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ.

Date:

Makar Sankranti ಪ್ರತಿ ವರ್ಷದಂತೆ ಈ ವರ್ಷವೂ ಕಿರ್ಲೋಸ್ಕರ್ ಫೆರೆಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ವತಿಯಿಂದ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಸಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು.

ಸಂಸ್ಥೆಯ ಕಾರ್ಖಾನೆಯ ಮುಂಭಾಗದಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನ’ದಲ್ಲಿ ಈ ಹಬ್ಬದ ಕಾರ್ಯಕ್ರಮವನ್ನು ದಿನಾಂಕ 17-01-2026 ರಂದು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಹರ್ಷೋಲ್ಲಾಸದಿಂದ ಆಯೋಜಿಸಲಾಗಿತ್ತು.
ಭಾರತೀಯ ಸಂಸ್ಕೃತಿಯಲ್ಲಿ ಸಂಕ್ರಾಂತಿ ಹಬ್ಬವು ಕೃಷಿ, ಪ್ರಕೃತಿ ಮತ್ತು ಮಾನವ ಸಂಬಂಧಗಳ ಮಹತ್ವವನ್ನು ಸಾರುವ ವಿಶೇಷ ಹಬ್ಬವಾಗಿದ್ದು, ಹೊಸ ಬೆಳೆ, ಹೊಸ ಆಶಯ ಮತ್ತು ಸಮೃದ್ಧಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಿರ್ಲೋಸ್ಕರ್ ಸಂಸ್ಥೆಯು ಪ್ರತಿವರ್ಷವೂ ಕುಟುಂಬ ಸದಸ್ಯರು ಸೇರಿ ಈ ಹಬ್ಬವನ್ನು ಆಚರಿಸುವ ಮೂಲಕ ಸಂಸ್ಕ್ರತಿ ಮತ್ತು ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುತ್ತಿದೆ.

ಈ ಸಂಭ್ರಮಾಚರಣೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಹಾಗೂ ಶ್ರೀಮತಿ ಕಮಲಾ ಗುಮಾಸ್ತೆ ಅವರು ಉಪಸ್ಥಿತರಿದ್ದು, ಉದ್ಯೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಆತ್ಮೀಯವಾಗಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು. ಆಡಳಿತ ಮಂಡಳಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಆರ್.ಎಸ್. ಶ್ರೀವತ್ಸನ್ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಘನತೆ ನೀಡಿದರು. ಜೊತೆಗೆ ಸಿಒಒ ಶ್ರೀ ಸಿ. ರಮೇಶ್ ಮತ್ತು ಕುಟುಂಬ, ಶ್ರೀ ಎಂ.ಜಿ. ನಾಗರಾಜ್ ಮತ್ತು ಕುಟುಂಬ, ಶ್ರೀ ಜಿ.ಎಸ್. ಕೃಷ್ಣಮೂರ್ತಿ ಮತ್ತು ಕುಟುಂಬ ಅವರುಗಳ ಉಪಸ್ಥಿತಿಯು ಕಾರ್ಯಕ್ರಮದ ವೈಭವವನ್ನು ಇನ್ನಷ್ಟು ಹೆಚ್ಚಿಸಿತು.

Makar Sankranti ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಶ್ರೀ ಶಿವಯ್ಯ ಸ್ವಾಮಿ ಅವರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ಆಯೋಜಿಸಲಾಗಿತ್ತು. ಹಬ್ಬದ ಮಹತ್ವವನ್ನು ಸಾರುವಂತೆ ಪರಂಪರೆಯ ಉಡುಪು, ಸಾಂಪ್ರದಾಯಿಕ ಅಲಂಕಾರ ಮತ್ತು ಹಬ್ಬದ ವಾತಾವರಣವನ್ನು ನಿರ್ಮಿಸಲಾಗಿದ್ದು, ಉದ್ಯಾನವನವು ಸಂಪೂರ್ಣವಾಗಿ ಹಬ್ಬದ ಕಳೆಗಟ್ಟಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಳ್ಳು-ಬೆಲ್ಲ ಹಂಚಿಕೆ ನಡೆಯಿತು. ‘ಎಳ್ಳು ಬೆಲ್ಲ ಉಂಡು ಒಳ್ಳೆ ಮಾತಾಡು’ ಎಂಬ ಸಂಪ್ರದಾಯದಂತೆ ಎಲ್ಲರೂ ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡು ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದರು. ಬಳಿಕ ಸಾಂಪ್ರದಾಯಿಕ ಹಬ್ಬದ ಭೋಜನವನ್ನು ಒಟ್ಟಾಗಿ ಆಸ್ವಾದಿಸುವ ಮೂಲಕ ಉದ್ಯೋಗಿಗಳು ಮತ್ತು ಕುಟುಂಬದ ಸದಸ್ಯರು ಸಂತಸದಿಂದ ಕಾಲ ಕಳೆಯಲಾಯಿತು.

ಈ ಸಂಕ್ರಾಂತಿ ಸಂಭ್ರಮಾಚರಣೆಯು ಕೇವಲ ಹಬ್ಬದ ಆಚರಣೆಯಷ್ಟೇ ಅಲ್ಲದೆ, ಸಂಸ್ಥೆಯೊಳಗಿನ ಮಾನವೀಯ ಸಂಬಂಧ, ಕುಟುಂಬ ವಾತಾವರಣ ಮತ್ತು ಸಂಸ್ಥೆಯ ಸಾಮಾಜಿಕ
ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿತ್ತು. ಇಂತಹ ಕಾರ್ಯಕ್ರಮಗಳು ಉದ್ಯೋಗಿಗಳ ಮನೋಬಲವನ್ನು ಹೆಚ್ಚಿಸುವುದರ ಜೊತೆಗೆ ಸಂಸ್ಥೆಯೊಂದಿಗಿನ ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ಒಟ್ಟಾರೆ, ಕಿರ್ಲೋಸ್ಕರ್ ಫೆರೆಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಕ್ರಾಂತಿ ಸಡಗರವು ಸಂಪ್ರದಾಯ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸುಂದರ ಸಂಗಮವಾಗಿ ಯಶಸ್ವಿಯಾಗಿ ನೆರವೇರಿತು.

ವರದಿ
ಮುರುಳೀಧರ್ ನಾಡಿಗೇರ್

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...