Ayyappa Pindi ಸಾರ್ವಜನಿಕರ ಒಳಿತಿಗಾಗಿ, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದೇಶಾದ್ಯಂತ ಧ್ಯಾನ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಹೇಳಿದರು.
ವಿಶ್ವ ಧ್ಯಾನ ದಿನದ ಅಂಗವಾಗಿ ಪೆಸಿಟ್ ಕಾಲೇಜಿನ ಸಭಾಂಗಣದಲ್ಲಿ ಪಿಎಸ್‌ಎಸ್‌ಎಂ, ಪಿರಮಿಡ್ ವರ್ಲ್ಡ್ ಫೌಂಡೇಷನ್, ಪ್ರೇರಣಾ ಎಜುಕೇಷನಲ್ ಆಂಡ್ ಸೋಶಿಯಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ನಾದ ಧ್ಯಾನ ಚಕ್ರ 7 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಕಾರ್ಯಕ್ರಮದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಮುಖ್ಯ. ಧ್ಯಾನ ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದು ತಿಳಿಸಿದರು.
ಶಿವಮೊಗ್ಗ ನಾದ ಧ್ಯಾನ ಚಕ್ರ ಕಾರ್ಯಕ್ರಮ ನಡೆಸಲು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಉಚಿತವಾಗಿ ಪ್ರೇರಣಾ ಸಭಾಂಗಣ ನೀಡಿರುವುದು ವಿಶೇಷವಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಶಾಂತಲಾ ಸ್ಪೇರೋಕಾಸ್ಟ್ ಶಾಂತಲಾ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಡಿ.ಎಸ್.ಚಂದ್ರಶೇಖರ್ ದಂಪತಿಗೆ ಸನ್ಮಾನಿಸಲಾಯಿತು. ನಂತರ ಡಿ.ಎಸ್.ಚಂದ್ರಶೇಖರ್ ಮಾತನಾಡಿ, 25 ವರ್ಷದಿಂದ ಪ್ರಾಣಾಯಾಮ ಮಾಡುತ್ತಿದ್ದು, ವಿಶೇಷ ಅನುಭವ ನೀಡುತ್ತದೆ. ಧ್ಯಾನದಿಂದ ನಮ್ಮ ದೇಹದ ಪ್ರತಿಯೊಂದು ಅಂಗಾಂಗಗಳು ಆರೋಗ್ಯದಿಂದ ಇರುತ್ತವೆ. ಪ್ರತಿ ದಿನ 20 ನಿಮಿಷ ಧ್ಯಾನ ಮಾಡಬೇಕು ಎಂದು ತಿಳಿಸಿದರು.
Ayyappa Pindi ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಧ್ಯಾನದ ಅಭ್ಯಾಸದಿಂದ ಸದಾ ಲವಲವಿಕೆಯಿಂದ ಇರಲು ಸಾಧ್ಯ ಆಗುತ್ತದೆ ಎಂದರು.
ರಾಷ್ಟ್ರಮಟ್ಟದ ವಾದ್ಯಗಾರರು ಮೂರು ಗಂಟೆ ವಿಶೇಷ ಸಂಗೀತ ನುಡಿಸಿದರು. ಮಮತಾ ರುದ್ರೇಶ್, ಜಯಾ ಸುರೇಶ್, ನಾಗೇಂದ್ರ, ಶೋಭಾ ಶಿರೂರ, ಮಲ್ಲಿಕಾರ್ಜುನ, ಶ್ರೀಕಾಂತ, ವಿನಾಯಕ ಹೆಗಡೆ ಇತರರಿದ್ದರು.
Ayyappa Pindi ಧ್ಯಾನ ಕಾರ್ಯಕ್ರಮಕ್ಕೆ ಐದು ಸಾವಿರಕ್ಕೂ ಅಧಿಕ ಜನರಾಗಮನ. ಯಶಸ್ವಿ,ಅರ್ಥಪೂರ್ಣ- ಡಾ.ಅಯ್ಯಪ್ಪ ಪಿಂಡಿ
Date:
