Sunday, December 21, 2025
Sunday, December 21, 2025

KFDV Virus ಮಂಗನ ಕಾಯಿಲೆ ಶಾಶ್ವತ ಪರಿಹಾರಕ್ಕೆ ಕೇಂದ್ರ ಆರೋಗ್ಯ ಸಚಿವರಲ್ಲಿ ಸಂಸದ ಬಿ.ವೈ.ರಾಘವೇಂದ್ರ ಮನವಿ.

Date:

KFDV Virus ಮಲೆನಾಡು ಪ್ರದೇಶದ ರೈತರು, ಅರಣ್ಯವಾಸಿಗಳು ಹಾಗೂ ಗ್ರಾಮೀಣ ಸಮುದಾಯಗಳು ವರ್ಷಗಳಿಂದ ಎದುರಿಸುತ್ತಿರುವ “ಮಂಗನ ಕಾಯಿಲೆ (KFD)” ಎಂಬ ಗಂಭೀರ ಕಾಯಿಲೆಗೆ ಶಾಶ್ವತ ಮತ್ತು ವೈಜ್ಞಾನಿಕ ಪರಿಹಾರ ದೊರಕಬೇಕೆಂಬ ದೃಢ ನಿಲುವಿನೊಂದಿಗೆ, ಕೇಂದ್ರ ಆರೋಗ್ಯ ಸಚಿವರಾದ ಮಾನ್ಯ ಶ್ರೀ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಮಗ್ರ ಚರ್ಚೆ ನಡೆಸಲಾಯಿತು.

ಮಂಗನ ಕಾಯಿಲೆಯಿಂದ ಆಗುತ್ತಿರುವ ಜೀವ ಹಾನಿ ಹಾಗೂ ಜನಜೀವನದ ಮೇಲೆ ಬೀರುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಿ,
ಪರಿಣಾಮಕಾರಿ ಲಸಿಕೆ ಅಭಿವೃದ್ಧಿಗೆ ತ್ವರಿತ ಕ್ರಮ, ICMR ಹಾಗೂ NIV ಮೂಲಕ ಸಂಶೋಧನೆಗೆ ವೇಗ, ಶಿವಮೊಗ್ಗದಲ್ಲಿ NIV ಉಪ-ಕೇಂದ್ರ ಸ್ಥಾಪನೆ ಮತ್ತು ಪ್ರಾದೇಶಿಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸುವಿಕೆ ಕುರಿತು ಕೇಂದ್ರ ಸಚಿವರ ಗಮನಕ್ಕೆ ತರಲಾಗಿದೆ.

KFDV Virus ಮಲೆನಾಡಿನ ಜನರು ಇನ್ನು ಮುಂದೆ ಭಯದಲ್ಲಿ ಬದುಕುವ ಪರಿಸ್ಥಿತಿ ಬಾರದಂತೆ, “ಒಂದು ಆರೋಗ್ಯ” (One Health) ದೃಷ್ಟಿಕೋನದ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಸುವಂತೆ ಮನವಿ‌ ಸಲ್ಲಿಸಲಾಯಿತು.

ಮಂಗನ ಕಾಯಿಲೆ ನಿರ್ಮೂಲನೆಗೆ ಅಗತ್ಯವಾದ ವೈಜ್ಞಾನಿಕ ನೆರವು, ಆರ್ಥಿಕ ಬೆಂಬಲ ಹಾಗೂ ಎಲ್ಲಾ ಅಗತ್ಯ ಕ್ರಮಗಳನ್ನು ಅತ್ಯಂತ ಶೀಘ್ರವಾಗಿ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರದಿಂದ ಖಚಿತ ಭರವಸೆ ನೀಡಲಾಗಿದೆ. ಈ ಮಹತ್ವದ ವಿಷಯಕ್ಕೆ ತಕ್ಷಣ ಸ್ಪಂದಿಸಿ, ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸುವುದಾಗಿ ತಿಳಿಸಿದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವರಾದ ಮಾನ್ಯ ಶ್ರೀ ಜೆ.ಪಿ. ನಡ್ಡಾ ಅವರಿಗೆ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Kasturba Balika Pre-Graduate College ಶ್ರೀಮತಿ ರುಕ್ಸನಾ ಫಿರ್ದೋಸ್ ಖಾನಂ ಅವರಿಗೆ ಪಿ ಹೆಚ್ ಡಿ

Kasturba Balika Pre-Graduate College ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ...

Yakshagana prasanga ಎಲ್ಲರ ಗಮನ ಸೆಳೆದ ಮಕ್ಕಳ ಯಕ್ಷಗಾನ ಪ್ರಸಂಗ” ದ್ರುಪದ ಗರ್ವಭಂಗ”

Yakshagana prasanga ನಮ್ಮ ಭಾರತ ಸನಾತನ ಸಂಸ್ಕೃತಿಯ ನೆಲೆವೀಡು. ಭಗವಂತ ತನ್ನಲ್ಲಿನ...

Rudranna Harthikote ಆತಂಕ ಬೇಡ. ಸಕಾಲದಲ್ಲಿ ಮಾಹಿತಿ ಒದಗಿಸಿ- ರುದ್ರಣ್ಣ ಹರ್ತಿಕೋಟೆ.

Rudranna Harthikote ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ...