B. Y. Raghavendra ಶಿವಮೊಗ್ಗದ ಪಿಇಎಸ್ ಕ್ಯಾಂಪಸ್‌ನ ಪ್ರೇರಣಾ ಕನ್ವೆನ್ನನ್ ಹಾಲ್‌ನಲ್ಲಿ ಪಿಎಸ್‌ಎಸ್‌ಎಂ ಪಿರಮಿಡ್ ವಲ್ಡ್ ಫೌಂಡೇಷನ್ ಬೆಂಗಳೂರು, ಪ್ರೇರಣಾ ಎಜುಕೇಷನಲ್ ಅಂಡ್ ಸೋಶಿಯಲ್ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವಧ್ಯಾನ ದಿನದ ಅಂಗವಾಗಿ ಆಯೋಜಿಸಲಾದ “ಶಿವಮೊಗ್ಗ ನಾದ ಧ್ಯಾನ ಚಕ್ರ – 7” ಕಾರ್ಯಕ್ರಮವನ್ನು ಸಂಧ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಧ್ಯಾನ ತರಬೇತಿದಾರರಾದ ಡಾ.ಅಯ್ಯಪ್ಪ ಪಿಂಡಿ ಅವರು, ಯೋಗ ಹಾಗೂ ಧ್ಯಾನ ಶಿಕ್ಷಕರು, ಸಮಾಜಸೇವಕರು, ಸ್ಥಳೀಯ ನಾಯಕರು, ಯುವಜನರು ಮತ್ತು ನಾಗರಿಕರು ಉಪಸ್ಥಿತರಿದ್ದರು.
B. Y. Raghavendra ಧ್ಯಾನವು ಮಾನಸಿಕ ಆರೋಗ್ಯ, ಶಾಂತಿ ಮತ್ತು ಜೀವನದಲ್ಲಿ ಸಮತೋಲನವನ್ನು ತರುವ ಮಹತ್ವದ ಸಾಧನ. ವಿಶ್ವ ಧ್ಯಾನ ದಿನದ ಅಂಗವಾಗಿ ಎಲ್ಲರೂ ಧ್ಯಾನವನ್ನು ದಿನನಿತ್ಯದ ಬದುಕಿನ ಭಾಗವನ್ನಾಗಿ ಮಾಡಿಕೊಳ್ಳೋಣ ಎಂದು ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ಆತ್ಮೀಯ ಕರೆಕೊಟ್ಟರು.
