S. N. Channabasappa ರೋಟರಿ ಪೂರ್ವ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೊತ್ಸವ ಸಮಾರಂಭವನ್ನು ದಿನಾಂಕ ೨೦-೧೨-೨೦೨೫ರಂದು ನಗರದ ಅಂಬೇಡ್ಕರ್ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಜನಪ್ರಿಯ ಶಾಸಕರಾದ ಶ್ರೀ ಎಸ್ ಎನ್ ಚನ್ನಬಸಪ್ಪ (ಚನ್ನಿ) ನವರು ವಾರ್ಷಿಕೊತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಶಾಲಾ ವಾರ್ಷಿಕೊತ್ಸವವು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಸಾಂಸ್ಕೃತಿಕ ಸಂಭ್ರಮಗಳ ಅನಾವರಣಕ್ಕೆ ಸೂಕ್ತವೇದಿಕೆಯೆಂದು, ರೋಟರಿ ಶಾಲೆಯು ಸುಮಾರು ೪೫ ವರ್ಷಗಳ ಹಿಂದಿನಿಂದಲೂ ನಗರದಲ್ಲಿ ಒಂದು ಪ್ರತಿಷ್ಟಿತ ಶಾಲೆಯಾಗಿದ್ದು, ಗುಣಮಟ್ಟದ ಶಿಕ್ಷಣ, ಮತ್ತು ಮೌಲ್ಯಯುತ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆಯೆಂದು,ಈ ಶಾಲೆಯಲ್ಲಿ ಪೊಷಕರಿಂದ ಯಾವುದೇ ರೀತಿಯ ಡೊನೇಷನ್ ತೆಗೆದುಕೊಳ್ಳದೆ ಇರುವುದು ಈ ಶಾಲೆಯ ವೆಶಿಷ್ಟÀ್ಟವಾಗಿದ್ದು ಇದರ ಸದುಪಯೋಗವನ್ನು ವಿದ್ಯಾರ್ಥಿಗಳ ಪೊಷಕರು ಪಡೆದುಕೊಳ್ಳಬೇಕೆಂದು ತಿಳಿಸುತ್ತಾ ಶಿಕ್ಷಣವು ಕೂಡ ಇಂದಿನ ದಿನಮಾನಸಗಳಲ್ಲಿ ಒಂದು ವಾಣಿಜ್ಯೋದ್ಯಮ ಹಂತಕ್ಕೆ ಬಂದಿದ್ದು ಈ ನಿಟ್ಟಿನಲ್ಲಿ ರೋಟರಿ ಆಂಗ್ಲ ಮಾದ್ಯಮ ಶಾಲೆಯು ನಗರದಲ್ಲಿ ಒಂದು ಮಾದರಿ ಶಾಲೆಯಾಗಿರುತ್ತದೆಂದು ತಿಳಿಸಿದರು. ಇದೇ ಸಂದAರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕೆಂದು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದ ಸ್ಚಚ್ಚತೆಯ ¨ಗ್ಗೆ ಗಮನ ನಿಡುವುದರ ಜೊತೆಗೆ ಪ್ಲಾಸ್ಟಿಕ್ ನ್ನು ಬಳಸದಂತೆ ಸಾರ್ವಜನಕರಿಗೆ ಅರಿವು ಮೂಡಿಸುವ ಮನೊಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು.
ಸಮಾರಂಭದ ಅದ್ಯಕ್ಷತೆಯನ್ನು ರೋಟರಿ ಪೂರ್ವ ಎಜುಕೇಶನಲ್ & ಛಾರಿಟಬಲ್ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ರೊ. ಶ್ರೀ ಕೆ ಬಿ ರವಿಶಂಕರ್ ವಹಿಸಿದ್ದು ಸಮಾರಂಭದಲ್ಲಿ ಹಾಜರಿದ್ದ ಪೋಷಕರನ್ನು ಕುರಿತು ಮಾತನಾಡುತ್ತಾ ಪ್ರತಿವರ್ಷದಂತೆ ಈ ವರ್ಷವೂ ಶಾಲಾ ವಾರ್ಷಿಕೊತ್ಸವ ಸಮಾರಂಭವನ್ನು ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗುತ್ತಿದ್ದು, ಶಾಲೆಯ ಸಾಂಸೃತಿಕ ವೈಭವನ್ನು ಪ್ರಕಟಿಸುವ ಶಾಲಾ ಹಬ್ಬ ಇದಾಗಿರುತ್ತದೆಂದು ತಿಳಿಸಿತ್ತಾ ಕಳೆದ ಎರಡು ವರ್ಷಗಳಿಂದಲು ಎಸ್ ಎಸ್ ಎಲ್ ಸಿಯಲ್ಲಿ ೧೦೦ ಕ್ಕೆ ೧೦೦ ಫಲಿತಾಂಶವು ಬರುತ್ತಿದ್ದು ಈ ಭಾರಿ ೧೦೦ ಕ್ಕೆ ೧೦೦ ಫಲಿತಾಂಶ ಬರಲು ಎಲ್ಲಾ ರೀತಿ ಕ್ರಮಗಳನ್ನು ಆಡಳಿತ ಮಂಡಳಿ ಈಗಾಗಲೇ ಕೈಗೊಂಡಿರುತ್ತದೆAದು ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೊಷಕರು ಕೂಡ ಹೆಚ್ಚಿನ ಗಮನವಹಿಸಬೇಕೆಂದು ಕರೆ ನೀಡಿದರು.
ಸಮಾರಂಭದ ಇನ್ನೊರ್ವ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶ್ರೀಯುತ ರಮೇಶ್ ಕ್ಷೇತ್ರ ಶಿಕ್ಷಾಣಾಧಿಕಾರಿಗಳು ಇವರು ಮಾತನಾಡುತ್ತಾ ಸಮಾರಂಭದ ಉದ್ಘಾಟನೆ ಮಾಡಿದ್ದ ಶಾಸಕರ ಅಭಿಪ್ರಾಯವನ್ನು ತಾವು ಕೂಡ ಅನುಮೊದಿಸುವುದಾಗಿ ಈ ಶಾಲೆಯಲ್ಲಿ ಯಾವುದೇ ರೀತಿಯ ಡೊನೇಷನ್ ಇಲ್ಲದೆ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುತ್ತಿರುವುದು ಈ ಶಾಲೆಯ ಹೆಗ್ಗಳಿಕೆ ಯಾಗಿರುತ್ತದೆಂದು ತಿಳಿಸುತ್ತಾ ಈಗಾಗಲೇ ಈ ಶೈಕ್ಷಣಿಕ ವರ್ಷದ ಮುಕ್ತಾಯ ಹಂತಕ್ಕೆ ಬಂದಿರುವ ಪ್ರಯುಕ್ತ ವಿದ್ಯಾರ್ಥಿಗಳೆಲ್ಲರೂ ತಮ್ಮ ಓದಿಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ಟ್ರಸ್ಟಿನ ಕಾರ್ಯದರ್ಶಿಯಾದ ರೊ. ಎಸ್ ಸಿ ರಾಮಚಂದ್ರರವರು ಮಾತನಾಡುತ್ತಾ ರೋಟರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಇರುವ ಶಿಕ್ಷಕರೆಲ್ಲರೂ ನುರಿತ ಮತ್ತು ಹೆಚ್ಚಿನ ಅನುಭವವುಳ್ಳವರಾಗಿದ್ದು ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದ್ದು ಮುಂಬರುವ ದಿನಗಳಲ್ಲಿ ಈ ಶಾಲೆಗೆ ಹೆಚ್ಚಿನ ಸಂಖೆಯಲ್ಲಿ ವಿದ್ಯಾರ್ಥಿಗಳು ದಾಖಲಾಗಲು ಹಾಜರಿರುವ ಪೊಷಕರೆಲ್ಲರು ಸಹಕರಿಸಬೇಕೆಂದು ಕರೆನೀಡಿದರು.
S. N. Channabasappa ಶಾಲೆಯ ಪ್ರಿನ್ಸಿಪಾಲ್ ಶ್ರೀ ಸೂರ್ಯನಾರಾಯಣ್ ಆರ್ ರವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸುತ್ತಾ ಈ ಶೈಕ್ಷಿಣಿಕ ವರ್ಷದಲ್ಲಿ ನಡೆಸಲಾದ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿಗಳನ್ನು ಸಭೆಯಲ್ಲಿ ಮಂಡಿಸುತ್ತಾ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಒತ್ತು ನೀಡಲಾಗಿದೆಯೆಂದು ತಿಳಿಸಿದರು.
ಸಮಾರಂಭದಲ್ಲಿ (ಜೆ.ಎನ್,ಎನ್,ಸಿ) ತಾಂತ್ರಿಕ ಕಾಲೇಜಿನ ಪ್ರೋಫೆಸರ್ ಶ್ರೀಯುತ ಸುನೀಲ್ ಎಮ್ ಡಿ ಯವರು ಪ್ರತಿ ವರ್ಷದಂತೆ ಈ ವರ್ಷವು ಶಾಲಾ ವಾರ್ಷಿಕೊತ್ಸವ ಸಮಾರಂಭದಲ್ಲಿ ಹಾಜರಿದ್ದು ಬಡಮಕ್ಕಳ ವಿದ್ಯಾರ್ಜೆನೆಗೆ ಅನುಕೂಲವಾಗುವಂತೆ ರೂ ೧೦,೦೦೦ ಗಳ ದೇಣಿಗೆಯನ್ನು ನೀಡಿ ಮಾತನಾಡುತ್ತಾ ತಾವು ಕೂಡ ರೋಟರಿ ಶಾಲೆಯಲ್ಲಿಯೇ ತಮ್ಮ ಹೈಸ್ಕೂಲ್‌ವರೆಗೆನ ವಿದ್ತಾರ್ಥಿ ಜೀವನವನ್ನು ಕಳೆದಿದ್ದು ಈ ಸಮಾರಂಭದಲ್ಲಿ ಬಾಗವಹಿಸುವುದು ತಮಗೆ ಹೆಮ್ಮೆಯ ವಿಷಯವೆಂದು ತಿಳಿಸುತ್ತಾ ಕಳೆದ ಬಾರಿ ಎಸ್ ಎಸ್ ಎಲ್ ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿ ಪ್ರೋತ್ಸಾಹಿಸಿದರು.
ಈ ಸಮಾರಂಭದಲ್ಲಿ ಉಪಾದ್ಯಕ್ಷರುಗಳಾದ ರೊ. ಶ್ರೀಮತಿ ನಾಗವೇಣಿ ಎಸ್ ಆರ್ ,ರೊ. ಸುರೇಶ್ ಕುಮಾರ್ ,ಖಜಾಂಚಿ ಮಂಜುನಾಥ ಎನ್ ಬಿ ಮತ್ತು ಜಂಟಿ ಕಾರ್ಯದರ್ಶಿಗಳಾದ ವಿಜಯ್ ಕುಮಾರ್ ಜಿ ,ಡಾ|| ಅರುಣ್ ಎಮ್ ಎಸ್ ರವರು ಹಾಜರಿದ್ದು, ವಿದ್ಯಾರ್ಥಿಗಳಿಗೆ ಹಿತವಚನ ನೀಡಿzರು ಮತ್ತು ಸಮಾರಂಭದಲ್ಲಿ ಟ್ರಸ್ಟಿಗಳಾದ ಪೇಟ್ರನ್ ಟ್ರಸ್ಟಿ ಕಡಿದಾಳ್ ಗೋಪಾಲ್, ಹೇಮಂತ್ ಎಮ್ ಸಿ, ಪ್ರವೀಶ್ ಡಿ ,ಚಂದ್ರಶೇಖರಯ್ಯ ಎಮ್, ಹಾಜರಿದ್ದು ಸಮಾರಂಭದ ಮೆರಗನ್ನು ಹೆಚ್ಚಿಸಿದರು. ಸಭಾಕಾರ್ಯ ಕ್ರಮದನಂತರ ಎಲ್ ಕೆ ಜಿ ಯಿಂದ ಹತ್ತನೆ ತರಗತಿಯ ವಿದ್ಯಾರ್ಥಿಗಳು ಮತ್ತು ಶಾಲೆಯ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರೆಲ್ಲರೂ ಸೇರಿ ವೈವಿದ್ಯಮಯ ಸಾಂಸೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಶಾಲಾ ಸಾಂಸೃತಿಕ ವೈಭªವÀನ್ನು ಅನಾವರಣಗೊಳಿಸಿದರು. ಸಮಾರಂಭದ ನಿರೂಪಣೆಯನ್ನು ಹರ್ಷಿತ ಸಹ ಶಿಕ್ಷಕಿ ನಡೆಸಿದ್ದು ಕೊನೆಯಲ್ಲಿ ದೀಪಿಕಾ ಪಿ ಸಹಶಿಕ್ಷಕಿ ಇವರ ವಂದನಾರ್ಪಣೆಯೊಂದಿಗೆ ಸಮಾರಂಭವನ್ನು ಮುಕ್ತಾಯವಾಯಿತು.
S. N. Channabasappa ಶಾಲಾ ವಾರ್ಷಿಕೋತ್ಸವ : ವಿದ್ಯಾರ್ಥಿಗಳ ಸುಪ್ತಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ- ಶಾಸಕ ಚನ್ನಬಸಪ್ಪ.
Date:
