Thursday, March 19, 2026
Thursday, March 19, 2026

Shimoga News ಪರಿಸರ ನಾಶದ ವ್ಯಥೆಯೊಂದೇ ಅಲ್ಲ ಪರಿಸರ ಪ್ರೀತಿ ಕವಿತೆಯ ವಸ್ತುವಾಗಬೇಕು- ಡಾ.ಕೃಷ್ಣ ,ಎಸ್.ಭಟ್.

Date:

Shimoga News ಪರಿಸರ ನಾಸದ ಇಂದು ಅವ್ಯಾಹತ ನಡೆದಿದೆ. ವಾತಾವರಣ ಮಾಲಿನ್ಯದಿಂದಾಗಿ ನಿಸರ್ಗದ ನಿನಾದ ನಮ್ಮ ಕಿವಿಗಳಿಗೆ ಬೀಳುತ್ತಿಲ್ಲ. ಅಷ್ಟು ಭೀಕರ ಶಬ್ದ ಮಾಲಿನ್ಯವೂ ಆಗಿದೆ.
ಸಂಗೀತದ ಸಪ್ತಸ್ವರಗಳನ್ನ. ಮನುಷ್ಯ ನಿಸರ್ಗದ ಸೃಷ್ಟಿಯ ಪ್ರಾಣಿಪಕ್ಷಿಗಳಿಂದಲೇ ಆಯ್ಕೆ ಮಾಡಿದ. ಆದರೆ ಇಂದು ಅಂತಹ ನಿಸರ್ಗದ ಮೇಲೆ ಮನುಷ್ಯನ ಅತ್ಯಾಚಾರ ನಡೆದಿದೆ. ಇದು ವಿಷಾದನೀಯ ಎಂದು
ಡಾ.ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ
ಹಿರಿಯ ವೈದ್ಯಕೀಯ ಬರಹಗಾರ ಡಾ.ಕೃಷ್ಣ ಎಸ್ ಭಟ್ ಅಭಿಪ್ರಾಯ ಪಟ್ಟಿದ್ದಾರೆ.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಜನವರಿ 10 ರ ಶನಿವಾರ ಏರ್ಪಡಿಸಿದ್ದ
“ಪರಿಸರ ಪ್ರೀತಿ” ಕುರಿತ
ಕವಿಗೋಷ್ಠಿಯನ್ನ ಉದ್ಘಾಟಿಸಿ ಮಾತನಾಡುತ್ತಿದ್ದರು.
ಭಾರತೀಯ ಕವಿ ಕಾಳಿದಾಸನೇ ಜಗತ್ತಿನ ಶ್ರೇಷ್ಠಕವಿ. ಅಂತಹ ದೈತ್ಯ ಪ್ರತಿಭೆಯನ್ನ ಶೇಕ್ಸ್ಪಿಯರ್ ಗೆ ಹೋಲಿಸಿ ಹೇಳುವುದು
ಸರಿತೋರುವುದಿಲ್ಲ.
ಪಾಶ್ಚಾತ್ಯ ವಿಮರ್ಶಕರು
ಭಾರತೀಯ ಯುವ ಪೀಳಿಗೆಗೆ ಕವಿ ಕಾಳಿದಾಸ ಮತ್ತು ಪುನರ್ಜನ್ಮ ದ ಬಗ್ಗೆ ಮನವರಿಕೆ ಮಾಡಿಕೊಟ್ಟರೆ ಸಾಕು ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿವರ್ತನೆ ಸಹಜವಾಗಿಯೇ ಆಗುತ್ತದೆ ಎಂದು ಹೇಳೀದ್ದಾರೆ. ಇಂತಹ ಅಮೂಲ್ಯ ಕವಿಗಳ ಪರಂಪರೆಯೇ ನಮ್ಮಲ್ಲಿದೆ.ಅವರೆಲ್ಲರ ಪ್ರಾತಿನಿಧಿಕ ಅರಿವನ್ನ ಇಂದು ಉಂಟು ಮಾಡಬೇಕಿದೆ ಎಂದು ಡಾ.ಕೃಷ್ಣಭಟ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಈ ದಿಸೆಯಲ್ಲಿ ಭಾರತೀಯ ಸಾಹಿತ್ಯ,ಸಾಂಸ್ಕೃತಿಕ ಪರಂಪರೆಗಳ ಬಗ್ಗೆ ವಿವಿಧ ಚಟುವಟಿಕೆ ಹಮ್ಮಿಕೊಂಡಿರುವುದು
ಶ್ಲಾಘನೀಯ ಎಂದು ಹೇಳಿದರು.
Shimoga News ಶಿವಮೊಗ್ಗದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಾಖೆಯು
ಭಾರತೀಯ ತಮ್ಮತನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿದೆ. ಅದಕ್ಕೆ ಎಲಗಲರ ಪ್ರೋತ್ಸಾಹ ,ಸಹಕಾರಮತ್ತು ಸಕ್ರೀಯ ಭಾಗವಹಿಸುವಿಕೆಯೂ ಬೇಕಿದೆ ಎಂದರು ಅಭಾಸಾಪ ವಿಭಾಗೀಯ ಸಂಚಾಲಕ ಜಿ.ಹರ್ಷ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಂಪೂರ್ಣ ಸಾಮಾಜಿಕ,ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನ ಯುವ ಪೀಳಿಗೆಗೆ ನೆನಪಿಸುವ ಚಟುವಟಿಕೆಗಳು ನಡೆಯುತ್ತಿವೆ. ಅಭಿವ್ಯಕ್ತಿಗೆ ಪರಿಷತ್ತಿನ ಬಾಗಿಲು ಸದಾ ತೆರೆದಿದೆ.
ಕವಿಗೋಷ್ಠಿಯಲ್ಲಿ ಛಂದೋಬದ್ಧ ಕವಿತೆ ರಚಿಸಿ ಪ್ರಸ್ತುತಪಡಿಸಿದ
ಕೆಲವು ಕವಿಯತ್ರಿಯರ ಪ್ರಯತ್ನ ಸ್ವಾಗತಾರ್ಹ.
ಗೋಷ್ಠಿಯಲ್ಲಿನ ಕವಿತೆಗಳು ವಸ್ತುವಿನ ದೃಷ್ಟಿಯಿಂದ ಮೆಲುಕು ಹಾಕುವಂತಿವೆ ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ
ಅಭಾಸಾಪ ಅಧ್ಯಕ್ಷ ಡಾ.ಸುಧೀಂದ್ರ ಅವರು ಹೇಳಿದರು.
ಶೋತೃಗಳ ಪರವಾಗಿ ಉದ್ಯಮಿ ರಮೇಶ್ ಹೆಗಡೆ ಮಾತನಾಡಿ‌ ಭಾರತೀಯರಲ್ಲಿ ಅರ್ಥಶಾಸ್ತ್ರ, ಖಗೋಳ
ಗಣಿತ ಮುಂತಾದ ಕ್ಷೇತ್ರಗಳ ಪರಣಿತರು ಇದ್ದಾರೆ. ಅವರೆಲ್ಲರ ಬಗ್ಗೆ ನಮಗೆ ಹೆಮ್ಮೆ ಇರಬೇಕು ಎಂದರು.
ಹಿರಿಯ ಚಿಂತಕ ಮತ್ತು ಪರಿಸರವಾದಿ ಲಕ್ಷ್ಮೀನಾರಾಯಣ ಕಾಶಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕವಿಗೋಷ್ಠಿಯಲ್ಲಿ ಪುಟ್ಟಮ್ಮ ಶಿವಾನಿ, ಹಾಲಪ್ಪ. ಆರ್.ಕುಮಾರ್, ನಂದಾ ಪ್ರೇಮ್ ಕುಮಾರಿ, ಮಹಾಲಿಂಗಂ , ನರೇಂದ್ರ ಘೋರ್ಪಡೆ, ಸುಮನಾ ಮಂಜುನಾಥ್, ಮುಂತಾದವರು ಕವಿತಾವಾಚನ ಮಾಡಿದರು. ಡಾ.ಮುಕಂದ್ ನಿರೂಪಿಸಿದರು. ಜಯಶ್ರೀ ಗಣೇಶ್ ಪ್ರಾರ್ಥಿಸಿದರು.
ಸಹಕಾರ್ಯದರ್ಶಿ ಶಾಲಿನಿ‌ ಅಜಿತ್ ವಂದಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa “ಸಹ್ಯಾದ್ರಿ ಉತ್ಸವ” ಕ್ಕೆ ಸರ್ಕಾರವು ಮತ್ತೆ ಚಾಲನೆ ನೀಡಲು ಒತ್ತಾಯಿಸುತ್ತೇನೆ- ಶಾಸಕ ಎಸ್.ಎನ್. ಚನ್ನಬಸಪ್ಪ

S.N. Channabasappa ಶಿವಮೊಗ್ಗ ಜಿಲ್ಲೆಯ ಸಮೃದ್ಧ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು...

Madhu Bangarappa ಎಸ್ಎಸ್ಎಲ್ ಸಿ ಪರೀಕ್ಷಾರ್ಥಿಗಳಿಗೆ ಶುಭ ಹಾರೈಸಿದ ಸಚಿವ ಮಧು ಬಂಗಾರಪ್ಪ

Madhu Bangarappa ರಾಜ್ಯಾದ್ಯಂತ ಇಂದಿನಿಂದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1...

Jawahar Navodaya Vidyalaya ಕುಂದಗಸವಿಯ ಎಂ.ಎನ್.ಅಪೂರ್ವ ನವೋದಯ ವಿದ್ಯಾಲಯಕ್ಕೆ ಆಯ್ಕೆ

Jawahar Navodaya Vidyalaya ಜವಾಹರ ನವೋದಯ ವಿದ್ಯಾಲಯ ನಡೆಸುವ ಪ್ರಸಕ್ತ ಸಾಲಿನ...