Mcgann Hospital ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ ಇಲ್ಲಿ 2025-26 ನೇ ಸಾಲಿನಲ್ಲಿ ಕೆಇಎ ಮೂಲಕ ಎಲ್ಲಾ ಸುತ್ತಿನ ಸೀಟು ಹಂಚಿಕೆಯ ನಂತರ ಉಳಿಕೆಯಾಗಿರುವ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸಿನ ಸೀಟುಗಳನ್ನು ಭರ್ತಿ ಮಾಡಲಾಗುವುದು.
ಬಿಎಸ್‌ಸಿ ಮೆಡಿಕಲ್ ಲ್ಯಾಬೊರೇಟರಿ ಟೆಕ್ನಾಲಜಿ ರೆಗ್ಯುಲರ್ 05, ಲ್ಯಾಟರಲ್ 04 ಒಟ್ಟು 09. ಬಿಎಸ್‌ಸಿ ಆಪ್ಟೆಮೆಟ್ರಿ ರೆಗ್ಯುಲರ್ 20. ಬಿಎಸ್‌ಸಿ ರೀನಲ್ ಡಯಾಲಿಸಿಸ್ ಟೆಕ್ನಾಲಜಿ 10. ಬಿಎಸ್‌ಸಿ ರೆಸ್ಪರೇಟರಿ ಕೇರ್ ಟೆಕ್ನಾಲಜಿ 02. ಬಿಎಸ್‌ಸಿ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ರೆಗ್ಯುಲರ್ 02, ಲ್ಯಾಟರಲ್ 01 ಒಟ್ಟು 03 ಸೀಟುಗಳು ಲಭ್ಯವಿದೆ.
Mcgann Hospital ಜ.08 ರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 5 ಗಂಟೆವರೆಗೆ ವಾಕ್ ಇನ್ ಅಡ್ಮಿಷನ್‌ನ್ನು 2ನೇ ಫ್ಲೋರ್‌ನ ಕಮ್ಯುನಿಟಿ ಮೆಡಿಸಿನ್ ಲೆಕ್ಚರರ್ ಹಾಲ್, ಸಿಮ್ಸ್ ಶಿವಮೊಗ್ಗ ಇಲ್ಲಿ ನಿಗದಿಪಡಿಸಲಾಗಿದೆ. ಕೆಇಎ ನಲ್ಲಿ ನೋಂದಾಯಿತ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಭರ್ತಿ ಮಾಡಲಾಗುವುದು ಎಂದು ಸಿಮ್ಸ್ ನಿರ್ದೇಶಕರು ತಿಳಿಸಿದ್ದಾರೆ.
